ಆನಂದಪುರಂ ಇತಿಹಾಸ ಭಾಗ-7.ಆನಂದಪುರಂನ ಲಕ್ಷ್ಮೀ ರಂಗನಾಥ ದೇವಾಲಯಕ್ಕೆ ಅರ್ಚಕರಾಗಿ ದೀಘ೯ ಕಾಲ ಸೇವೆ ಸಲ್ಲಿಸಿದ ವಾಲ್ಮೀಕಿ ಆನಂದ ಆಳ್ವಾರ್ ಮೈಸೂರಿನ ಪಾಂಡವಪುರ ಮೂಲದ ಪುರೋಹಿತರು,ಮೂಲ ಶ್ರೀಕೋದಂಡರಾಮ ದೇವಾಲಯ ಶ್ರೀರಂಗನಾಥ ಆದ ಸತ್ಯಕಥೆ.ಟಿಪ್ಪೂ ಸುಲ್ತಾನರ ಆನಂದಪುರಂ ಐತಿಹಾಸಿಕ ಬೇಟಿ,ಹರಪ್ಪಾ ಮಹೆಂಜದಾರೋ ಮತ್ತು ಸಮುದ್ರದಲ್ಲಿ ಮುಳುಗಿದ್ದ ಶ್ರೀಕೃಷ್ಣನ ದ್ವಾರಕಾ ನಗರಿ ಸ೦ಶೋದಿಸಿದ ವಿಶ್ವವಿಖ್ಯಾತ ಎಸ್.ಆರ್.ರಾವ್ ಆನಂದಪುರದ ರಂಗನಾಥ ದೇವರ ಹರಕೆಯಿಂದ ಆನಂದಪುರಂನಲ್ಲಿ ಜನಿಸಿದವರು
ಆನಂದಪುರಂ ಇತಿಹಾಸ ಭಾಗ_7
#ಆನಂದಪುರಂನ_ಲಕ್ಷ್ಮೀ_ರಂಗನಾಥ_ದೇವಾಲಯಕ್ಕೆ_ಅರ್ಚಕರಾಗಿ_ದೀಘ೯_ಸೇವೆ_ಸಲ್ಲಿಸಿದ
#ವಾಲ್ಮೀಕಿ_ಆನಂದ_ಆಳ್ವಾರ್
#ಮೈಸೂರಿನ_ಪಾಂಡವಪುರ_ಮೂಲದ_ಪುರೋಹಿತರು
#ಮೂಲ_ಶ್ರೀರಾಮ_ದೇವಾಲಯ_ಶ್ರೀರಂಗನಾಥ_ಆದ_ಸತ್ಯ_ಕಥೆ.
#ಟಿಪ್ಪೂ_ಸುಲ್ತಾನರ_ಆನಂದಪುರಂ_ಐತಿಹಾಸಿಕ_ಬೇಟಿ
#ಹರಪ್ಪಾ_ಮಹೆಂಜದಾರೋ_ಸಮುದ್ರದಲ್ಲಿ_ಮುಳುಗಿದ್ದ_ಶ್ರೀಕೃಷ್ಣನ_ದ್ವಾರಕಾ_ನಗರಿ_ಸಂಶೋದಿಸಿದ
#ವಿಶ್ವವಿಖ್ಯಾತ_ಎಸ್_ಆರ್_ರಾವ್_ಆನಂದಪುರದ_ರಂಗನಾಥ_ದೇವರ_ಹರಕೆಯಿಂದ_ಜನಿಸಿದವರು
ಆನಂದಪುರದ ಶ್ರೀ ರಂಗನಾಥ ದೇವಾಲಯ ಪುರಾತನ ದೇವಾಲಯ, ಈ ದೇವಾಲಯದ ಶಿಲಾಮಯ ದ್ವಜ ಸ್ತಂಭದ ಕೆಳಭಾಗದಲ್ಲಿ 12 ನೇ ಶತಮಾನದ ಹೊಸಗುಂದ ಅರಸರು ಈ ದೇವಾಲಯ ನವೀಕರಣ ಮಾಡಿ ದಾನ ದತ್ತಿ ನೀಡಿದ ಉಲ್ಲೇಖ ಇದೆ.
ಈ ದೇವಾಲಯಕ್ಕೆ ಈ ಭಾಗದಲ್ಲಿ ಆಯ್ಯ೦ಗಾರ್ ಕುಟುಂಬ ಅಥಿ೯ಕ ವಾಗಿ ಸಾಮಾಜಿಕವಾಗಿ ಬಲಿಷ್ಟರಾದ ಮೇಲೆ ಅವರಿಂದ ಹೆಚ್ಚು ಸೇವೆ ಸಲ್ಲಿದೆ ಇದು ನಿತ್ಯ ಪೂಜೆಯಿಂದ ವಾಷಿ೯ಕ ರಥೋತ್ಸವದ ತನಕ.
ಈಗಲೂ ಆಯ್ಯಂಗಾರ್ ಕುಟುಂಬಸ್ಥರು ಅದನ್ನು ಮುಂದುವರಿಸುತ್ತಾ ಇದ್ದಾರೆ.
ಹಾಗಾಗಿ ಕಾಲ ಕಾಲಕ್ಕೆ ಅರ್ಚಕರನ್ನು ಅವರೇ ವ್ಯವಸ್ಥೆ ಮಾಡುತ್ತಾ ಬಂದರು.
ರಾಮಕೃಷ್ಣ ಅಯ್ಯಂಗಾರರು ಮೈಸೂರಿನ ಪಾಂಡವಪುರದಿಂದ ವಾಲ್ಮೀಕಿ ರಂಗಯ್ಯಂಗಾರ್ ಎಂಬ ಪುರೋಹಿತರನ್ನು ಅರ್ಚಕರಾಗಿ ಕರೆತರುತ್ತಾರೆ ಅವರು ಅವರ ಜೊತೆ ಅವರ ಸಹೋದರ ವಾಲ್ಮೀಕಿ ಆನಂದ ಆಳ್ವಾರನ್ನು ತಮ್ಮ ಸಹಾಯಕ್ಕೆ ಕರೆ ತಂದಿರುತ್ತಾರೆ ಕಾಲಾಂತರದಲ್ಲಿ ರ೦ಗಯ್ಯಾ೦ಗಾರ್ ವಾಪಾಸ್ ಊರಿಗೆ ಹೋಗಿ ನೆಲೆಸುತ್ತಾರೆ ಹಾಗಾಗಿ ಆನಂದಪುರ೦ನ ಶ್ರೀ ಲಕ್ಷ್ಮೀ ರಂಗನಾಥ ದೇವಾಲಯಕ್ಕೆ #ವಾಲ್ಮೀಕಿ_ಆನಂದ_ಆಳ್ವಾರರು ಖಾಯಂ ಅರ್ಚಕರಾಗಿ ಆನಂದಪುರಂ ನ ಖಾಯಂ ನಿವಾಸಿ ಆಗಿ ಬಾಳಿ ಬದುಕಿ ಆನಂದಪುರಂನಲ್ಲೇ ಮಣ್ಣಾಗುತ್ತಾರೆ.
ಆಳ್ವಾರ್ ಅಂತಲೇ ಊರವರು ಗೌರವದಿಂದ ಕರೆಯುತ್ತಿದ್ದರಿಂದ ಅವರ ನಿಜ ನಾಮ ಬಹಳ ಜನರಿಗೆ ಗೊತ್ತಿಲ್ಲ.
ಆಳ್ವಾರ್ ಮತ್ತು ಅವರ ಪತ್ನಿ ಶ್ರೀಮತಿ ಚೂಡ ಮಣಿಯವರಿಗೆ ರಾಮಕೃಷ್ಣ, ಪದ್ಮಾ, ಜಯಂತಿ,ಶ್ರೀನಿವಾಸ್ ಮತ್ತು ಪುಷ್ಪಾ ಎಂಬ ಮಕ್ಕಳು. ಇದರಲ್ಲಿ ರಾಮಕೃಷ್ಣ ಈಗ ಇಲ್ಲ, ಪದ್ಮಾ ಇಂಡಿಯನ್ ಬ್ಯಾಂಕ್ ಉದ್ಯೋಗಿ ಆಗಿ ಮದ್ರಾಸ್ ನಲ್ಲಿದ್ದವರು ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ, ಜಯಂತಿ ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿದ್ದರು ಆಗ 1977 ರಲ್ಲಿ ನನಗೆ ಕ್ಲಾಸ್ ಟೀಚರ್ ಆಗಿದ್ದರು ಅವರು ಆಗ ಎಲ್ಲಾ ವಿದ್ಯಾಥಿ೯ಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಆದ್ದರಿಂದ ಅವರು ರಂಗನಾಥ ಸ್ವಾಮಿ ದೇವಾಲಯದಲ್ಲಿ 7ನೇ ತರಗತಿ ವಿದ್ಯಾಥಿ೯ಗಳಿಗೆ ಉಚಿತ ಟ್ಯೂಷನ್ ಸಹ ನೀಡುತ್ತಿದ್ದರು ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ, ಶ್ರೀನಿವಾಸ್ ಬೆಂಗಳೂರಲ್ಲಿ ಇದ್ದಾರೆ, ಪುಷ್ಪಾ ಶಿವಮೊಗ್ಗದಲ್ಲಿ ಬಿ.ಎಸ್.ಎನ್.ನಲ್ಲಿ ಉದ್ಯೋಗಿ ಆಗಿದ್ದರು ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಆನಂದಪುರಂ ನ ಶ್ರೀ ರಾಮ ದೇವರು ರಂಗನಾಥ ಆದ ಸತ್ಯಕಥ ಆನಂದಪುರ ವಾಸಿಗಳಿಗೆ ಗೊತ್ತಿಲ್ಲ ಈ ರೀತಿ ರಾಮನನ್ನು ರಂಗನಾಥನಾಗಿ ಮರು ನಾಮಕರಣ ಮಾಡಲು ಕಾರಣ ಆನಂದಪುರಕ್ಕೆ ಬೇಟಿ ನೀಡುವ ಟಿಪ್ಪು ಸುಲ್ತಾನರು.
ಮರುದಿನ ಆನಂದಪುರಂನ ಕೋಟೆಗೆ ಟಿಪ್ಪು ಸುಲ್ತಾನ್ ರು ಮೈಸೂರಿನಿಂದ ಬರುತ್ತಾರೆ ನಂತರ ಬಿದನೂರು ನಗರಕ್ಕೆ ಹೋಗುತ್ತಾರೆಂಬ ಸುದ್ದಿ ಬಂದಾಗ ಆನಂದಪುರದ ಅಗ್ರಹಾರದಲ್ಲಿ ಗಲಿಬಿಲಿ ಆಗುತ್ತದೆ ರಾಜ ಟಿಪ್ಪು ಸುಲ್ತಾನ್ ರಂಗನಾಥ ದೇವರ ಭಕ್ತ ಬೇರೆ ಹಿಂದೂ ದೇವರ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲದವರೆಂದು ತಮ್ಮ ಶ್ರೀ ರಾಮ ದೇವಾಲಯ ರಕ್ಷಣೆಗೋ ಅಥವ ರಾಜರ ಕೃಪ ಕಟಾಕ್ಷಗಳಿಸಲೋ ಎಲ್ಲರೂ ಒಂದು ತೀಮಾ೯ನ ಮಾಡಿ ಶ್ರೀ ರಾಮನಿಗೆ ಶಾಸ್ತ್ರೋಕ್ತವಾಗಿ ಶ್ರೀರಂಗನಾಥನೆಂದು ಮರು ನಾಮಕರಣ ಮಾಡುತ್ತಾರೆ.
#ಬ್ರಿಟೀಷರಿಂದ_ಆನಂದಪುರಂ_ಕೋಟೆ_ವಶಪಡಿಸಿ_ಬ್ರಿಟೀಷ್_ಸೈನಿಕರಿಗೆ_ಶ್ರೀರಂಗಪಟ್ಟಣದಲ್ಲಿ_ಕಾಲಾಪಾನಿ_ಶಿಕ್ಷೆ_ #ನೀಡುವ_ಟಿಪ್ಪು_ಸುಲ್ತಾನ್
(ಬ್ರಿಟೀಷ್ ಮ್ಯೂಸಿಯಂ ದಾಖಲೆ "ಪ್ರವಾಸಿ ಕಂಡ ಇಂಡಿಯಾ" ಪುಸ್ತಕದಲ್ಲಿ ಪುನರ್ ಮುದ್ರಣ ಆಗಿದೆ)
ಕೆಳದಿ ಅರಸರಿಂದ ಕೆಳದಿ ರಾಜ್ಯ ಟಿಪ್ಪು ಸುಲ್ತಾನ್ ವಶಕ್ಕೆ ಪಡೆದು ಬಿದನೂರ ನಗರ ರಾಜಧಾನಿ ತನ್ನ ಸೈನ್ಯಾಧಿಕಾರಿ ಹಯಾತ್ ಖಾನ್ ಉಸ್ತುವಾರಿಗೆ ನೀಡಿರುತ್ತಾನೆ ಆಗ ಆನಂದಪುರಂ ಕೋಟೆ ಕೂಡ ಹಯಾತ್ ಖಾನ್ ವಶದಲ್ಲಿರುತ್ತದೆ ಈ ಸಂದರ್ಭದಲ್ಲಿ ಬ್ರಿಟಿಷರ ಸೇನಾ ತುಕುಡಿ ಒಂದು ಆನಂದಪುರಂನ ಕೋಟೆಯನ್ನು ವಶಪಡಿಸಿಕೊಳ್ಳುತ್ತದೆ ಈ ಯುದ್ಧದಲ್ಲಿ ಅನೇಕ ಸೈನಿಕರ ಹತ್ಯೆ ಆಗುತ್ತದೆ.ಆಗ ಬ್ರಿಟೀಶ್ ಸೈನ್ಯ ಆನಂದಪುರಂನ ಕೋಟೆಯಲ್ಲಿ ಲೂಟಿ ಅತ್ಯಾಚಾರ ನಡೆಸುತ್ತಾರೆ ಇವರಿಂದ ರಕ್ಷಿಸಿ ಕೊಳ್ಳಲಾಗದ ಸುಮಾರು ನಾಲ್ಕುನೂರಕ್ಕೂ ಹೆಚ್ಚಿನ ಸೈನಿಕರ ಕುಟುಂಬದ ಸ್ತ್ರೀಯರು ಆನಂದಪುರಂ ಕೋಟೆ ಸುತ್ತಲಿನ ಆಳದ ನೀರಿನ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಈ ಸುದ್ದಿ ಕೇಳಿ ಟಿಪ್ಪು ಸುಲ್ತಾನ್ ನೊಂದು,ದೊಡ್ಡದಾದ ತನ್ನ ಸೇನಾ ತುಕಡಿ ಕಳಿಸಿ ಆನಂದಪುರ೦ನ ಕೋಟೆ ಪುನ: ವಶಪಡಿಸಿಕೊಂಡು ಬ್ರಿಟೀಷ್ ಸೈನಿಕರನ್ನು ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಕೋಟೆಯಲ್ಲಿನ ಸೆರೆಮನೆಯಲ್ಲಿ ಬಂದಿಸಿಟ್ಟು ಕಾಲಾಪಾನಿ ಶಿಕ್ಷೆಯಿಂದ ಅವರನ್ನು ಸಾಯಿಸುತ್ತಾನೆ ಹಾಗಾಗಿ ಟಿಪ್ಪು ಸುಲ್ತಾನರ ಈ ಆನಂದಪುರದ ಬೇಟಿ ಮಹತ್ವದ್ದಾಗಿರುತ್ತದೆ.
ಆನಂದಪುರದ ಜಾಮಿಯಾ ಮಸೀದಿ ಅವರಣದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಟಿಪ್ಪು ಸುಲ್ತಾನರಿಗೆ ಗೌರವ ಸಮಾರ್ಪಣೆಯೊಂದಿಗೆ ಸ್ವಾಗತಿಸುತ್ತಾರೆ, ಅಲ್ಲೇ ಆನಂದಪುರಂ ನ ಅಗ್ರಹಾರ ವಾಸಿಗಳು ಟಿಪ್ಪು ಸುಲ್ತಾನರಿಗೆ ಗೌರವಿಸಿ ದೇವಾಲಯಕ್ಕೆ ಆಹ್ವಾನಿಸುತ್ತಾರೆ ಆಗ ಟಿಪ್ಪೂ ಸುಲ್ತಾನರು ಯಾವ ದೇವರ ದೇವಾಲಯ ಎಂದು ಕೇಳಿದಾಗ ಪುರೋಹಿತರು ಶ್ರೀರಂಗನಾಥ ಎಂದಾಗ ಟಿಪ್ಪೂ ಸುಲ್ತಾನರು ದೇವಾಲಯಕ್ಕೆ ಬೇಟಿ ನೀಡಿ ಭಕ್ತಿ ಸಮರ್ಪಿಸಿ ದೇವಾಲಯಕ್ಕೆ, ಪುರೋಹಿತರಿಗೆ ಬೆಳ್ಳಿ ಬಂಗಾರ ಸಮರ್ಪಿಸುತ್ತಾರೆ ಅವತ್ತಿಂದ ಆನಂದಪುರದ ಶ್ರೀ ರಾಮನು ಶ್ರೀರಂಗನಾಥನಾಗಿ ಪೂಜಿಸಲ್ಪಡುವ ಈ ವೃತ್ತಾಂತ ಮೈಸೂರು ಗೆಜೆಟ್ ನಲ್ಲಿ ಕೂಡ ನಮೂದಾಗಿದೆ.
ಈಗಲೂ ಶ್ರೀರಾಮನ ಮೂಲ ವಿಗ್ರಹ ಬಿಲ್ಲ ಬಾಣ ಅಲಂಕೃತನಾಗಿರುವುದು ನೋಡಬಹುದು.
ಇನ್ನೊಂದು ವಿಶೇಷ ಅಂದರೆ ಹರಪ್ಪಾ ಮಹೆಂಜದಾರೋ ಸಂಶೋದನೆ ಮತ್ತು ಸಮುದ್ರದಲ್ಲಿ ಮುಳುಗಿದ ಶ್ರೀ ಕೃಷ್ಣನ ದ್ವಾರಕಾ ನಗರ ಸಂಶೋದಿಸಿದ ಶಿಕಾರಿಪುರ ರಂಗನಾಥ ರಾವ್ (S.R.Roa) ತಂದೆ ತಾಯಿ ಆನಂದಪುರದ ರಂಗನಾಥ ಸ್ವಾಮಿಗೆ ಗಂಡು ಸಂತಾನಕ್ಕೆ ಹರಕೆ ಹೊರುತ್ತಾರೆ ಆಗ ರಂಗನಾಥ ದೇವಾಲಯದ ಬೀದಿಯಲ್ಲಿ ವಾಸವಿದ್ದ ಕುಟುಂಬಕ್ಕೆ ಗಂಡು ಮಗು ಜನಿಸಿದಾಗ ರಂಗನಾಥನೆಂದೆ ನಾಮಕರಣ ಮಾಡುತ್ತಾರೆ ಮುಂದೆ ಅವರು S.R. ರಾವ್ ಎಂದೇ ವಿಶ್ವವಿಖ್ಯಾತರಾಗುತ್ತಾರೆ.
(ನಾಳೆ ಭಾಗ-8)
Comments
Post a Comment