Blog number 864. ಕನಾ೯ಟಕದ ಉಡುಪಿ ಜಿಲ್ಲೆಯ ಸಮಾಜವಾದಿ ಹೋರಾಟಗಾರ ಅನಿಲ್ ಹೆಗಡೆಯವರನ್ನು ಬಿಹಾರದಿಂದ ರಾಜ್ಯಸಭೆಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆಗಳು
#ಬೆಂಗಳೂರಿನ_ದಿವಾಕರ_ವಕೀಲರು_ಅನಿಲ್_ಹೆಗ್ಗಡೆ_ಬಿಹಾರದಿಂದ
#ರಾಜ್ಯಸಬೆಗೆ_ನಾಮ_ಪತ್ರ_ಸಲ್ಲಿಸಿದ_ಸುದ್ದಿ_ತಿಳಿಸಿದರು.
#ಪ್ರಚಾರ_ಅಧಿಕಾರ_ಬಯಸದ_ಸಂತನಂತ_ಬ್ರಹ್ಮಚಾರಿ_ಅನಿಲ್_ಹೆಗ್ಗಡೆ .
#ಜಾಜ್೯_ಪರ್ನಾಂಡೀಸರ_ಜೊತೆ_ಕೊನೆಯವರೆಗೆ_ಅವರ_ಮನೆಯಲ್ಲೇ_ಇದ್ದವರು.
#ಉಡುಪಿ_ಜಿಲ್ಲೆಯ_ಅನಿಲ್_ಹೆಗ್ಗಡೆ_ಬಿಹಾರದಿಂದ_ರಾಜ್ಯಸಬೆಗೆ_ಆಯ್ಕೆ_ಮಾಡುತ್ತಿರುವ_ಮುಖ್ಯಮಂತ್ರಿ_ನಿತೀಶ್_ಕುಮಾರ್.
#ಸಾಮಾನ್ಯವಾಗಿ_ರಾಜ್ಯಸಬೆ_ಸೀಟು_ಮಾರಾಟವಾಗುವ_ಈ_ಕಾಲದಲ್ಲಿ.
ಬೆಳಿಗ್ಗೆ ಬೆಂಗಳೂರಿನ ಪ್ರಸಿದ್ದ ವಕೀಲರಾದ ದಿವಾಕರ್ (ಈಗ ಆಮ್ ಆದ್ಮಿ ಸೇರಿದ್ದಾರೆ ಮೊದಲು ಮುಖ್ಯಮಂತ್ರಿ ಯಡೂರಪ್ಪರ ಸಲಹೆಗಾರರಾಗಿದ್ದರು) ಬಿಹಾರದಿಂದ ರಾಜ್ಯಸಭೆಯ ಮದ್ಯಂತರ ಚುನಾವಣೆಗೆ JDU ಪಾರ್ಟಿ ಅನಿಲ್ ಹೆಗ್ಗಡೆಗೆ ಅವಕಾಶ ನೀಡಿದೆ ಇವತ್ತು ನಾಮಪತ್ರ ಸಲ್ಲಿಸಲಿದ್ದಾರೆ ಪಲಿತಾಂಶ ಇದೇ ತಿಂಗಳ 30 ಅಂತ ತಿಳಿಸಿದಾಗ ನನಗೆ ತುಂಬಾ ಸಂತೋಷ ಆಯಿತು.
1999 ರಿಂದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಮುಖಾಂತರ ದೆಹಲಿಯ ಜಾರ್ಜ್ ಪನಾ೯೦ಡಿಸರ ಮನೇನಲ್ಲಿ ಅನಿಲ್ ಹೆಗಡೆ ಪರಿಚಯ ನಂತರ ಅನೇಕ ಬಾರಿ ದೆಹಲಿಗೆ ಶಿವಮೊಗ್ಗ - ತಾಳಗುಪ್ಪ ರೈಲ್ವೆ ಬ್ರಾಡ್ ಗೇಜ್ ಕಾಮಗಾರಿ ಒತ್ತಾಯಿಸಿ, ಸಾಗರ ರೈಲು ನಿಲ್ದಾಣ ಡಾ.ರಾಮಮನೋಹರ ಲೋಹಿಯಾ ನಾಮಕರಣ ಒತ್ತಾಯಿಸಿ ನಾವು ನಿಯೋಗ ಹೋದಾಗೆಲ್ಲ ದೆಹಲಿಯಲ್ಲಿ ಅನಿಲ್ ಹೆಗಡೆ ಸಹಕಾರ ಪಡೆಯುತ್ತಿದ್ದೆವು.
2002ರಲ್ಲಿ ಪರ್ನಾಂಡಿಸ್ ರ ಸಮತಾ ಪಾರ್ಟಿಗೆ ಸೇರಿ ಕನಾ೯ಟಕ ಸಂಘಟನೆ ಪ್ರಾರಂಬಿಸಿದಾಗ ನನ್ನನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಮಾಡಿದ್ದು ಅನಿಲ್ ಹೆಗಡೆ ನಂತರ ಸಮತಾ ಪಾರ್ಟಿ ಸಂಯುಕ್ತ ಜನತಾದಳವಾದಾಗಲೂ ನನ್ನ ರಾಜ್ಯ ಪ್ರದಾನ ಕಾಯ೯ದಶಿ೯ ಮಾಡಿದ್ದರು.
ಆಗ ನಾನು ಬೆಂಗಳೂರಿನ ರಾಯಲ್ ಲಾಡ್ಜ್ ಖಾಯ೦ ವಾಸಿ ಆಗೆಲ್ಲ ದೆಹಲಿಯಿಂದಲೋ, ಗೋವಾದಿಂದಲೋ, ಕೇರಳದಿಂದಲೋ ಬೆಂಗಳೂರಿಗೆ ಬಂದವರು ನನ್ನ ರೂಮಿಗೆ ಬರುತ್ತಿದ್ದರು ಅವರ ಖಾದಿ ಬಟ್ಟೆ ಲಾಂಡ್ರಿ ಹಣ ತಾವೇ ಕೊಡಬೇಕೆಂಬ ಹಠ ಅವರಿಗೆ ಆದರೆ ನಾವು ಅವರ ಮೇಲಿನ ಪ್ರೀತಿಯಿಂದ ಬಿಡುತ್ತಿರಲಿಲ್ಲ.
ದೆಹಲಿಯಲ್ಲಿ ಸುಮಾರು ಹತ್ತು ವರ್ಷ ಒಂದು ದಿನವೂ ತಪ್ಪದೆ ಕೋಕೋ ಕೋಲಾ ಮತ್ತು ಪೆಪ್ಸಿ ವಿದೇಶಿ ಪಾನಿಯ ವಿರುದ್ದ ಇವರ ಮೆರವಣಿಗೆ ಪಾರ್ಲಿಮೆಂಟ್ ಕಡೆ ಹೋಗುವುದು ಅಲ್ಲಿ ಜಂತರ್ ಮಂತರ್ ಪೋಲಿಸ್ ಠಾಣೆ ಪೋಲಿಸರು ಬಂಧಿಸುವುದು ನಂತರ ಬಿಡುಗಡೆ ಮಾಡುವುದು ಈ ಚಳವಳಿ 10 ವಷ೯ನಿರಂತರ ನಡೆದದ್ದು ಒಂದು ದಾಖಲೆ.
ಅನೇಕ ಬಾರಿ ನಾನು ಇವರ ಈ ಚಳವಳಿಯಲ್ಲಿ ಭಾಗವಹಿಸಿ ದೆಹಲಿಯ ಜಂತರ್ ಮಂತರ್ ಪೋಲಿಸರಿಂದ ರಸ್ತಗಿರಿ ಆಗಿದ್ದು ಅನುಭವದ ನೆನಪುಗಳು.
ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆದ ಮೇಲೆ ಬಿಹಾರದ JDU ಪಕ್ಷ ಮತ್ತು ಚುನಾವಣಾ ಕಮಿಷನ್ ಜೊತೆ ಸಂಪರ್ಕದ ಜವಾಬ್ದಾರಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ JDU ರಾಜ್ಯ ಸಭಾ ಸದಸ್ಯರಾದ ಕಿಂಗ್ ಮಹೇಂದರ್ (ಶಾಲಾ ಶಿಕ್ಷಕರು ನಂತರ ಪಾರ್ಮಾ ಕಂಪನಿಗಳ ಸ್ಥಾಪಿಸಿ ಅತ್ಯಂತ ಶ್ರೀಮಂತರಾದ್ದರಿಂದ ಕಿಂಗ್ ಹೆಸರು) ನಿಧನರಾಗಿ ಖಾಲಿ ಆದ ಸ್ಥಾನಕ್ಕೆ ಅವರ ಸಹೋದರ ಮತ್ತು JDU ರಾಷ್ಟ್ರ ಪ್ರದಾನ ಕಾರ್ಯದರ್ಶಿ ತ್ಯಾಗಿ ಹೆಸರು ಮುನ್ನಲೆಯಲ್ಲಿತ್ತು ಆದರೆ ಯಾರೂ ನಿರೀಕ್ಷೆ ಮಾಡದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನಿಲ್ ಹೆಗಡೆ ಹೆಸರು ಅಂತಿಮ ಮಾಡಿದ್ದಾರೆ.
ಹಣ - ಅಧಿಕಾರ -ಖ್ಯಾತಿಯ - ಪ್ರಚಾರದಿಂದ ದೂರ ಇರುವ ಕನಾ೯ಟಕದ ಉಡುಪಿ ಜಿಲ್ಲೆ ಮೂಲದ ಅನಿಲ್ ಹೆಗಡೆ ಎಂಬ ಅತ್ಯಂತ ಬುದ್ಧಿವಂತ ಪ್ರಾಮಾಣಿಕ ಕಾರ್ಯಕರ್ತನ ಪಾರ್ಲಿಮೆಂಟಿಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆ ಸಲ್ಲಿಸಲೇ ಬೇಕು ಮತ್ತು ಜಾರ್ಜ್ ಪನಾ೯ಂಡಿಸರನ್ನು ಈ ಮೂಲಕ ಗೌರವಿಸಿದಂತೆ.
ಇದೇ ಬಿಹಾರ ರಾಜ್ಯ ಕರ್ನಾಟಕದ ಮಂಗಳೂರಿನ ಮೂಲದ ಜಾರ್ಜರನ್ನು ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದಾಗಲೇ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದು. ನಂತರ ಬಿಹಾರ ರಾಜ್ಯ ಅವರ ರಾಜಕೀಯ ಕರ್ಮಭೂಮಿಯೇ ಆಯಿತು.
ಅನಿಲ್ ಹೆಗಡೆ ಉಡುಪಿ ಜಿಲ್ಲೆಯಲ್ಲಿನ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಪುರಾತನ ಬೀಜದ ತಳಿ ಸಂರಕ್ಷಣೆಯ ಕೆಲಸ ಪ್ರಾರಂಬಿಸಿದ್ದಾರೆ, ಮಲೆನಾಡು ಗಿಡ್ಡ ದನಗಳ ಖರೀದಿಸಿ ಪಶು ಸಂಗೋಪನೆ ಮಾಡುವ ಬಗ್ಗೆ ಪೋನಾಯಿಸಿದ್ದರು.
Comments
Post a Comment