ಸಾಗರದ ರವೀ೦ದ್ರ ಪ್ರಕಾಶನದಲ್ಲಿ ಪ್ರಕಟಿಸಿದ ಕಾದಂಬರಿಗಳು ಪ್ರಸಿದ್ಧ ಚಲನ ಚಿತ್ರ ನಟರ ಸೂಪರ್ ಹಿಟ್ ಸಿನಿಮಾ ಆಗಿರುವ ಗರಿ ಪ್ರಕಾಶಕ ದಂತಿಯವರದ್ದು
#ದ್ವೀಪಾ
#ಗಿರಿಕನ್ಯೆ
#ಹುಲಿಹಾಲಿನಮೇವು_ಕಾಡಿನಬೆಂಕಿ_ಬಯಲುದಾರಿ_ಮುಂತಾದ_ಸಿನಿಮಾ_ಆದ_ಪುಸ್ತಕ_ಪ್ರಕಟಿಸಿದ್ದು_ಸಾಗರದ
#ರವೀಂದ್ರ_ಪುಸ್ತಕಾಲಯದ_ಯಲ್ಲಪ್ಪ_ಅಪ್ಪಾರಾವ್_ದಂತಿ.
ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ (1995-2000) ಸಾಗರದ ಲೋಕೋಪಯೋಗಿ ಸಹಾಯಕ ಕಾಯ೯ಪಾಲಕ ಅಭಿಯಂತರ ಕಛೇರಿಗೆ ಹೋದಾಗೆಲ್ಲ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಗರದ ಪ್ರಖ್ಯಾತ ಪ್ರಕಾಶಕರಾದ ದಂತಿಯವರನ್ನು ಮತ್ತು ಇವರ ಪಕ್ಕದ ಟೇಬಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಖ್ಯಾತ ಸಾಹಿತಿ ನಾ.ಡಿಸೋಜರನ್ನು ಮಾತಾಡಿಯೇ ಬರುತ್ತಿದ್ದ ಕಾಲವಾಗಿತ್ತು.
ಇಬ್ಬರೂ ಸಾಗರ ತಾಲ್ಲೂಕಿನ ಕಾರ್ಗಲ್ ನಿಂದಲೇ ವೃತ್ತಿ ಪ್ರಾರಂಬಿಸಿದವರು ನಾ.ಡಿಸೋಜ ಸಾಹಿತಿಯೂ ಆಗಿ ಪ್ರಸಿದ್ಧರಾದರೆ ದೂರದ ಅಥಣಿಯಿಂದ ಬಂದು ಇಲ್ಲಿ ಉದ್ಯೋಗದ ಜೊತೆ ರವೀ೦ದ್ರ ಪುಸ್ತಕಾಲಯದ ಹೆಸರಲ್ಲಿ ಪ್ರಕಾಶಕರಾಗಿ ಪ್ರಸಿದ್ಧರಾದರು.
ಇತ್ತೀಚೆಗೆ ನನಗೆ #ಗಜಾನನ_ಶರ್ಮಾರ ಪುಸ್ತಕ ಇವರಲ್ಲಿದೆ ಅಂತ ಗೆಳೆಯರು ಇವರ ಪೋನ್ ನಂಬರ್ ಗೆ ಪೋನಾಯಿಸಿದಾಗ ಇವರು ನನ್ನ ವಿಳಾಸ ಬರೆದು ಕೊಳ್ಳುವಾಗ ಪುನಃ ಸಂಬಂದ ಏರ್ಪಟ್ಟಿತು.
ಅವರ ಅಕೌಂಟ್ ಗೆ ಸುಮಾರು ಒಂದು ಸಾವಿರದ ನಾನೂರು ಕಳಿಸಲು ಅಕೌಂಟ್ ಮಾಹಿತಿಗೆ ಕಾಯುತ್ತಿದ್ದರೆ ಎಲ್ಲಾ ಪುಸ್ತಕ ಅಂಚೆಯಲ್ಲೇ ಕಳಿಸಿಬಿಟ್ಟಿದ್ದಾರೆ (ನಂಬಿಕೆ ದೊಡ್ಡದು) ನಂತರವೇ ಹಣ ಪಾವತಿಸಿದೆ.
ಕಾರ್ಗಲ್ ನಲ್ಲಿ 26 ಜನವರಿ 1965 ರಲ್ಲಿ ಅಂದರೆ ಸುಮಾರು 56 ವರ್ಷದ ಹಿಂದೆ ಖಾಸಾಗಿ ಲೈಬ್ರರಿ ಪ್ರಾರಂಬಿಸುತ್ತಾರೆ ಆಗ ಇವರು ಶರಾವತಿ ಪ್ರಾಜೆಕ್ಟ್ ನಲ್ಲಿ ಗುಮಸ್ತರಾಗಿ ಸೇರಿರುತ್ತಾರೆ.
ಈಗ ಸಾಗರ ಪೇಟೆಯ #ರವೀಂದ್ರ_ಪುಸ್ತಕಾಲಯ_ಚಾಮರಾಜಪೇಟೆ ಎಂದರೆ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತ, ಸಾಗರದ ನಗರ ಸಭಾ ಎದುರಿನ ಜೋಡಿ ಮಾರ್ಗದಲ್ಲಿ ಕಣ್ಣಿನ ವೈದ್ಯರು ಬರಹಗಾರರು ಆದ #ಮೋಹನ್_ಡಾಕ್ಟರ ಕ್ಲೀನಿಕ್ ಪಕ್ಕದಲ್ಲೇ ಇದ್ದಾರೆ.
ಪ್ರಚಾರ ಪ್ರಶಸ್ತಿ ಅಂದರೆ ಮಾರು ದೂರದಲ್ಲಿದ್ದರೂ ಕನ್ನಡ ಪುಸ್ತಕ ಪ್ರಿಯರಿಗೆ ಅತ್ಯುತ್ತಮ ಪುಸ್ತಕಗಳ ಪ್ರಕಾಶಕರಾಗಿ ಇವರ ಸಾಧನೆ ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ದೊಡ್ಡದು.
ಎಲೆ ಮರೆಯ ಕಾಯಿಯಂತ ಈ ಸಾದಕರಾದ ರವೀಂದ್ರ ಪುಸ್ತಕಾಲಯದ ಅಥಣಿ ಮೂಲದ ಈಗ ಸಾಗರ ವಾಸಿಗಳಾದ ಯಲ್ಲಪ್ಪ ಅಪ್ಪಾರಾವ್ ದಂತಿ ಬಗ್ಗೆ ತುಂಬಾ ಹೆಮ್ಮೆ ಅನ್ನಿಸುತ್ತದೆ.
ನೀವು ಅವರನ್ನು ಅವರ ಪುಸ್ತಕಾಲಯದಲ್ಲಿ ಬೇಟಿ ಮಾಡಬಹುದು ಅಥವ ಅವರಿಗೆ ಫೋನಾಯಿಸಿ ಶುಭ ಹಾರೈಸಿ ಪುಸ್ತಕ ಖರೀದಿಸಲೂ ಬಹುದು.
ಇವರ ಸೆಲ್ ನಂಬರ್ 9449587244.
Comments
Post a Comment