Blog number 852, ಮತ್ತೆ ಪ್ರತ್ಯಕ್ಷವಾದ ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ್ ಪಾಲ್ಸ್ ಪಕ್ಕದ ಅರಲಗೋಡಿನ ಗ್ರಾಮ ಪಂಚಾಯತ್ ಸದಸ್ಯ ರಾಮಸ್ವಾಮಿ ಕರುಮನೆಯವರ ಬಲಿ ಪಡೆದಿದೆ
#ಮತ್ತೆ_ಬಂತು_ಮಂಗನ_ಕಾಯಿಲೆ
#ಅರಲಗೋಡು_ಗ್ರಾಮಪಂಚಾಯತ್_ರಾಮಸ್ವಾಮಿಕರುಮನೆ_ನಿಧನ.
#ಇನ್ನೂ_ಪ್ರಾರಂಭ_ಆಗದ_ಪ್ರಯೋಗಾಲಯ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಬಗಲಲ್ಲಿರುವ ಅರಲಗೋಡು ಗ್ರಾಮದಲ್ಲಿ 2019 - 20 ಮಂಗನ ಕಾಯಿಲೆ ಮರಣ ಮೃದಂಗ ಭಾರಿಸಿತ್ತು.
5 - ಜನವರಿ -2019 ರಂದು ವಿದ್ಯಾರ್ಥಿನಿ ಶ್ವೇತಾಳ ಬಲಿ ಪಡೆದ ದುರಂತ ಸುಮಾರು 29 ಜನ (ತೀರ್ಥಳ್ಳಿ ತಾಲ್ಲೂಕು ಸೇರಿ) ರ ಜೀವ ತೆಗೆದಿತ್ತು, ಪಕ್ಕದ ಸಿದ್ದಾಪುರ ತಾಲ್ಲೂಕನ್ನು ಕಾಡಿತ್ತು.
ಆಗಿನ ಮುಖ್ಯಮಂತ್ರಿ ಮಂಗನ ಕಾಯಿಲೆ ವೈರಸ್ ಕಂಡು ಹಿಡಿಯಲು ಪ್ರಯೋಗಾಲಯ ಮಂಜೂರು ಮಾಡಿ ಎಷ್ಟೋ ಕೋಟಿ ಹಣ ಮೀಸಲಿಟ್ಟಿದ್ದೆವೆಂಬ ಹೇಳಿಕೆಗಳು ಪತ್ರಿಕೆ ಟೀವಿಗಳಲ್ಲಿ ಸುದ್ದಿ ಆಯಿತು.
ಸಾಗರದಲ್ಲಿ ಈ ಪ್ರಯೋಗ ಶಾಲೆ ಆಗಲಿ ಅಂತ ಕೆಲವರು ಇನ್ನು ಕೆಲವರು ಶಿವಮೊಗ್ಗ ಕೇಂದ್ರದಲ್ಲೇ ಬೇಕು ಅಂತ ಹಗ್ಗ ಜಗ್ಗಾಟವಾಡಿದರು ಆದರೆ ಆ ಪ್ರಯೋಗ ಎಲ್ಲಿ ಮಾಡಿದರೋ ಗೊತ್ತಿಲ್ಲ.
ಇವತ್ತು ಪುನಃ ಮಂಗನ ಕಾಯಿಲೆ ಅರಲಗೋಡಿನ ಗ್ರಾಮ ಪಂಚಾಯತ್ ಸದಸ್ಯರಾದ 55 ವರ್ಷದ ರಾಮಸ್ವಾಮಿ ಕರು ಮನೆಯವರ ಬಲಿ ಪಡೆಯುವ ಮೂಲಕ ಪ್ರತ್ಯಕ್ಷ ಆಗಿದೆ.
ಇವರ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸೋಣ ಮುಂದಿನ ದಿನದಲ್ಲಿ ಈ ಭಾಗದ ಜನ ತುಂಬಾ ಜಾಗೂರೂಕರಾಗಿರಬೇಕಾದದ್ದು ಅನಿವಾಯ೯ ಎಂಬುದು ಮರೆಯ ಭಾರದು
2019 ರಂದು ಬರೆದ ಮಂಗನ ಕಾಯಿಲೆ ಲೇಖನ ಇಲ್ಲಿ ಕ್ಲಿಕ್ ಮಾಡಿ ನೋಡಬಹುದು
https://arunprasadhombuja.blogspot.com/2019/01/kfd.html
Comments
Post a Comment