Blog number 855. ಗ್ರಾಮೀಣ ಪ್ರದೇದದಲ್ಲಿ ಪ್ರವಾಸೋದ್ಯಮ ಸುಲಭ ಸಾಧ್ಯವಲ್ಲ, ಮಲೆನಾಡಿನ ಸಂಪ್ರದಾಯಿಕ ಶುಚಿ ರುಚಿಯ ಆಹಾರ ಪ್ರವಾಸಿಗರಿಗೆ ಪರಿಚಯ ಮಾಡುವ ನನ್ನ ನಿರಂತರ ಪ್ರಯತ್ನ
#ರೂ_25ಕ್ಕೆ_300ML_ಗ್ಲಾಸ್_ಜಗ್_ನಲ್ಲಿ_ತಂಪಾದ_ಕೊಕಂ_ಪಾನಿಯ
#ಸ್ಥಳಿಯ_ಆಹಾರ_ಪಾನಿಯ_ಪ್ರವಾಸಿಗಳಿಗೆ_ಪರಿಚಯಿಸುವ_ಕಾಯ೯ದಲ್ಲಿ.
Mallika Veg
https://maps.app.goo.gl/m26HG61eBpj43eb5A.
ನಮ್ಮ ಮಲ್ಲಿಕಾ ವೆಜ್ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿದೆ ಶಿವಮೊಗ್ಗದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ, ಶಿವಮೊಗ್ಗದಿಂದ 50 km ಮತ್ತು ಜೋಗ್ ಫಾಲ್ಸ್ ನಿಂದ 50 Km (ಸಾಗರದಿಂದ 25 km ಶಿವಮೊಗ್ಗ ಹೋಗುವಾಗ ) ಮಧ್ಯದಲ್ಲಿದೆ.
ಪಕ್ಕದಲ್ಲಿ ನಮ್ಮ ಹೊಂಬುಜ ರೆಸಿಡೆನ್ಸಿ ಎಂಬ ಹಳೆಯ ಲಾಡ್ಜ್, ಕೃಷ್ಣ - ಸರಸ ಕನ್ವೆನ್ಷನ್ ಹಾಲ್, ವಿಕ್ಟೋರಿಯಾ ಕಾಟೇಜ್ ಮತ್ತು ಹೊಂಬುಜ ಗಾರ್ಡನೀಯ ಎಂಬ ಹೊಸ ಲಾಡ್ಜ್ (AC ರೂಂ ಲಭ್ಯ) ಮತ್ತು ಚಂಪಕಾ ಪ್ಯಾರಾಡೈಸ್ ಎಂಬ ನಾನ್ ವೆಜ್ (ಮಡಕಾ ದಮ್ ಬಿರಿಯಾನಿಗೆ ಪ್ರಸಿದ್ಧ) ಇದೆ.
ವಿಶಾಲ ಪಾರ್ಕಿಂಗ್, ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೈಟೆಕ್ & ಹೈಜನಿಕ್ ಶೌಚಾಲಯ ವ್ಯವಸ್ಥೆ, ಅಜಿನೋಮೊಟೋ, ಕೃತಕ ಬಣ್ಣಗಳ ಬಳಸದೇ ಆಹಾರ ತಯಾರಿಸುವ ಆಧುನಿಕ ಅಡುಗೆ ಮನೆಯಲ್ಲಿ ಮಲೆನಾಡಿನ ವಿಶೇಷವಾದ ಹಲಸಿನ ಎಲೆ ಕೊಟ್ಟೆ ಕಡಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿಗಳ ಜೊತೆ ತಮಿಳುನಾಡಿನ ಹೆಸರಾಂತ ಪೋಡಿ ಇಡ್ಲಿ (ಶುದ್ಧ ದೇಸಿ ತುಪ್ಪದೊಂದಿಗೆ) ಜೊತೆಗೆ ಸಂಪ್ರದಾಯಿಕ ಇಡ್ಲಿ ವಡೆ - ಕಾಯಿನ್ ಇಡ್ಲಿ- ಬನ್ಸ್ - ಎಲ್ಲಾ ರೀತಿಯ ದೋಸೆ - ಉಪ್ಪಿಟ್ಟು - ಕೇಸರಿಬಾತ್ -ಪಲಾವ್ - ಬಿಸಿಬೇಳೆಬಾತ್ - ಪಕೋಡ - ಸೌತ್ ಇಂಡಿಯನ್ ಥಾಲಿ ನಿತ್ಯ ಸಿಗುತ್ತದೆ.
ಇದೇ ಕಾರಣದಿಂದ ನಿಂತಿರುವ ನಮ್ಮ ನಾನ್ ವೆಜ್ ರೆಸ್ಟೋರಾಂಟ್ #ಚಂಪಕಾ_ಪ್ಯಾರಾಡೈಸ್ ಮುಂದಿನ ವಾರದಿಂದ ಪುನಾರಾರಂಭ ಆಗಲಿದೆ ಇಲ್ಲಿನ ಪ್ರಸಿದ್ಧ ಮಡಕಾ ದಮ್ ಬಿರಿಯಾನಿ ಜೊತೆ ಮಲೆನಾಡಿನ ರುಚಿಕರವಾದ ನಾಟಿ ಚಿಕನ್ ಮತ್ತು ಕೋಳಿ ಕಜ್ಜಾಯ (ಡಾ.ರಾಜಕುಮಾರ್,ಬಂಗಾರಪ್ಪರ ಪೆವರಿಟ್), ಅಕ್ಕಿ/ರಾಗಿ ರೊಟ್ಟಿ ನಾಟಿ ಚಿಕನ್, ತಮಿಳುನಾಡಿನ ಚಟ್ಟಿ ನಾಡು ಚಿಕನ್ ರೋಸ್ಟ್ ಜೊತೆಗೆ ಬಾಳೆ ಎಲೆಯಲ್ಲಿ ಪಿಶ್ ಥಾಲಿ (ಉಪ್ಪಿನಕಾಯಿ - ಸೀಗಡಿ ಚಟ್ನಿ -ಪಲ್ಯ - ಕೋಕಂ ತಿಳಿ ಸಾರು - ಅನ್ ಲಿಮಿಟೆಡ್ ರೈಸ್ - ಪಿಶ್ ಮಸಾಲ - ತವಾ ಪಿಶ್ ಪ್ರೈ - ಮಜ್ಜಿಗೆ) ಮತ್ತು ಬಾಳೆ ಎಲೆಯಲ್ಲಿ ಚಿಕನ್ ಥಾಲಿ ಕೂಡ ಲಭ್ಯವಾಗಲಿದೆ.
ಗ್ರಾಮೀಣ ಪ್ರದೇಶದಲ್ಲಿ ಸ್ಥಳಿಯ ಆಹಾರಗಳನ್ನು ಪ್ರವಾಸಿಗರಿಗೆ ಪರಿಚಯಿಸಿ ವ್ಯವಹಾರ ಮಾಡಿ ಉದ್ಯಮ ನಡೆಸುವುದು ಸುಖದ ಹಾದಿಯಲ್ಲ ಎಂಬುದು 2012ರಿಂದ ಈ ಉದ್ಯೋಗದಲ್ಲಿ ಪಡೆದ ಅನುಭವ.
ನಮ್ಮ ಊರನ್ನು ಈ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರವಾಸಿಗರೇ ನಮ್ಮ ಗ್ರಾಹಕರು ಆದರೆ 3 ವರ್ಷದಿಂದ ಕೊರಾನಾದಿಂದ ಪ್ರವಾಸೋದ್ಯಮದ ಈ ಉದ್ಯೋಗ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದೆ ಅದರಲ್ಲೂ ದಿನಸಿ - ಖಾದ್ಯ ಎಣ್ಣೆಯ ಬೆಲೆ ಏರಿಕೆ ಜೊತೆಗೆ ವಾಣಿಜ್ಯ ಅನಿಲ ಸಿಲೆಂಡರ್ ಬೆಲೆ ರೂ 2387 ಕ್ಕೆ ಏರಿದೆ ಆದರೂ ನಮ್ಮ ಬೆಲೆ ಮೂರು ವರ್ಷದ ಹಿಂದಿನದ್ದೆ ಮುಂದುವರಿದಿದೆ.
Comments
Post a Comment