Blog 850, ಸಾಗರ ಜಂಬಗಾರು ಎಂಬ ರೈಲು ನಿಲ್ದಾಣದ ಹೆಸರು ಕಾಗೋಡು ಹೋರಾಟದಲ್ಲಿ ಭಾಗವಹಿಸಲು ಬಂದಾಗ ಈ ರೈಲು ನಿಲ್ದಾಣದಲ್ಲಿ ಬಂದನಕ್ಕೆ ಒಳಗಾದ ಸಮಾಜವಾದಿ ದುರೀಣ ಡಾ.ರಾಮಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಮರುನಾಮಕರಣ ರೈಲ್ವೆ ಇಲಾಖೆ ಉದ್ದೇಶ ಪೂರ್ವಕವಾಗಿ ತಡೆ ಹಿಡಿದಿರುವುದನ್ನು ಜನತೆ ಪ್ರತಿಭಟಿಸ ಬೇಕಾಗಿದೆ.
#ಸಾಗರಜ೦ಬಗಾರು_ಎಂಬ_ಸಾಗರದ_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ_ಲೋಹಿಯಾ_ಎ೦ದು_ಮರುನಾಮಕರಣ_ವಿಳಂಬದ_ಬಗ್ಗೆ_ಚಚಿ೯ಸಿದರಂತೆ.
ಆಗಿನ ಕೇಂದ್ರ ಮಂತ್ರಿ ಶ್ರೀನಿವಾಸ ಪ್ರಸಾದ್, ಜಾರ್ಜ್ ಪನಾ೯ಂಡೀಸ್, ರಾಜ್ಯಸಭಾ ಸದಸ್ಯರಾದ ಜವರೇಗೌಡರ ಪ್ರಯತ್ನದಿಂದ ಮತ್ತು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಜಿ.ಆರ್.ಜಿ.ನಗರ್, ಕೆ.ವಿ.ಸುಬ್ಬಣ್ಣ, ಸಾಹಿತಿ ನಾ.ಡಿಸೋಜ, ಸಮಜವಾದಿ ಸಾಹಿತಿ ಕೋಣಂದೂರು ವೆಂಕಪ್ಪಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾದ ಮಾದಪ್ಪ, ಪ್ರಪುಲ್ಲಾ ಮದುಕರ್ ,ರೈತ ಮುಖಂಡರಾದ ಪ್ರೋ. ನಂಜುಂಡ ಸ್ವಾಮಿ, ಕೆ.ಟಿ.ಗಂಗಾಧರ್, ಸಾಗರದ ವಸಂತ ಕುಮಾರ್, ಸೊರಬ ಮಂಜುನಾಥ ಗೌಡರು, ಕಲ್ಲೂರ್ ಮೇಘರಾಜ್ ಮತ್ತು ಜಿಲ್ಲೆಯ ಅನೇಕರು (ಇದಕ್ಕಾಗಿ ದೆಹಲಿ ಚಲೋ ಮಾಡಿದ ನೂರಾರು ಹೋರಾಟಗಾರರೂ ಸೇರಿ) ಸಾಗರ ಜಂಬಗಾರು ರೈಲು ನಿಲ್ದಾಣ ಎಂಬ ಹೆಸರು ಬದಲಿಸಿ ಡಾ.ರಾಮಮನೋಹರ ಲೋಹಿಯಾ ಎಂದು ಮರುನಾಮಕರಣ ಮಾಡಲು ರೈಲ್ವೆ ಮಂತ್ರಿ ನಿತೀಶ್ ಕುಮಾರರಿಗೆ ನೀಡಿದ ಮನವಿ ಆಕಾಲದಲ್ಲಿನ ಕಾನೂನು ರೀತ್ಯ ಆಗಿನ ಉಪ ಪ್ರಧಾನಿ ಲಾಲ್ ಅಡ್ವಾನಿ ಅವರಿಗೆ ಹೋಗಿ ಅಲ್ಲಿಂದ ಅದು ರಾಜ್ಯ ಸಕಾ೯ರದ ಅನುಮೋದನೆಗೆ ಬಂತು, ರಾಜ್ಯ ಸರ್ಕಾರದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಅಲ್ಲಿಂದ ಸಾಗರ ನಗರಸಭೆಗೆ ಬಂದು, ಸಾಗರದ ನಗರಸಭೆ ಡಾ.ರಾಮಮನೋಹರ ಲೋಹಿಯಾ ಎ೦ದು ಮರುನಾಮಕರಣ ಮಾಡಲು ಒಪ್ಪಿಗೆ ಪತ್ರ ನೀಡಿದ ಆದಾರದ ಮೇಲೆ ಶಿವಮೊಗ್ಗ ಜಿಲ್ಲಾ ಕಚೇರಿ ನಿರಾಕ್ಷೇಪಣಾ ಪತ್ರ ನೀಡಿದ್ದರಿಂದ ರಾಜ್ಯ ಸರ್ಕಾರ ಉಪ ಪ್ರಧಾನಿಯವರ ಕಛೇರಿಗೆ ತನ್ನ ಅನುಮತಿ ರವಾನಿಸಿತ್ತು ಈ ಎಲ್ಲಾ ಹಿನ್ನೆಲೆಯಲ್ಲಿ ಉಪ ಪ್ರದಾನಿ ಕಾಯಾ೯ಲಯ ಸಾಗರ ಜಂಬಗಾರು ರೈಲು ನಿಲ್ದಾಣವನ್ನು ಡಾ.ರಾಮಮನೋಹರ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಕೇಂದ್ರ ರೈಲ್ವೆ ಇಲಾಖೆಗೆ ಆದೇಶಿಸಿದೆ ಆದರೆ ರೈಲ್ವೆ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ಆದೇಶ ಜಾರಿಗೆ ಕಾಣದ ಕೈಗಳು ತಡೆಹಿಡಿದಿದೆ ಮತ್ತು ಬೇರೆ ಹೆಸರು ಇಡುವ ಪ್ರಯತ್ನವೂ ಇದೆಯಂತೆ.
https://arunprasadhombuja.blogspot.com/2022/03/22.html?m=1
ಸದರಿ ಬೋರ್ಡ್ ದುರಸ್ತಿ ಮಾಡಿಸಿ, ಬಣ್ಣ ಮಾಡಿ ಹೊಸದಾಗಿ ಬರೆಸಿ ಸ್ಥಳಿಯ ಲೋಕಸಭಾ ಸದಸ್ಯರಿಗೆ ಇನ್ನೊಮ್ಮೆ ನೆನಪಿಸುವ ಕೆಲಸ ಸಾಗರ ತಾಲ್ಲೂಕಿನ ಆಸಕ್ತರು ಪಕ್ಷಾತೀತವಾಗಿ ಮಾಡಬೇಕಾಗಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಅದರ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಲೇ ಈ ಪ್ರಯತ್ನ ಪ್ರಾರಂಬಿಸಿದರೆ ಚುನಾವಣೆ ಒಳಗೆ ಡಾ. ಮನೋಹರ ಲೋಹಿಯ ರೈಲು ನಿಲ್ದಾಣ ಮರು ನಾಮಕರಣ ಮಾಡಬಹುದು.
Comments
Post a Comment