Blog number 878, ನಮ್ಮ ಸುರಕ್ಷತೆಗಾಗಿ ಗ್ಯಾಸ್ ಪೈಪ್ ಲೈನ್ ಮಾಡಿಸಿ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯ ಹೊರಗೆ ಅಳವಡಿಸಲು ಸೂಕ್ತ ವ್ಯಕ್ತಿ ಶಿವಮೊಗ್ಗದ ಮೊಹಮ್ಮದ್ ವಾಸಿಂ, ಮನೆ- ಹೋಟೆಲ್ - ಕಲ್ಯಾಣ ಮಂಟಪ - ಆಹಾರ ಉದ್ಯಮ ಇದನ್ನು ಅಳವಡಿಸಿಕೊಳ್ಳಬೇಕು.
#ಹೋಟೆಲ್_ಮತ್ತು_ಗೃಹಬಳಕೆಗೆ_ಎಲ್_ಪಿ_ಜಿ_ಗ್ಯಾಸ್_ಪೈಪ್_ಲೈನ್_ಅತ್ಯುತ್ತಮವಾಗಿ_ಅಳವಡಿಸಿಕೊಡುತ್ತಾರೆ.
#ಇದರಿಂದ_ನೂರಕ್ಕೆ_ನೂರು_ಗ್ಯಾಸ್_ಅವಘಡ_ತಡೆಯಬಹುದು.
#ಆಹಾರ_ಉದ್ಯಮ_ಕಲ್ಯಾಣಮಂಟಪ_ಹೋಟೆಲ್_ಮತ್ತು_ಮನೆಗೂ_ಅಳವಡಿಸಿಕೊಳ್ಳುವುದು_ಉತ್ತಮ.
ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ನೇರವಾಗಿ ಅಡುಗೆ ಮನೆಯ ಒಳಗೆ ತಂದು ಒಲೆಗೆ ಅಳವಡಿಸಿ ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆದರೆ, ಗ್ಯಾಸ್ ಪೈಪ್ ಒಡೆದರೆ, ಅಡುಗೆ ಉಕ್ಕಿ ಬನ೯ರ್ ಬೆಂಕಿ ನಂದಿದರೆ,ಮರೆತು ಗ್ಯಾಸ್ ಆಫ್ ಮಾಡದಿದ್ದರೆ ಲೀಕಾದ ಗ್ಯಾಸ್ ಎಲೆಕ್ಟ್ರಿಕ್ ಸ್ವಿಚ್ ಆನ್ ಮಾಡಿದರೆ ಅಥವ ಯಾವುದೇ ರೀತಿಯ ಬೆಂಕಿ ಕಿಡಿಯಿಂದ ಅಗ್ನಿ ಅವಘಡಗಳು ಸಂಭವಿಸಿದರೆ ಆಗ ಒಳಗಿರುವ ಗ್ಯಾಸ್ ಸಿಲಿಂಡರ್ ಸೇರಿ ದೊಡ್ಡ ಅಗ್ನಿ ದುರಂತ ಶತಸಿದ್ದ .
ಹೋಟೆಲ್ ಗಳಲ್ಲಿ, ಪಾಸ್ಟ್ ಫುಡ್ ಗಳಲ್ಲಿ, ಆಹಾರ ಉತ್ಪನ್ನ ಕೈಗಾರಿಕೆಯಲ್ಲಿ ಹೆಚ್ಚು ಪ್ರೆಶರ್ ನಲ್ಲಿ ಗ್ಯಾಸ್ ಒಲೆ ಬಳಸುವುದರಿಂದ ಯಾವುದೇ ಕಾರಣಕ್ಕೂ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯಲ್ಲಿ ಇಡುವುದು ಅಪಾಯ.
2012ರಲ್ಲಿ ನಾನು ನನ್ನ ಕಲ್ಯಾಣ ಮಂಟಪ, ಮಲ್ಲಿಕಾ ವೆಜ್ ಮತ್ತು ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ತೀರ್ಮಾನಿಸಿ ಒಬ್ಬರಿಗೆ ಗುತ್ತಿಗೆ ಕೊಟ್ಟೆ ಆದರೆ ಅವರ ಅನನುಭವಿ ಕೆಲಸ ನನಗೆ ತೃಪ್ತಿ ತರಲಿಲ್ಲ.
ಮುಂಬೈನ ನನ್ನ ಗೆಳೆಯರ ತಂಡ ಬಂದು ಅದನ್ನು ತೆಗೆದು ಹೊಸ ಪೈಪ್ ಲೈನ್ ಅಳವಡಿಸಿ ಸರಿಪಡಿಸಿದರು. ಆದರೆ ಅಷ್ಟು ದೂರದಿಂದ ಕಾಲಕಾಲಕ್ಕೆ ಬಂದು ದುರಸ್ತಿ ಇತ್ಯಾದಿ ಅವರಿಗೆ ಸಾಧ್ಯವಿಲ್ಲದ ಸಮಯದಲ್ಲಿ ನನ್ನ ಮತ್ತು ವಾಸಿಂ ಸಾಹೇಬರ ಸಂಪರ್ಕ ಆಯಿತು.
ನ್ಯಾಮತಿ ಮೂಲದ ಇವರ ತಂದೆ ತಾಯಿ ವ್ಯವಹಾರಕ್ಕಾಗಿ ಸಾಗರದಲ್ಲಿ ನೆಲೆಸುತ್ತಾರೆ, ಇವರ ತಂದೆ ಮೊಹಮ್ಮದ್ ಇಬ್ರಾಹಿಂ ಸಾಹೇಬರು ಸಾಗರದ ಪ್ರಥಮ ಶುಂಠಿ ವ್ಯಾಪಾರಸ್ಥರು ಎಂದರೆ ತಪ್ಪಾಗಲಾರದು, ಆಗ ಜವಾರಿ ಶುಂಠಿ ಖರೀದಿಸಿ ಒಣ ಶುಂಠಿ ಮಾಡಿ ಕೇರಳಕ್ಕೆ ಅವರು ರವಾನಿಸುತ್ತಿದ್ದರು, ಇವರ ಸಹೋದರರ ಕುಟುಂಬಗಳು ಈಗಲೂ ಶುಂಠಿ ಟ್ರೇಡಿಂಗ್ ನಲ್ಲಿದ್ದಾರೆ.
ಒಣ ಶುಂಠಿ ಕೇರಳಕ್ಕೆ ಮಾರಾಟಕ್ಕೆ ಕಳಿಸಲು ಆಗ ಅರಣ್ಯ ಇಲಾಖೆಯಿಂದ ಪರ್ಮಿಟ್ ಬೇಕಿತ್ತಂತೆ ಅಂತಹ 1950ರ ಪರ್ಮಿಟ್ ಪ್ರತಿ ಇವರು ಕಾಪಿಟ್ಟಿದ್ದಾರೆ.
ನಂತರ ಆಯನೂರಿಗೆ ಹೋಗಿ ನೆಲೆಸಿದ ಈ ಕುಟುಂಬ ತಮ್ಮ ಮಕ್ಕಳ ಉತ್ತಮ ವಿದ್ಯಾಬ್ಯಾಸದ ಕಾರಣದಿಂದ ಶಿವಮೊಗ್ಗದ ಗಾಡಿ ಕೊಪ್ಪದಲ್ಲಿ 5 ಎಕರೆ ಜಮೀನು ಖರೀದಿಸಿ ಅದರಲ್ಲಿ ಗೋಪಿ ಸುಣ್ಣ ತಯಾರಿಸುವ ಕೈಗಾರಿಕೆ ಪ್ರಾರಂಭಿಸುತ್ತಾರೆ.
ಈಗ ಇವರ ಜಮೀನಿನ ಹೆಚ್ಚಿನ ಭಾಗ ಸರ್ಕಾರದ ಕೆಲ ಯೋಜನೆಗಾಗಿ ಕಳೆದುಕೊಂಡರೂ ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲುಕೊಳದ ವೃತ್ತದಲ್ಲಿ ಉಳಿದಿರುವ ಜಾಗದ ಬೆಲೆ ಹಲವು ಕೋಟಿ ಮೌಲ್ಯದ್ದು.
ಇವರ ಕುಟುಂಬದಲ್ಲಿ ಎಲ್ಲರೂ ವಿದ್ಯಾವಂತರು, ಒಬ್ಬ ಸಹೋದರ ದೆಹಲಿಯಲ್ಲಿ ಪ್ರೋಪೆಸರ್ ಕೂಡ ಆಗಿದ್ದಾರೆ.
ವಾಸಿಂ ಶಿವಮೊಗ್ಗದಲ್ಲಿ ದೊಡ್ಲಾ ಹಾಲಿನ ಅಧಿಕೃತ ಡೀಲರ್ ಮತ್ತು ಗ್ಯಾಸ್ ಪೈಪ್ ಲೈನ್ ಅಳವಡಿಸುವುದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವರಂತಹ ಇನ್ನೊಬ್ಬರು ನನಗೆ ಸಿಕ್ಕಿಲ್ಲ.
ನನ್ನ ಮತ್ತು ನನ್ನ ಸಹೋದರನ ಮನೆ 2015ರಲ್ಲಿ ನಿರ್ಮಿಸಿದ ನೂತನ ಮನೆಗಳಿಗೂ ಗ್ಯಾಸ್ ಪೈಪ್ ಲೈನ್ ಇವರೇ ಮಾಡಿದ್ದಾರೆ, ಗ್ಯಾಸ್ ಸಿಲಿಂಡರ್ ಗಳು ಅಡುಗೆ ಮನೆಯಲ್ಲಿ ಇಡಬೇಕಾಗಿಲ್ಲ.
ಈಗಿನ LPG ಸಿಲೆಂಡರ್ ಗಳು ಸಾಕಾಣಿಕೆಯಲ್ಲಿ ಎಲ್ಲೆಲ್ಲೊ ಬಿದ್ದು ಕೊಳೆ ಅಂಟಿಸಿಕೊಂಡು ಕುಲಷಿತವಾಗಿ ಬರುವುದು ಅಡುಗೆ ಮನೆಯಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಅಲ್ಲವೇ ಅಲ್ಲ.
ಇವತ್ತು ಒಂದು ವಷ೯ದಿಂದ ಕೊರಾನ ಕಾರಣದಿಂದ ನಿಂತಿದ್ದ ನನ್ನ ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಪುನಾರಂಭಗೊಳಿಸಲು ಗ್ಯಾಸ್ ಪೈಪ್ ಲೈನ್ ಮತ್ತು ಒಲೆಗಳ ಸರ್ವಿಸ್ ಗಾಗಿ ಇವರನ್ನು ಕರಿಸಿದ್ದೆ.
Comments
Post a Comment