ಆನಂದಪುರಂ ಇತಿಹಾಸ ಭಾಗ_6.ತಿರುಮಲಾಚಾರ್ ಗಣ್ಯ ಗುತ್ತಿಗೆದಾರರು,ಆನಂದಪುರಂನ ವಿಲೇಜ್ ಪಂಚಾಯತ್ ಅಧ್ಯಕ್ಷರು ಆಗಿದ್ದರು.ರಾಮಕೃಷ್ಣ ಆಯ್ಯಂಗಾರರ ಪ್ರೇರಣೆಯಿಂದ ಗೊರೂರಿನಿಂದ ಆನಂದಪುರಕ್ಕೆ ಬಂದ ಕುಟುಂಬದವರು. ಆ ಕಾಲದಲ್ಲಿ ಲಾರಿ_ ರಾಜದೂತ್ ಬೈಕ್ ಹೊಂದಿದ್ದ ಏಕೈಕ PWD ಗುತ್ತಿಗೆದಾರರು.
#ತಿರುಮಲಾಚಾರ್_ಗಣ್ಯ_ಗುತ್ತಿಗೆದಾರರು_ಆನಂದಪುರಂನ_ವಿಲೇಜ್_ಪಂಚಾಯತ್_ಅಧ್ಯಕ್ಷರು_ಆಗಿದ್ದರು.
#ರಾಮಕೃಷ್ಣ_ಆಯ್ಯಂಗಾರರ_ಪ್ರೇರಣೆಯಿಂದ_ಗೊರೂರಿನಿಂದ_ಆನಂದಪುರಕ್ಕೆ_ಬಂದ_ಕುಟುಂಬದವರು.
#ಆ_ಕಾಲದಲ್ಲಿ_ಲಾರಿ_ರಾಜದೂತ್_ಬೈಕ್_ಹೊಂದಿದ್ದ_ಏಕೈಕ_PWD_ಗುತ್ತಿಗೆದಾರರು
ಇನಾಂದಾರರು, ಆನಂದಪುರಂ ನ ಏಕೈಕ ರೈಸ್ ಮಿಲ್ ಮಾಲಿಕರು ಹಾಗೂ ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರರ ಮೂಲ ಕುಟುಂಬಗಳು ಹಾಸನ ಜಿಲ್ಲೆಯ ಗೊರೂರಿನವರು, ಇವರೆಲ್ಲ ಮದ್ರಾಸ್ ನ ಅಯ್ಯಂಗಾರರು.
ಇವರೆಲ್ಲ ಮದ್ರಾಸ್ ನಿಂದ ಹಾಸನದ ಗೊರೂರಿಗೆ ಬಂದ ಕಾರಣ ಗೊತ್ತಾಗಲಿಲ್ಲ, ಅಲ್ಲಿನ ಅಯ್ಯಂಗಾರರಿಂದಲೇ ಇವತ್ತು ಅಯ್ಯಂಗಾರ್ ಬೇಕರಿಗಳು ಪ್ರಸಿದ್ಧಿ ಆಗಿದೆ.
ರಾಮಕೃಷ್ಣ ಆಯ್ಯಂಗಾರ್ ರು ತಮ್ಮ ರೈಸ್ ಮಿಲ್ ಇತ್ಯಾದಿ ವ್ಯವಹಾರ ನೋಡಿಕೊಳ್ಳಲು ಗೊರೂರಿನಿಂದ ಶ್ರೀನಿವಾಸ ಅಯ್ಯಂಗಾರ್ ಮತ್ತು ಅವರ ಪತ್ನಿ ಶ್ರೀರಂಗಮ್ಮ ದಂಪತಿಗಳನ್ನು ಕರೆತರುತ್ತಾರೆ, ಇವರ ಜೊತೆ ರೈಲ್ವೆ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರ ಸಹೋದರ ಚೆಲುವಯ್ಯಂಗಾರ್ ಕುಟುಂಬ ಮತ್ತು ಇವರ ಅಣ್ಣನ ಮಗ ತಿರುಮಲಾಚಾರ್ ಕುಟುಂಬ ಕೂಡ ಆನಂದಪುರಂ ಗೆ ಬಂದು ನೆಲೆಸುತ್ತದೆ.
ಶ್ರೀನಿವಾಸಯ್ಯಂಗಾರ್ ಮತ್ತು ಶ್ರೀರಂಗಂ ದಂಪತಿಗಳಿಗೆ ವರದರಾಜ್, ತಿರುಮಲಾಚಾರ್, ರಂಗರಾಜನ್, ದಶರಾಶಿ ಎಂಬ ನಾಲ್ಕು ಗಂಡು ಮಕ್ಕಳು ಮತ್ತು ಆನಂದಮ್ಮ ಎಂಬ ಏಕೈಕ ಪುತ್ರಿ ಆಗುತ್ತದೆ.
ಎಲ್ಲರೂ ಆನಂದಪುರದಲ್ಲಿ ಪ್ರಾಥಮಿಕ ಶಿಕ್ಷಣ ಮಾಡುತ್ತಾರೆ, ಮೊದಲ ಪುತ್ರ ವರದರಾಜ್ ಮುಂದೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನಲ್ಲಿ ಉಪನ್ಯಾಸಕರಾಗುತ್ತಾರೆ, ಮೂರನೆ ಪುತ್ರ ರಾಂಚಿಯಲ್ಲಿ ಸೈಲ್ ಕಬ್ಬಿಣ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಾರೆ, ಕೊನೆಯ ಪುತ್ರ ಕುವೈತ್ ನಲ್ಲಿ ಇಂಜಿನಿಯರ್ ಆಗಿ ಉದ್ಯೋಗ ಮಾಡಿದರೆ ಎರಡನೆಯ ತಿರುಮಲಾಚಾರ್ ಇಂಜಿನಿಯರಿಂಗ್ ಮಾಡಿ ಆನಂದಪುರದಲ್ಲೇ ನೆಲೆಸಿ PWD ಗುತ್ತಿಗೆದಾರರಾಗಿ ಜೀವನ ಮಾಡುತ್ತಾರೆ, ಕೃಷಿ ಹೈನು ಗಾರಿಕೆ ಕೂಡ ಮಾಡುತ್ತಾರೆ.
ಒ0ದು ಅವಧಿಗೆ ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗುತ್ತಾರೆ ಆಗ ಇಬ್ರಾಹಿಂ ಸಾಹೇಬರು (ಈಗಿನ ಸಾಗರದ ಟಿಪ್ ಟಾಪ್ ಲಾಡ್ಜ್ ಮಾಲಿಕರು) ಉಪಾಧ್ಯಕ್ಷರಾಗುತ್ತಾರೆ ಆಗ ನಮ್ಮ ತಂದೆ ಕೃಷ್ಣಪ್ಪ, ಆಗಿನ ಸೈಕಲ್ ಶಾಪ್ ಮಾಲಿಕರಾದ ಸಿರಿಲ್ ಡಿಕಾಸ್ಟ. ಬಾಲ ಗಂಗಾದರ ಗೌಡರು, ಕರುಣಾಕರ್, ಶಾಂತಮ್ಮ ಮುಂತಾದವರು ಸದಸ್ಯರು.
ತಿರುಮಲಾಚಾರ್ ಅಯ್ಯಂಗಾರರಿಗೆ ಶ್ರೀದರ್, ಮಾಲಿನಿ, ನೀಲಾದೇವಿ, ಸುಂದರ್, ಬಾರತಿ ಮತ್ತು ಜಯಶ್ರೀ ಎಂಬ ಮಕ್ಕಳು. ಇವರಲ್ಲಿ ಶ್ರೀದರ್ ಇಂಜಿನಿಯರ್ ಆಗಿ ಚಕ್ರಾ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದರು ಈಗ ಇನ್ನೊವ೯ ಪುತ್ರ ಸುಂದರ್ ಬೆಂಗಳೂರಲ್ಲಿ ನೆಲೆಸಿದ್ದಾರೆ, ಸುಂದರ್ ಅತ್ಯುತ್ತಮ ಬಾಲ್ ಬಾಡ್ಮಿಂಟನ್ ಕ್ರೀಡಾಪಟು ಆಗಿದ್ದರು.
ತಿರುಮಲಾಚಾರ್ ರಾಜದೂತ್ ಬೈಕ್ ಇಡೀ ಆನಂದಪುರಂ ನ ಎಕೈಕ ಬೈಕ್ ಆಗಿತ್ತು, ಇವರು ತಮ್ಮ ಕಂಟ್ರಾಕ್ಟ್ ಕೆಲಸಕ್ಕೆ ಸಾಮಾಗ್ರಿ ಸಾಗಾಣಿಕೆಗೆ ಆಕಾಲದಲ್ಲಿ ಶ್ರೀನಿವಾಸ ಹೆಸರಿನ ಡಾಡ್ಜ್ ಲಾರಿ ಹೊಂದಿದ್ದರು. ಆ ಕಾಲದಲ್ಲಿ ಆನಂದಪುರಂ ನಲ್ಲಿ ಲಾರಿ ಮಾಲಿಕರೆಂದರೆ ಫೋಸ್ಟ್ ಈರಣ್ಣರ ತಂದೆಯವರದ್ದು, ಬಸವನ ಬೀದಿ ಶಿವರಾಜ್ ತಂದೆಯವರದ್ದು, ಪೋಲಿಸ್ ಸ್ಟೇಷನ್ ಪಕ್ಕದ ಸಂಗಣ್ಣರ ತಂದೆಯದ್ದು, ಪ್ರಭು ಡಾಕ್ಟರ್ ತಂದೆ ಮಾದವ ಪ್ರಭುಗಳದ್ದು, ಈಗಿನ ಹಿರಿಯರಕದಲ್ಲಿ ನೆಲೆಸಿರುವ ಯೋಮಕೇಶಪ್ಪ ಗೌಡರದ್ದು ನಂತರ ಈಗಿನ ದುಗಾ೯ ಗ್ಯಾರೇಜ್ ರಮೇಶರ ತಂದೆ ಅಚ್ಯುತಾಚಾರ್ ಮತ್ತು ಗುತ್ತಿಗೆದಾರರಾದ ಕೊಲ್ಲಾ ಬೋವಿಯವರು ಲಾರಿ ಮಾಲಿಕರಾಗಿದ್ದು ಆನಂದಪುರದ ಇತಿಹಾಸ.
ತರಿಕೆರೆ ಭಾಗದಲ್ಲಿ ಬದರಿನಾರಾಯಣ್ ಅಯ್ಯಂಗಾರರ ಕುಟುಂಬ ನೀರಾವರಿ ಜಮೀನು ಹೊಂದಿದ್ದರು, ಭದ್ರಾ ಜಲಾಶಯ ನಿರ್ಮಾಣ ಆಗುವಾಗ ತಿರುಮಲಾಚರ್ ತರಿಕೆರೆ ಭಾಗದಲ್ಲಿ ನೀರಾವರಿ ಚಾನಲ್ ಗುತ್ತಿಗೆ ಕೆಲಸ ಮಾಡುತ್ತಾರೆ ನಂತರ ಸಾಗರ ಭಾಗದಲ್ಲಿ ರಸ್ತೆ, ಮೋರಿ ಇತ್ಯಾದಿ ಕೆಲಸ ನಿರ್ವಹಿಸಲು ತರಿಕೆರೆಯಲ್ಲಿ ನೆಲೆಸಿದ್ದ ಆಂಧ್ರ ಮೂಲದ ಕೆಲಸಗಾರರ ಕ್ಯಾಂಪ್ ಆನಂದಪುರಕ್ಕೆ ಕರೆ ತರುತ್ತಾರೆ ಅದರಲ್ಲಿ ನಂತರ ಆನಂದಪುರಂ ಭಾಗದಲ್ಲಿ ಪ್ರಖ್ಯಾತ ಗುತ್ತಿಗೆದಾರ ಲಾರಿ ಮಾಲಿಕರಾದ ಕೊಲ್ಲಾ ಬೋವಿಯವರ ತಂದೆ ಆ ಕ್ಯಾಂಪ್ ಮುಖಂಡರಾಗಿದ್ದು ತಿರುಮಲಾಚಾರ್ ಎಲ್ಲಾ ಗುತ್ತಿಗೆ ಕೆಲಸದ ಉಸ್ತುವಾರಿ ಮೇಸ್ತ್ರಿ ಆಗಿ ಕೆಲಸ ಮಾಡುತ್ತಾರೆ.
ಕೊಲ್ಲಾ ಬೋವಿಯವರ ಮಗ ಚಂದ್ರ ಕುಮಾರ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆಗುತ್ತಾರೆ.
ತಿರುಮಲಾಚಾರ್ ದೇಶಭಕ್ತರು, ದೈವಭಕ್ತರು ಮತ್ತು ಸಾತ್ವಿಕರು ಇವರು ನಿರ್ಮಿಸಿದ ಕೆರೆಕಟ್ಟೆ, ಮೊರಿಗಳು ಈಗಲೂ ಸುಸಜ್ಜಿತವಾಗಿದೆ ಅಂದರೆ ಆ ಕಾಲದ ಗುತ್ತಿಗೆ ದಾರರ ಗುಣಮಟ್ಟದ ಕೆಲಸಕ್ಕೆ ಸಾಕ್ಷಿ, ಅಷ್ಟು ದೊಡ್ಡ ಗುತ್ತಿಗೆದಾರರಾದರೂ ಆಸ್ತಿ ಮನೆ ಮಾಡಲಿಲ್ಲ ಆದರೆ ಈ ಭಾಗದಲ್ಲಿ ಒಳ್ಳೇ ಹೆಸರು ಮಾಡಿದರು.
ತಿರುಮಲಾಚಾರ್ ಇಹಲೋಕ ತ್ಯಜಿಸಿದ್ದಾರೆ,ಇವರ ಕುಟುಂಬದವರು ಈಗ ಯಾರು ಆನಂದಪುರಂ ನಲ್ಲಿ ಇಲ್ಲ, ಎಲ್ಲಾ ಬೆಂಗಳೂರಲ್ಲಿ ನೆಲೆಸಿದ್ದಾರೆ.
(ನಾಳೆ ಮುಂದಿನ ಭಾಗ - 7)
Comments
Post a Comment