ಆನಂದಪುರಂ ಇತಿಹಾಸ ಭಾಗ - 10. ಎರಡನೇ ವಿದಾನ ಸಭಾ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರನ್ನು ಸೋಲಿಸಿ ಶಾಸಕರಾದ ಬದರಿನಾರಾಯಣ ಅಯ್ಯಂಗಾರ್ ಗೆಲುವಿಗೆ ಚಾಣಕ್ಯ ತಂತ್ರ ಮಾಡಿದ ಅವರ ಅಣ್ಣ ವೆಂಕಟಾಚಲ ಅಯ್ಯಂಗಾರ್, ತುಂಬೆ ಸುಬ್ರಾವ್ ತಂಡ
#ಎರಡನೆ_ವಿಧಾನಸಭಾ_ಚುನಾವಣೆಯಲ್ಲಿ_ಬದರಿನಾರಾಯಣಅಯ್ಯಂಗಾರ್_ಗೆಲವು
#ಮೊದಲ_ಮಹಾಚುನಾವಣೆಯಲ್ಲಿ_ಗೆದ್ದಿದ್ದ_ಶಾಂತವೇರಿ ಗೋಪಾಲಗೌಡರ_ಸೋಲು
#ಕಾಂಗ್ರೇಸ್_ಸಮಾಜವಾದಿ_ಹೋರಾಟ
#ನಿಣಾ೯ಯಕ_ದೀವರ_ಮತಗಳು_ಗೋಪಾಲಗೌಡರಿಗೆ_ಸಿಗದಂತೆ_ಮಾಡಿದ_ಆ_ಘಟನೆ.
1952 ರ ಮೊದಲ ಮಹಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಸೇರಿ ಒಂದು ವಿದಾನ ಸಭಾ ಕ್ಷೇತ್ರವಾಗಿತ್ತು ಈ ಕ್ಷೇತ್ರದಿಂದ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರ ಪುತ್ರ ಸ್ವಾತಂತ್ರ್ಯ ಹೋರಾಟಗಾರ, ಶಿವಮೊಗ್ಗ ನ್ಯಾಯಾಲಯದ ಖ್ಯಾತ ವಕೀಲ ಯುವಕ ಬದರಿನಾರಾಯಣ ಅಯ್ಯಂಗಾರ್ ಕಾಂಗ್ರೇಸ್ ನಿಂದ ಸ್ಪರ್ದಿಸಿದಾಗ ಅವರ ವಿರುದ್ದ ಆಗಷ್ಟೇ ಇಡೀ ರಾಷ್ಟ್ರದ ಗಮನ ಸೆಳೆದ "ಉಳುವವನೇ ಹೊಲದೊಡೆಯ " ಎಂಬ ಘೋಷಣೆಯೊಂದಿಗೆ ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪನವರು ಪ್ರಾರಂಬಿಸಿದ ಕಾಗೋಡು ರೈತ ಹೋರಾಟವನ್ನು ಮುನ್ನಡಿಸಿ ಅದರಲ್ಲಿ ರಾಷ್ಟ್ರೀಯ ನಾಯಕರಾದ ರಾಮ ಮನೋಹರ ಲೋಹಿಯಾ ಭಾಗವಹಿಸುವಂತೆ ಮಾಡಿದ ನಂತರ ಲೋಕಮಾನ್ಯ ಜಯಪ್ರಕಾಶ್ ನಾರಾಯಣರು ಬಂದು ಬೆಂಬಲಿಸುವಂತೆ ರಾಷ್ಟ್ರೀಯ ಸಮಾಜವಾದಿ ಆಯಮ ನೀಡಿದ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿ ಬದರಿನಾರಾಯಣರನ್ನು ಸೋಲಿಸಿದ್ದು ಇದರಿಂದ ಅಘಾತಕ್ಕೆ ಒಳಗಾದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣ ಹೊಂದಿದ್ದು ಅಯ್ಯಂಗಾರರ ಕುಟುಂಬಕ್ಕೆ ಮತ್ತು ಕಾಂಗ್ರೇಸ್ ಪಕ್ಷಕ್ಕೆ ದೊಡ್ಡ ಆಘಾತ ಆಗಿತ್ತು.
ಮೊದಲ ಚುನಾವಣಾ ಸೋಲು ಮತ್ತು ತಂದೆಯ ಸಾವಿಂದ ಬದರಿನಾರಾಯಣರು ವಿಚಲಿತರಾಗಿದ್ದು ಸಹಜವಾಗಿದ್ದರೂ ಅಯ್ಯಂಗಾರರ ಕುಟುಂಬದ ಯಜಮಾನಿಕೆ ಅನಿವಾರ್ಯವಾಗಿ ಹೊತ್ತುಕೊಂಡ ಅವರ ಸಹೋದರ ವೆಂಕಟಚಲ ಅಯ್ಯಂಗಾರರು ಮಾತ್ರ ಚುನಾವಣಾ ಸೋಲು ಪ್ರತಿಷ್ಟೆ ಆಗಿ ತೆಗೆದುಕೊಂಡರು.
1957 ರಲ್ಲಿ ಪುನಃ ಎರಡನೇ ವಿಧಾನ ಸಭೆ ಚುನಾವಣೆ ಘೋಷಣೆ ಆಯಿತು, ತಮ್ಮ ಮೊದಲ ಶಾಸನ ಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುವಂತೆ ತಮ್ಮ ವಾಗ್ಜರಿಯಿಂದ ಚರ್ಚೆ, ಶಾಸನ ರಚನೆಗೆ ಕಾರಣರಾದ ಶಾಂತವೇರಿ ಗೋಪಾಲಗೌಡರು ಅನೇಕ ಚಳವಳಿಗಳನ್ನು ನಡೆಸಿ ಪ್ರಖ್ಯಾತರಾಗಿದ್ದರಿಂದ ಎರಡನೇ ಅವಧಿಗೂ ಅವರ ಗೆಲುವು ನಿಶ್ಚಯ ಎಂಬಂತಾಗಿತ್ತು.
ಆದರೆ ವೆಂಕಟಾಚಲ ಅಯ್ಯಂಗಾರರು ಶಾಂತವೇರಿ ಗೋಪಾಲ ಗೌಡರ ಗೆಲುವಿಗೆ ಕಾರಣ ಆಗಿದ್ದ ದೀವರ ಸಮಾಜದ ಓಟು ಬ್ಯಾಂಕ್ ಒಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದರು, ಇದಕ್ಕಾಗಿ ಈ ಕ್ಷೇತ್ರದ ಜಮೀನ್ದಾರರ ಸಂಘಟನೆ ಕೂಡ ಗುಪ್ತವಾಗಿ ಮಾಡುತ್ತಾರೆ ಈ ಕೆಲಸಕ್ಕೆ ಆ ಕಾಲದ ಚಾಣಕ್ಕರಾದ ಸಾಗರ ಎಡಜಿಗಳೇ ಮನೆ ಸಮೀಪದ ತುಂಬೆ ಸುಬ್ರಾಯ ಹೆಗಡೆಯವರ ಮತ್ತು ತಾಳಗುಪ್ಪದ ಮೂಗಿಮನೆ ಹೆಗ್ಗಡೆಯವರ ಹೆಚ್ಚಿನ ಬೆಂಬಲ ಪಡೆಯುತ್ತಾರೆ.
ದೀವರ ಸಮಾಜಕ್ಕೆ ಸೇರಿದ್ದ ಹೊಸನಗರ ತೀಥ೯ಹಳ್ಳಿ ಭಾಗದ ಶ್ರೀಮಂತ ರೈತರ ಮತ್ತು ಅಯ್ಯಂಗಾರರ ಕುಟುಂಬದ ಜೊತೆ ಹಿಂದಿನಿಂದ ಹಣದ ವ್ಯವಹಾರ ಇರುತ್ತದೆ ಆಗೆಲ್ಲ ಬ್ಯಾಂಕ್ ಸೊಸೈಟಿಗಳು ಸಾಲ ನೀಡುತ್ತಿರಲಿಲ್ಲ ಆದರೆ ಆಯಾ ಕುಟುಂಬದ ಅಭಿವೃದ್ದಿಗೆ ಬೇಕಾದ ಸಾಲ ನೀಡಿ ಬಡ್ಡಿಯೊಂದಿಗೆ ವಾಪಾಸ್ ಪಡೆಯುವ ಶ್ರೀಮಂತ ಜಮೀನ್ದಾರರೇ ಆಗಿನ ಬ್ಯಾಂಕ್ ಆಗಿದ್ದರು.
ಅಡಿಕೆ ತೋಟ ಹಾಕಲು, ಬಾವಿ ತೆಗೆಯಲು, ಮನೆ ಕಟ್ಟಲು, ಮದುವೆಗೆ ಹೀಗೆ ಸಾಲ ಪಡೆದು ತೀರಿಸುತ್ತಿದ್ದ ದೀವರ ಸಮಾಜದ ಮುಖಂಡರು ಆನಂದಪುರದ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರರು ತಮ್ಮ ಪುತ್ರ ಮೊದಲ ಚುನಾವಣೆಯಲ್ಲಿ ಸೋತಾಗ ಅಘಾತದಿಂದ ಮೃತರಾದ ಅನುಕಂಪವನ್ನು ಮತಗಳಾಗಿ ಪರಿವತಿ೯ಸುವ ಕೆಲಸ ವೆಂಕಟಾಚಲ ಆಯ್ಯಂಗಾರರ ತಂಡ ಯಶಸ್ವಿ ಆಗಿ ನೆರವೇರಿಸಿತು.
ಖ್ಯಾತ ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು ಬರೆದ #ಕಾಗೋಡು_ಹೋರಾಟದ_ರೂವಾರಿ ಎಂಬ ಹೆಚ್.ಗಣಪತಿಯಪ್ಪರ ಆತ್ಮಚರಿತ್ರೆಯಲ್ಲಿ ಒ0ದು ಘಟನೆ ಉಲ್ಲೇಖಿಸಿದ್ದಾರೆ ಅದರಲ್ಲಿ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಸಮೀಪದ ಕೊಡಸೆಯಲ್ಲಿ ನಡೆಯುವ ಮದಲೆ ಚೌಡಿ ಹಬ್ಬದಲ್ಲಿ 50- 60 ಕುರಿ ಬಾಡು ಊಟದ ಔತಣದಲ್ಲಿ ಸಾವಿರಾರು ಜನ ದರ್ಮಸ್ಥಳದ ದೇವರ ಮೇಲೆ ಆಣೆ ಮಾಡಿ ಬದರಿನಾರಾಯಣ ಅಯ್ಯಂಗಾರರಿಗೆ ಮತ ನೀಡುವ ಪ್ರಮಾಣ ವಚನ ಪಡೆಯುತ್ತಾರೆ ಇದು ಒಂದು ಸಂಘಟಿತ ಗೇಣಿದಾರ ದೀವರ ಮತಗಳನ್ನು ಒಡೆದು ಸಮಾಜವಾದಿ ಪಾರ್ಟಿಯ ಗೋಪಾಲಗೌಡರ ಸೋಲಿಗೆ ಕಾಂಗ್ರೇಸ್ ಪಕ್ಷದ ಬದರಿನಾರಾಯಣ್ ಅಯ್ಯಂಗಾರರ ಗೆಲುವಿಗೆ ಕಾರಣ ಆಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಬದರಿನಾರಾಯಣ್ ಅಯ್ಯಂಗಾರ್ ಜೊತೆ ಒಂದಾಗಿದ್ದ ಹೆಚ್. ಗಣಪತಿಯಪ್ಪನವರು ಅನಿವಾಯ೯ವಾಗಿ ತಮ್ಮ ಕಾಗೋಡು ಹೋರಾಟದಲ್ಲಿ ಜೊತೆ ಇದ್ದ ಶಾಂತವೇರಿ ಗೋಪಾಲಗೌಡರ ಪರವಾಗಿ ಈ ಎರೆಡೂ ಚುನಾವಣೆಯಲ್ಲಿ ಬದರಿನಾರಾಯಣ್ ಆಯ್ಯಂಗಾರ್ ವಿರುದ್ದ ಚುನಾವಣೆ ಮಾಡುತ್ತಾರೆ.
ಈ ಚುನಾವಣೆ ನಂತರ ಬದರಿನಾರಾಯಣ್ ಅಯ್ಯಂಗಾರ್ ರಾಜಕಾರಣದ ಉತ್ತುಂಗಕ್ಕೆ ಏರುತ್ತಾರೆ ಆನಂದಪುರಂ ಎಂದರೆ ರಾಜ್ಯದಲ್ಲಿ ಬದರಿನಾರಾಯಣ್ ಆಯ್ಯಂಗಾರ್ ಎಂದೇ ಪ್ರಖ್ಯಾತಿ ಆಗುತ್ತದೆ.
(ನಾಳೆ ಭಾಗ- 12)
Comments
Post a Comment