Blog number 864. ಕನಾ೯ಟಕದ ಉಡುಪಿ ಜಿಲ್ಲೆಯ ಸಮಾಜವಾದಿ ಹೋರಾಟಗಾರ ಅನಿಲ್ ಹೆಗಡೆಯವರನ್ನು ಬಿಹಾರದಿಂದ ರಾಜ್ಯಸಭೆಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆಗಳು
#ಬೆಳಿಗ್ಗೆ_ಜಾರ್ಜ್_ಪನಾ೯೦ಡೀಸರ_ಉಲ್ಲೇಖಿಸಿ_ಪೋಸ್ಟ್_ಬರದ_ಸ್ವಲ್ಪ_ಸಮಯದಲ್ಲಿ #ಬೆಂಗಳೂರಿನ_ದಿವಾಕರ_ವಕೀಲರು_ಅನಿಲ್_ಹೆಗ್ಗಡೆ_ಬಿಹಾರದಿಂದ #ರಾಜ್ಯಸಬೆಗೆ_ನಾಮ_ಪತ್ರ_ಸಲ್ಲಿಸಿದ_ಸುದ್ದಿ_ತಿಳಿಸಿದರು. #ಪ್ರಚಾರ_ಅಧಿಕಾರ_ಬಯಸದ_ಸಂತನಂತ_ಬ್ರಹ್ಮಚಾರಿ_ಅನಿಲ್_ಹೆಗ್ಗಡೆ . #ಜಾಜ್೯_ಪರ್ನಾಂಡೀಸರ_ಜೊತೆ_ಕೊನೆಯವರೆಗೆ_ಅವರ_ಮನೆಯಲ್ಲೇ_ಇದ್ದವರು. #ಉಡುಪಿ_ಜಿಲ್ಲೆಯ_ಅನಿಲ್_ಹೆಗ್ಗಡೆ_ಬಿಹಾರದಿಂದ_ರಾಜ್ಯಸಬೆಗೆ_ಆಯ್ಕೆ_ಮಾಡುತ್ತಿರುವ_ಮುಖ್ಯಮಂತ್ರಿ_ನಿತೀಶ್_ಕುಮಾರ್. #ಸಾಮಾನ್ಯವಾಗಿ_ರಾಜ್ಯಸಬೆ_ಸೀಟು_ಮಾರಾಟವಾಗುವ_ಈ_ಕಾಲದಲ್ಲಿ. ಬೆಳಿಗ್ಗೆ ಬೆಂಗಳೂರಿನ ಪ್ರಸಿದ್ದ ವಕೀಲರಾದ ದಿವಾಕರ್ (ಈಗ ಆಮ್ ಆದ್ಮಿ ಸೇರಿದ್ದಾರೆ ಮೊದಲು ಮುಖ್ಯಮಂತ್ರಿ ಯಡೂರಪ್ಪರ ಸಲಹೆಗಾರರಾಗಿದ್ದರು) ಬಿಹಾರದಿಂದ ರಾಜ್ಯಸಭೆಯ ಮದ್ಯಂತರ ಚುನಾವಣೆಗೆ JDU ಪಾರ್ಟಿ ಅನಿಲ್ ಹೆಗ್ಗಡೆಗೆ ಅವಕಾಶ ನೀಡಿದೆ ಇವತ್ತು ನಾಮಪತ್ರ ಸಲ್ಲಿಸಲಿದ್ದಾರೆ ಪಲಿತಾಂಶ ಇದೇ ತಿಂಗಳ 30 ಅಂತ ತಿಳಿಸಿದಾಗ ನನಗೆ ತುಂಬಾ ಸಂತೋಷ ಆಯಿತು. 1999 ರಿಂದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಮುಖಾಂತರ ದೆಹಲಿಯ ಜಾರ್ಜ್ ಪನಾ೯೦ಡಿಸರ ಮನೇನಲ್ಲಿ ಅನಿಲ್ ಹೆಗಡೆ ಪರಿಚಯ ನಂತರ ಅನೇಕ ಬಾರಿ ದೆಹಲಿಗೆ ಶಿವಮೊಗ್ಗ - ತಾಳಗುಪ್ಪ ರೈಲ್ವೆ ಬ್ರಾಡ್ ಗೇಜ್ ಕಾಮಗಾರಿ ಒತ್ತಾಯಿಸಿ, ಸಾಗರ ರೈಲು ನಿಲ್ದಾಣ ಡಾ.ರಾಮಮನೋಹರ ಲೋಹಿಯಾ ನಾಮಕರಣ ಒತ್ತಾಯಿಸಿ...