Blog number 853. ದೇಶದ ರಾಜಧಾನಿ ತೀನ್ ಮೂರ್ತಿ ಭವನದ ಅವರಣದಲ್ಲಿ ಪ್ರದಾನ ಮಂತ್ರಿ ಸಂಗ್ರಹಾಲಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿಯ ಟಿ.ಎಂ.ಶ್ರೀದರರು ತೆಗೆದ ಚಂದ್ರಶೇಖರರ ಭಾರತ ಯಾತ್ರೆಯ ಛಾಯ ಚಿತ್ರಗಳು ಖಾಯಂ ಪ್ರದರ್ಶನಕ್ಕೆ ಆಯ್ಕೆ ಆಗಿದೆ.
#ಸ್ವಾತಂತ್ರ್ಯ_ನಂತರ_ಭಾರತದ_ಎಲ್ಲಾ_ಪ್ರದಾನ_ಮಂತ್ರಿಗಳ_ಜೀವನ_ಚಿತ್ರಗಳ_ಖಾಯಂ_ಸ೦ಗ್ರಹಾಲಯ.
#ಯಂಗ್_ಟಕ್೯_ಚಂದ್ರಶೇಖರರ_ಭಾರತ_ಯಾತ್ರೆಯ_ಛಾಯಚಿತ್ರ_ತೆಗೆದವರು_ತುಮರಿಯ_ಶ್ರೀದರ್.
ದೆಹಲಿಯಲ್ಲಿನ ಪ್ರದಾನಿ ನೆಹರೂ 16 ವರ್ಷ ವಾಸವಾಗಿದ್ದ ತೀನ್ ಮೂರ್ತಿ ಭವನದ ಆವರಣದಲ್ಲಿ ಪ್ರದಾನಿ ಮೋದಿಯವರು ಪ್ರದಾನ ಮಂತ್ರಿ ಸ೦ಗ್ರಹಾಲಯ ನಿರ್ಮಿಸಿದ್ದಾರೆ.
ಇದರಲ್ಲಿ ಸ್ವಾತಂತ್ರ್ಯ ನಂತರದ ಎಲ್ಲಾ ಪ್ರದಾನ ಮಂತ್ರಿಗಳ ಸ್ಮರಣೆಗಾಗಿ ಅವರ ಹೋರಾಟಗಳು, ಜೀವನ ಇತ್ಯಾದಿಯ ಮಾಹಿತಿ ಮುಂದಿನ ತಲೆಮಾರಿಗೂ ಉಳಿಸುವ ಮಹತ್ತರ ಉದ್ದೇಶದ ಯೋಜನೆ ಇದು, ಮುಂದಿನ ದಿನದಲ್ಲಿ ದೇಶದ ರಾಜಧಾನಿಗೆ ಹೋಗುವವರಿಗೆ, ದೇಶದ ಚರಿತ್ರೆಯ ಆಸಕ್ತರಿಗೆ ಇದು ಒ0ದು ಆಕರ್ಷಣೀಯ ಸಂಗ್ರಹಾಲಯ ಆಗಲಿದೆ.
ಈ ಸಂಗ್ರಹಾಲಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿಯ ಟಿ.ಎಂ.ಶ್ರೀದರ್ ಚಂದ್ರಶೇಖರರು ದಿನಾಂಕ 6- ಜನವರಿ -1983ರಂದು ಕನ್ಯಾಕುಮಾರಿಯಿಂದ ಪ್ರಾರಂಬಿಸಿ ದಿನಾಂಕ 10- ಜೂನ್ -1983 ಕ್ಕೆ ದೆಹಲಿಯ ಮಹಾತ್ಮಾ ಗಾಂಧಿ ಸಮಾದಿ ರಾಜ್ ಘಾಟ್ ಗೆ ಸುಮಾರು 4260 ಕಿ.ಮಿ. ಯಾತ್ರೆಯಲ್ಲಿ ಭಾಗವಹಿಸಿದ್ದರು ಅತ್ಯುತ್ತಮ ಛಾಯಾಗ್ರಹಕರಾಗಿದ್ದ ಇವರು ತೆಗೆದ ಚಂದ್ರಶೇಖರರ ಭಾರತ ಯಾತ್ರೆಯ ಚಿತ್ರಗಳು ದೆಹಲಿಯ ಪ್ರದಾನ ಮಂತ್ರಿಯ ಸಂಗ್ರಹಾಲಯದಲ್ಲಿ ಖಾಯಂ ಸ್ಥಾನ ಪಡೆದಿದ್ದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ತುಮರಿಯ ಶ್ರೀಮಂತ ಕೃಷಿಕ ಮನೆತನದ ಸಮಾಜವಾದಿ ಹೋರಾಟದ ಮೂಸೆಯಲ್ಲಿ ಬೆಳೆದು ಬಂದ ಟಿ.ಎಂ.ಶ್ರೀದರ್ ಅತ್ಯುತ್ತಮ ಛಾಯಾಗ್ರಹಕರು, ಮಾಸ್ಟರ್ ಡಿಗ್ರಿ ವ್ಯಾಸಂಗ ಮಾಡಿದ್ದಾರೆ ಇವರ ಹೋರಾಟದ ಬದುಕಿನಲ್ಲಿ ಸಮಾಜವಾದಿ ಒಡನಾಡಿಗಳ ಜೊತೆಯ ಒಡನಾಟದ ಜೊತೆ ಮತ್ತು ಮಾಧ್ಯಮಗಳ ಜೊತೆ ಉತ್ತಮ ಸಂಬಂದ ಹೊಂದಿದ್ದರು.
ಜಾರ್ಜ್ ಪನಾ೯೦ಡೀಸ್, ನಿತೀಶ್ ಕುಮಾರ್, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಮತ್ತು ಜೆ.ಹೆಚ್. ಪಟೇಲರ ಜೊತೆ ನಿಕಟ ಸಂಬಂಧ ಹೊಂದಿದ್ದರು.
ಸಮಾಜವಾದಿ ದುರೀಣ ರಮೇಶ್ ಬಂದಗದ್ದೆ ಸಂಬಂದಿಗಳು, ಸಾಗರ ಮುದ್ರಣದ ಪ್ರಭಾಕರರ ಸೋದರ ಸಂಬಂದಿ ಆಗಿರುವ ಇವರು ಇವರ ಪತ್ನಿಯ ಉದ್ಯೋಗ ಕಾರಣದಿಂದ ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
ತುಮರಿ ಟಿ.ಎಂ.ಶ್ರೀದರರು ತೆಗೆದ ಯಂಗ್ ಟರ್ಕ್ ಚಂದ್ರಶೇಖರ ಭಾರತ ಯಾತ್ರೆಯ ಚಿತ್ರಗಳು ಪ್ರದಾನ ಮಂತ್ರಿ ಸಂಗ್ರಹಾಲಯದಲ್ಲಿ ಖಾಯಂ ಸ್ಥಳ ಪಡೆದದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ ದೆಹಲಿಗೆ ಹೋದಾಗ ಅಲ್ಲಿ ಈ ಚಿತ್ರ ಪಟ ನೋಡಲಿಕ್ಕಾಗಿಯೇ ಪ್ರದಾನ ಮಂತ್ರಿ ಸಂಗ್ರಹಾಲಯಕ್ಕೆ ಬೇಟಿ ಕೊಡಲಿದ್ದೇನೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ಟಿ.ಎಂ.ಶ್ರೀದರರು ಚಂದ್ರಶೇಖರ್ ಭಾರತಯಾತ್ರೆಯಲ್ಲ ಕನಾಟಕ ಹಾದು ಹೋಗುವಾಗ ಭಾಗವಹಿಸಿದ ಮುಖಂಡರಾದ ನಿಜಲಿಂಗಪ್ಪ, ಹೆಗ್ಗಡೆ, ಬೊಮ್ಮಾಯಿ, ಪಟೇಲ್, ನಜೀರ್ ಸಾಬ್ ಮುಂತಾದವರ ಛಾಯಾ ಚಿತ್ರಗಳು ನೋಡಬಹುದು.
https://chandrashekharphotos.com/
Comments
Post a Comment