#ಹೆಗ್ಗೋಡಿನ_ಬಾಗಿಸತ್ಯನಾರಾಯಣರಿಂದ
ಹೆಗ್ಗೋಡಿನ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದ (1995-2000) ಭಾಗಿ ಸತ್ಯನಾರಾಯಣರ ಮನೆಗೆ ನಾನು ಮತ್ತು ಆಗಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಬೀಮನೇರಿ ಶಿವಪ್ಪ ಒಂದು ಸಂಜೆ ಹೋಗಿದ್ದೆವು.
ಲೋಕಾರೂಡಿ ಮಾತಾಡಿ ಹೋಗುವ ಉದ್ದೇಶವಾಗಿತ್ತು ಆ ಸಂದರ್ಭದಲ್ಲೇ ಅವರಿಗೆ ಪರಿಚಿತರೋರ್ವರು ಬಂದರು. ಅವರ ಬೇಟಿ ಉದ್ದೇಶ ಯಾವುದೋ ಕಾರಣಕ್ಕೆ ದೇಣಿಗೆಗಾಗಿ ರಶೀದಿ ಪುಸ್ತಕ ಮುಂದೆ ಮಾಡಿದರು.
ನಾನು ಇದನ್ನು ಮೌನವಾಗಿ ವೀಕ್ಷಿಸುತ್ತಿದ್ದೆ ಅಲ್ಲಿಯವರೆಗೆ ನಾನು ಈ ರೀತಿ ದೇಣಿಗೆ ಕೇಳಲು ಬಂದವರಿಗೆ ಪ್ರಶ್ನೆ ಹಾಕುವುದು, ನನ್ನ ದೇಣಿಗೆ ಹಣ ಸದ್ವಿನಿಯೋಗ ಆದೀತಾ ಎಂಬ ಅನುಮಾನ, ಹೀಗೆ ಬರುವವರೆಲ್ಲ ಎ೦ತವರೋ ? ಇತ್ಯಾದಿ ಭಾವನೆಯಲ್ಲೇ ಸ್ವಲ್ಪ ಜುಗ್ಗತನದಿಂದ ದೇಣಿಗೆ ನೀಡುವುದು ಅನುಮಾನ ಅನ್ನಿಸಿದರೆ ನಿಮ್ಮ ಸಂಸ್ಥೆಗೆ ನೇರ ಜಮ ಮಾಡುತ್ತೇನೆ ಅಂತ ತಿರಸ್ಕರಿಸುವ, ನನಗೇ ಅರಿವಿಗೆ ಬಾರದೇ ಕುಹಕ ಮನಸ್ಥಿತಿಯವನಾಗಿದ್ದೆ.
ರಶೀದಿ ಪುಸ್ತಕದೊಂದಿಗೆ ಒಳ ಹೋದ ಭಾಗಿಸತ್ಯನಾರಾಯಣರು ಒ0ದು ನೂರು ರೂಪಾಯಿ ತಂದು ಅವರ ಕೈಗೆ ಇಟ್ಟು "ಇವತ್ತು ನನಗೆ ಇಷ್ಟು ನೀಡಲು ಸಾಧ್ಯವಾಗಿದೆ ಸ್ವೀಕರಿಸಿ" ಅಂತ ನಯವಾಗಿ ವಿನಂತಿಸಿದರು, ದೇಣಿಗೆ ಪಡೆದವರು ಹೋದ ನಂತರ ಕೇಳಿದಾಗ ಅವರು ಹೇಳಿದ್ದು ಇದು ಅವರ ತಂದೆಯವರ ನಿರ್ಧೇಶನವನ್ನು ಇವರು ಪಾಲಿಸಿಕೊಂಡು ಬಂದಿದ್ದಂತೆ.
ಸಾರ್ವಜನಿಕ ಧಾರ್ಮಿಕ ಉದ್ದೇಶ ಒಳ್ಳೆಯದೇ ಆದರೆ ಇದರಲ್ಲಿ ಸದ್ವಿನಿಯೋಗ ಅಥವ ದುರ್ವಿನಿಯೋಗದ ಬಗ್ಗೆ ದಾನ ನೀಡುವವ ಪ್ರಶ್ನಿಸ ಭಾರದು ಮತ್ತು ಅನುಮಾನ ಪಡಬಾರದು ಏಕೆಂದರೆ ಬಂದವರು ಯಾರು ಯಾವ ಉದ್ದೇಶ ಅಂತ ಗೊತ್ತಾಗುವುದಿಲ್ಲ, ಒಳ್ಳೆಯವರೂ ಇರುತ್ತಾರೆ ಹಾಗೆ ಕೆಟ್ಟವರೂ ಇರುತ್ತಾರೆ ಇದರ ಮಧ್ಯ ಇದಾವುದು ಅರಿವಿರದ ಮುಗ್ದರೂ ಬಂದಿರುತ್ತಾರೆ ಆದ್ದರಿಂದ ಆಕ್ಷಣಕ್ಕೆ ಸರಿಯಾದ ಉದ್ದೇಶ ಅನ್ನಿಸಿದರೆ ಹೆಚ್ಚು ಕೊಡು, ಸರಿ ಅನ್ನಿಸದಿದ್ದರೂ ಕೊಡದೇ ಇರಬೇಡ ಸ್ವಲ್ಪವಾದರೂ ನೀಡಿ ಈ ರೀತಿ ಹೇಳು ಎಂದಿದ್ದರಂತೆ ಆ ಕ್ಷಣಕ್ಕೆ ನನ್ನ ಮೆದುಳಿನಲ್ಲಿದ್ದ ಬಹುಕಾಲದ ಪಾರ್ಮ್ಯಾಟ್ ಅಳಸಿ ಬಿಟ್ಟೆ.
ಈ ವಿಚಾರದಲ್ಲಿ ಬಾಗಿಸತ್ಯನಾರಾಯಣರ ತಂದೆಯವರು ಅವರ ಪುತ್ರ ಭಾಗಿಸತ್ಯನಾರಾಯಣರಿಗೆ ಬೋದಿಸಿದ ನೀತಿ ಪಾಠ ನನ್ನ ಜೀವನದಲ್ಲಿ ಅಳವಡಿಸಿಕೊಂಡು ಈ ವರೆಗೆ ಆಚರಿಸುತ್ತಾ ಬಂದಿದ್ದೇನೆ.
ಕೆಲವು ಘಟನೆ ಮತ್ತು ಸಂದಭ೯ಗಳು ನಮಗೆ ಜೀವನದ ಪಾಠ ಕಲಿಸುತ್ತದೆ ಒಳ್ಳೆಯದನ್ನು ಉಳಿಸಿ ಕೆಟ್ಟದ್ದನ್ನು ಬಿಡಲು ಇವು ಸಹಕಾರಿ ಹಾಗಾಗಿ ಯಾವುದೇ ದೇಣಿಗೆ ನೀಡುವ ಸಂದರ್ಭ ನನ್ನ ಮನ ಪಟದಲ್ಲಿ ಭಾಗಿಸತ್ಯನಾರಾಯಣರು ಗೋಚರಿಸುತ್ತಾರೆ ಅವರ ತಂದೆಯ ನೀತಿಪಾಠದೊಂದಿಗೆ
Comments
Post a Comment