ಆನಂದಪುರಂ ಇತಿಹಾಸ -9, ರಂಗನಾಥ ದೇವರ ಮೂಲ ಅರ್ಚಕರ ಕುಟುಂಬಗಳು, ನಿರಂತರ ಒಂದು ದಿನವೂ ತಪ್ಪದೇ ರಂಗನಾಥನಿಗೆ ಹೂವಿನ ಸೇವೆ ಸಲ್ಲಿಸುವ ಪ್ರತಾಪ್ ಸಿಂಗ್ ಕುಟುಂಬ, ಈಗಿನ ಜನಾನುರಾಗಿ ಅರ್ಚಕರಾದ ವೆಂಕಟರಾಮು ಅಯ್ಯಂಗಾರ್.
#ಆನಂದಪುರದ_ರಂಗನಾಥ_ಸ್ವಾಮಿ_ಮೂಲ_ಭಕ್ತರು
#ನಿರಂತರ_ಅರವತ್ತು_ವರ್ಷದಿಂದ_ರಂಗನಾಥ_ದೇವರಿಗೆ_ನಿರಂತರ_ನಿತ್ಯಪೂಜೆಗೆ
#ಹೂವಿನ_ಸೇವೆ_ನೀಡುತ್ತಿರುವ_ಪ್ರತಾಪ್_ಸಿಂಗ್_ಕುಟುಂಬ.
ಅಯ್ಯಂಗಾರರು ಆನಂದಪುರಂಗೆ ಬಂದು ಯಶಸ್ವಿ ಜಮೀನ್ದಾರರಾದ ನಂತರ ರಂಗನಾಥ ದೇವರ ಪೂಜೆ, ಉತ್ಸವಗಳಿಗೆ ತಮ್ಮ ಸ್ವಜಾತಿ ಅಯ್ಯ೦ಗಾರ್ ಅರ್ಚಕರುಗಳನ್ನು ನೇಮಿಸುತ್ತಾರೆ ಅದಕ್ಕೂ ಮೊದಲು ಆನಂದಪುರಂನ ಅಗ್ರಹಾರದ ಬ್ರಾಹ್ಮಣರಾದ ಜೋಯ್ಸ್ ರು ಗಳು ಅರ್ಚಕರಾಗಿರಬೇಕು ಯಾಕೆಂದರೆ ರಾಮಕೃಷ್ಣ ಅಯ್ಯಂಗಾರ್ ಕಾಲದಲ್ಲಿ ನೀಲ ಕಂಠ ಜೋಯ್ಸರ ಕುಟುಂಬವೇ ಆನಂದಪುರಂನ ಪುರೋಹಿತರಾಗಿದ್ದರು ಅವರ ಹಿಂದಿನ ತಲೆಮಾರು ರಂಗನಾಥ ದೇವಾಲಯದ ಪುರೋಹಿತರಾಗಿರುವ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ, ನೀಲಕಂಠ ಜೋಯ್ಸರ ಸಹೋದರರೆ ಪತ್ರಕರ್ತರು ಸಾಹಿತಿಗಳು ಆಗಿರುವ ಅರಸಾಳಿನ ರಂಗನಾಥ ಜೋಯಿಸರು ಹೀಗೆ ಈ ಕುಟುಂಬದ ಕವಲುಗಳು ದೂರ ದೂರ ಹರಿದು ಹಂಚಿ ಹೋಗಿದ್ದಾರೆ.
ರಂಗನಾಥ ದೇವರಿಗೆ ಆನಂದಪುರಂ ಮಲಂದೂರಿನ ಕೃಷ್ಣ ಗೊಲ್ಲ ಸಮುದಾಯದವರು, ಆನಂದಪುರದ ಗಂಗಾಮತಸ್ಥರು ಮತ್ತು ಆಚಾಪುರ ಖ್ಯೆರಾ ಗ್ರಾಮಗಳ ಚೆಲುವಾದಿ ಸಮುದಾಯದವರು ಶತಮಾನಗಳಿಂದ ಮೂಲ ಭಕ್ತರು. ಈಗಲೂ ದೂರದ ಊರಲ್ಲಿ ನೆಲೆಸಿದ್ದರೂ ಪ್ರತಿ ವರ್ಷದ ರಥ ಸಪ್ತಮಿಯ ರಥೋತ್ಸವದಲ್ಲಿ ತಪ್ಪದೇ ಭಾಗವಹಿಸುತ್ತಾರೆ.
ಆನಂದಪುರದ ಊರ ಪುರೋಹಿತರಾದ ನೀಲಕಂಠ ಜೋಯಿಸರಿಗೆ ಕೃಷ್ಣಸ್ವಾಮಿ ಜೋಯಿಸ್ (ಈಗಿನ ಬಳ್ಳಿಬೈಲಿನಲ್ಲಿ ನೆಲೆಸಿರುವ ಕಿಟ್ಟ ಜೋಯಿಸರು) ಮತ್ತು ಪ್ರಾಣೇಶ್ ಜೋಯಿಸರೆಂಬ ಇಬ್ಬರು ಮಕ್ಕಳು.
ಕಿಟ್ಟಾ ಜೋಯಿಸರ ಮಗ ಸುಬ್ರಮಣ್ಯ ಜೋಯಿಸ್ ಈಗಲೂ ಆನಂದಪುರಂ ಭಾಗದಲ್ಲಿ ಪ್ರಸಿದ್ದ ಪುರೋಹಿತರಾಗಿ ಕೋಟೆಯ ಆಂಜನೇಯ ದೇವಾಲಯದಲ್ಲಿ ತಮ್ಮ ಕುಟುಂಬದಿಂದ ನಡೆದು ಬಂದ ಅರ್ಚಕ ವೃತ್ತಿ ಮುಂದುವರಿಸಿದ್ದಾರೆ.
ಪ್ರಾಣೇಶ್ ಜೋಯಿಸರಿಗೆ ಐವರು ಮಕ್ಕಳು ನೀಲಕಂಠ ಜೋಯಿಸರು (ಕಂಟಿ ಜೋಯಿಸರು), ರಾಮಚಂದ್ರ ಜೋಯಿಸರು ಮತ್ತು ಮಾಲತೇಶ ಹಾಗೂ ಅನುಸೂಯ ಕುಮುದ ಎಂಬಿಬ್ಬರು ಹೆಣ್ಣು ಮಕ್ಕಳು ಬೆಂಗಳೂರಲ್ಲಿ ನೆಲೆಸಿದ್ದಾರೆ, ರಾಮಚಂದ್ರ ಜೋಯಿಸರು ಬೆಂಗಳೂರಿನ ಜಯಚಾಮರಾಜೇಂದ್ರ ವಿಜ್ಞಾನ ಸಂಸ್ಥೆಯಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜನೆಯಲ್ಲಿದ್ದಾರೆ.
ನಿರಂತರ ಅರವತ್ತು ವರ್ಷದಿಂದ ರಂಗನಾಥ ದೇವರಿಗೆ ಒಂದು ದಿನವೂ ತಪ್ಪದೇ ನಿತ್ಯ ಪೂಜೆಗೆ ಹೂವು ಅರ್ಪಿಸುವ ಕುಟುಂಬ ಆನಂದಪುರದಲ್ಲಿದೆ, ಇಲ್ಲಿನ ಕನಕಮ್ಮಾಳ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಆಗಿದ್ದ ಬಾಲಾಜಿ ಸಿಂಗ್ ಮಕ್ಕಳಾದ ದ್ವಾರಕ ಸಿಂಗ್ ಮತ್ತು ಪ್ರತಾಪ್ ಸಿಂಗ್ ಈ ಸೇವೆ ನಿರಂತರ ನಡೆಸಿಕೊಂಡು ಬಂದರಿವುದು ಒಂದು ದಾಖಲೆಯೇ ಆಗಿದೆ.
60 ವಷ೯ದ ಹಿಂದೆ ದ್ವಾರಕಿ ಸಿಂಗ್ ಅಯ್ಯಂಗಾರರ ಮನೆಯ ಸಂಪಿಗೆ ಮರದ ಹೂವು ತೆಗೆದು ರಾಯರ ಮನೆ ಪೂಜೆಗೆ ಮತ್ತು ರಂಗನಾಥ ದೇವರ ನಿತ್ಯ ಪೂಜೆಗೆ ಬೇಕಾದಷ್ಟು ಹೂವು ನೀಡಿ ಉಳಿದ ಹೂವು ಮಾರಾಟ ಮಾಡಿ ಜೀವನ ಮಾಡುತ್ತಾ ಬಂದಿದ್ದು ಈಗಲೂ ಮುಂದುವರಿದಿದೆ.
ಈಗ ದ್ವಾರಕಿ ಸಿಂಗ್ ಇಲ್ಲ ಅವರ ಮಕ್ಕಳು ಮತ್ತು ಸಹೋದರ ಪ್ರತಾಪ್ ಸಿಂಗ್ ಕುಟುಂಬ ಈ ಸೇವೆ ನಡೆಸುತ್ತಿದೆ ಆದರೆ ಈಗ ಸಂಪಿಗೆ ಮರವೂ ಇಲ್ಲ ತಮ್ಮ ಬಡತನದ ಜೀವನದ ಜೊತೆ ಪ್ರತಿ ನಿತ್ಯ ಇನ್ನೂರು ರೂಪಾಯಿಯಷ್ಟು ಹೂವು ಖರೀದಿಸಿ ಬೆಳಿಗ್ಗೆ ರಂಗನಾಥನಿಗೆ ಅರ್ಪಿಸಿ ಉಳಿದ ಕೆಲಸಕ್ಕೆ ಪ್ರತಾಪ್ ಸಿಂಗ್ ಈಗಿನ ತಮ್ಮ 68 ನೇ ವಯಸಲ್ಲೂ ಮುಂದುವರಿಸಿದ್ದಾರೆ.
ಪ್ರತಾಪ್ ಸಿಂಗ್ ತಂದೆ ಭಾಲಾಜಿ ಸಿಂಗ್ ಆನಂದಪುರದ ಕನಕಮ್ಮಾಳ್ ಆಸ್ಪತ್ರೆ ನೌಕರಿ ಮಾಡಿದ್ದರೆ, ಅಜ್ಜ ಭಗವಾನ್ ಸಿಂಗ್ ಆನಂದಪುರಂ ನಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ದಪೇದಾರರಾಗಿದ್ದರು, ಇವರ ಮೂಲ ಮೈಸೂರಿನ ಗಂಜಾಂನವರು, ಟಿಪ್ಪು ಸುಲ್ತಾನ್ ಆನಂದಪುರದ ಕೋಟೆ ಕೆಳದಿ ಅರಸರಿಂದ ವಶ ಪಡಿಸಿಕೊಂಡ ನಂತರ ಮೈಸೂರು ರಾಜರ ಸ್ಯೆನಿಕರಾಗಿ ಬಂದವರು.
ಪ್ರತಾಪ್ ಸಿಂಗ್ ಆನಂದಪುರಂ ನ ವಿಲೇಜ್ ಪಂಚಾಯತ್ ನೌಕರರಾಗಿ 1972 ರಲ್ಲಿ ಆಗಿನ ವಿಲೇಜ್ ಅಕೌಂಟೆಂಟ್ ಕಂ ವಿಲೇಜ್ ಪಂಚಾಯತ್ ಕಾರ್ಯದರ್ಶಿ ಆಗಿದ್ದ ಶ್ಯಾಂಸುಂದರ್ ಕೆಲಸಕ್ಕೆ ಸೇರಿಸಿದ್ದರಂತೆ ಆಗ ಛೇರ್ ಮನ್ ಆಗಿದ್ದವರು ಯಡೇಹಳ್ಳಿಯ ಬಾಲ ಗಂಗಾದರ್ ಗೌಡರು .
ಆನಂದ ಆಳ್ವಾರ್ ನಂತರ ಬೆಂಗಳೂರಿನ ಅನೇಕಲ್ ಬಳ್ಳೂರು ಮೂಲದ ಶಿವಮೊಗ್ಗದ ಪ್ರಖ್ಯಾತ ಕೋಟೆ ಆಂಜನೇಯ ದೇವಾಲಯದಲ್ಲಿ ಪ್ರದಾನ ಅರ್ಚಕರಾಗಿದ್ದ ಶ್ರೀನಿವಾಸ ಅಯ್ಯಂಗಾರರ ಪುತ್ರ ಬಿ.ಎಸ್.ವೆಂಕಟರಾಮು ಅಯ್ಯಂಗಾರರು ರಂಗನಾಥ ದೇವಾಲಯದಲ್ಲಿ ಪುರೋಹಿತರಾಗಿ ಆನಂದಪುರದಲ್ಲಿ ಜನಾನುರಾಗಿಗಳಾಗಿದ್ದಾರೆ (38 ವರ್ಷದಿಂದ)ಇವರ ಪುತ್ರ ಕೂಡ ವೈದಿಕ ಶಾಸ್ತ್ರ ಕಲಿತು ಅರ್ಚಕ ವೃತ್ತಿ ಮುಂದುವರಿಸಿದ್ದಾರೆ.
#ಈ_ಹಿಂದೆ_ರಂಗನಾಥ_ದೇವರಿಗೆ_ಯಡೇಹಳ್ಳಿ_ತಿರುಮಲ_ದೇವರೆಂದೂ_ಕರೆಯುತ್ತಿದ್ದ_ಕಾರಣ
#ಏನೂ_ಅನ್ನುವುದಕ್ಕೆ_ಉತ್ತರ_ಮಾತ್ರ_ಸಿಕ್ಕಿಲ್ಲ.
(ನಾಳೆ ಮುಂದಿನ ಭಾಗ - 10)
Comments
Post a Comment