Blog number 865. ವಿಜ್ಞಾನಿಗಳಲ್ಲಿ ಮತ್ತು ಸಂಶೋದಕರಲ್ಲಿರುವ ಮಾನವೀಯತೆ ಕಳಕಳಿಯ ವೈದ್ಯ ಸಹೋದರರಾದ ಡಾಕ್ಟರ್ ಪ್ರೀತಂ ಮತ್ತು ಡಾಕ್ಟರ್ ಚೇತನ್ ರಿಗೆ ಇವರ ತಂದೆ ಜನಪ್ರಿಯ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಡಾಕ್ಟರ್ ಈಶ್ವರಪ್ಪರ ಪ್ರಭಾವ ಕಾರಣ ಆದ್ದರಿಂದ ಈಗಿನ ಪೈಪೋಟಿ ವೈದ್ಯಕೀಯ ಉದ್ಯೋಗದ ವ್ಯಾಪಾರಿ ಮನೋಭಾವಕ್ಕೆ ಹೊರತಾಗಿದ್ದಾರೆ.
#ಶಿವಮೊಗ್ಗದಲ್ಲಿ_ಡಯಾಬಿಟೀಸ್_ರಿವಸ೯ಲ್_ಅಭಿಯಾನ
#ಶಿವಮೊಗ್ಗದ_ಐಲೆಟ್ಸ್_ಹಾಸ್ಪಿಟಲ್_ಡಾಕ್ಟರ್_ಪ್ರೀತಂರಿಂದ
#ಸಂಪೂರ್ಣ_ಡಯಾಬಿಟೀಸ್_ನಿಂದ_ಮುಕ್ತರಾಗುವ_ಅವಕಾಶ.
ನನಗೆ 2009ರಲ್ಲಿ ಡಯಾಬಿಟೀಸ್ ನನ್ನ 44 ನೇ ವರ್ಷದಲ್ಲಿ ಪ್ರಾರಂಭ ಆಗಿತ್ತು ಆಗ ಡಾ.ನಾಗೇಂದ್ರ (ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮಾಲಿಕರು) ಮಾಗ೯ದರ್ಶನದಲ್ಲಿ ಡಾ.ಪ್ರೀತಂ ನನಗೆ ಡಯಾಬಿಟಿಕ್ ಚಿಕಿತ್ಸೆ ಪ್ರಾರಂಬಿಸಿದರು ಅವತ್ತಿನಿಂದಲೇ ಡಾ. ಪ್ರೀತಂ ಪರಿಚಿತರು.
ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಲದವರು ಇವರ ತಂದೆ ಡಾ.ಬಿ.ಈಶ್ವರಪ್ಪನವರು ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಊರಲ್ಲೆಲ್ಲಾ ಜನಪ್ರಿಯ ಡಾಕ್ಟರ್ ಆದವರು, ಇವರು ಮನಸ್ಸು ಮಾಡಿದ್ದರೆ ರಾಮಕೃಷ್ಣ ಹೆಗ್ಗಡೆ ಸರ್ಕಾರದಲ್ಲಿ ಮಂತ್ರಿ ಆಗಿರುತ್ತಿದ್ದರು.
ಬಳ್ಳಾರಿ ಜಿಲ್ಲೆಯ ವಿದಾನ ಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ವರ್ದಿಸುವ ಅವಕಾಶ ಡಾ. ಈಶ್ವರಪ್ಪರು ತಿರಸ್ಕರಿಸಿದ್ದು ಇತಿಹಾಸ.ಇವರು ನಿವೃತ್ತರಾದ ಮೇಲೂ ಶಿವಮೊಗ್ಗದ ಜೈಲ್ ರಸ್ತೆಯಲ್ಲಿನ ಇವರ ಕ್ಲೀನಿಕ್ ಬಡವರಿಗೆ ಜನಸಾಮಾನ್ಯರಿಗೆ ಅತ್ಯಾಪ್ತ ಚಿಕಿತ್ಸಾಲಯ ಆಗಿತ್ತು, ಕಳೆದ ವರ್ಷ (21-5-2021) ಇಹಲೋಕ ತ್ಯಜಿಸಿದ್ದಾರೆ.
ಇವರ ಮೊದಲ ಪುತ್ರ #ಡಾ_ಚೇತನ್_ಬಿ. ಶಿವಮೊಗ್ಗದ ತಿಲಕ್‌ನಗರದ ದರ್ಗಾ ಕಾಂಪ್ಲೆಕ್ಸ್ ನಲ್ಲಿ #ಸಾನಿಧ್ಯ_ಡೆ೦ಟಲ್_ಸ್ಪೆಷಲಿಟಿ ಆಸ್ಪತ್ರೆ ನಡೆಸುತ್ತಿದ್ದಾರೆ ಇವರು ಪ್ರೋಪೆಸರ್ ಹಾಗು ಪ್ರಸಿದ್ದ ಓರಲ್ ಮತ್ತು ಮಾಕ್ಸಿಲೋ ಪೇಶಿಯಲ್ ಸರ್ಜನ್ (ದಂತ ವೈದ್ಯಕೀಯ ಸರ್ಜನ್ ಮತ್ತು ಅಪಘಾತದಲ್ಲಿ ಛಿದ್ರವಾಗುವ ಮುಖ ಚಹರೆ ಸರಿಪಡಿಸುವ ಶಿವಮೊಗ್ಗದ ಏಕೈಕ ಸರ್ಜನ್ )
ಇವರ ಎರಡನೆ ಪುತ್ರ #ಡಾ_ಪ್ರೀತಮ್_ಬಿ. ಪ್ರಖ್ಯಾತ ಡಯಾಬಿಟೀಸ್ ಸ್ಪೆಷಲಿಸ್ಟ್ ಇವರು ಶಿವಮೊಗ್ಗ ಜಿಲ್ಲೆಯಲ್ಲೇ ಪ್ರಥಮವಾದ ಡಯಾಬಿಟೀಸ್ ಹಾಸ್ಪಿಟಲ್ ಪ್ರಾರಂಬಿಸಿ ದಾಖಲೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206 ರ ಶಿವಮೊಗ್ಗದ ದ್ವಾರಕಾ ಕಲ್ಯಾಣ ಮಂಟಪದ ಪಕ್ಕ #ಐಲೆಟ್ಸ್_ಡಯಾಬಿಟೀಸ್_ಹಾಸ್ಪಿಟಲ್ ಕಳೆದ ವರ್ಷದಿಂದ ಕಾಯಾ೯ರಂಭಗೊಂಡಿದೆ ಇವರ ಈ ಸಾಹಸಕ್ಕೆ ಈಗ ಇನ್ನೊಂದು ಹೊಸ ಸಾಹಸ ಕೂಡ ನಾಡಿದ್ದು ಗುರುವಾರ #ಸಂಕಷ್ಟ_ಹರ_ಚತುರ್ಥಿಯಂದು (19-5-2022) ಪ್ರಾರಂಬಿಸಲಿದ್ದಾರೆ ಅದೇ #ಡಯಾಬಿಟೀಸ್_ರಿವರ್ಸಲ್ ಚಿಕಿತ್ಸಾ ವಿಧಾನ.
ಇಲ್ಲಿಯವರೆಗೆ ಡಯಾಬಿಟೀಸ್ ಬಂದಾಗ ಅದರ ನಿಯಂತ್ರಣದ ಚಿಕಿತ್ಸೆ ಮಾತ್ರವಾಗಿತ್ತು ಆದರೆ ಈಗ ವಿಶ್ವದ ಮುಂದುವರಿದ ದೇಶದಲ್ಲಿ ಸಂಪೂರ್ಣ ಡಯಾಬಿಟೀಸ್ ರಿಂದ ಮುಕ್ತರಾಗಿಸುವ ಗುಣವಾಗಿಸುವ ಡಯಾಬಿಟೀಸ್ ರಿವರ್ಸಲ್ ಚಿಕಿತ್ಸೆ(ಹೊಸಾ ಟ್ರೆಂಡ್) ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಪ್ರಾರಂಬಿಸಲಿದ್ದಾರೆ.
ಅಷ್ಟೆ ಅಲ್ಲ ಮುಂದಿನ ದಿನದಲ್ಲಿ ಡಯಾಬಿಟೀಸ್ ರೋಗಿಗಳಿಗೆ ಸಮತೋಲನ ಆಹಾರದ ಪುಡ್ ಕಿಟ್ ಯೋಜನೆಯ ಕನಸು ಇವರಿಗೆ ಇದೆ,ಇದರ ಬಗ್ಗೆ ವಿಡಿಯೋದಲ್ಲಿ ವಿವರವಾದ ಮಾತು ಕಥೆ ಇದೆ.
ಕಳೆದ ವರ್ಷ ಇವರ ಹಾಸ್ಪಿಟಲ್ ಉದ್ಘಾಟನೆಗೆ ಆಹ್ವಾನಿಸಿದ್ದರೂ ನನಗೆ ಹೋಗಲಾಗಿರಲಿಲ್ಲ ಇವತ್ತು ನನ್ನ ಆರೋಗ್ಯ ತಪಾಸಣೆಗೆ ಹೋದವನು ಶಿವಮೊಗ್ಗ ಜಿಲ್ಲೆಯ ಕೆಲ ಪ್ರಥಮದ ಸಾಹಸಿ (ಲಡಾಕ್ ಬೈಕ್ ರೈಡ್, ಕಾರ್ ರೇಸ್, ಕ್ರಿಕೆಟ್ ಅಂಪೈರ್, ಕ್ರೀಡಾಪಟು,ಚಾರಣ, ಕನ್ನಡ ಸಾಹಿತ್ಯದ ಓದುಗ ಹೀಗೆ ಹತ್ತು ಹಲವು ) ಡಾ. ಪ್ರೀತಮ್ ಗೆ ಶಾಲು ಹೊದಿಸಿ #ಶ್ರೀವರಸಿದ್ಧಿ_ವಿನಾಯಕ ದೇವರ ಮೂರ್ತಿಯ ನೆನಪಿನ ಕಾಣಿಕೆ ಮತ್ತು ಶಿವಮೊಗ್ಗದ #ಅಭಿಶೇಕ್_ಸ್ಪೀಟ್ ನ ಚಂಪಾಕಲಿ ಸಿಹಿಯೊಂದಿಗೆ ಅಭಿನಂದಿಸಿದೆ.
ಸಂಕಷ್ಟಹರ ಚತುರ್ಥಿಯಂದು ಇವರ ಹೊಸ ಯೋಜನೆ ಪ್ರಾರಂಭಕ್ಕೆ ಈ ವರಸಿದ್ಧಿವಿನಾಯಕ ದೇವರ ಮೂರ್ತಿ ಇವರಿಗೆ ವರ ನೀಡಿ ಸಿದ್ಧಿ ಅನುಗ್ರಹಿಸಲಿ ಎಂದು ಹಾರೈಸುತ್ತೇನೆ.
2009 ರಿಂದ ಅಂದರೆ 13 ವರ್ಷದಿಂದ ಇವರ ಚಿಕಿತ್ಸೆ ಮತ್ತು ಮಾರ್ಗದರ್ಶನದಿಂದ ಇವತ್ತು ಡಯಾಬಿಟಿಸ್ ಎಕ್ಸಿಕ್ಯೂಟಿವ್ ಪ್ರೊಪೈಲ್ ಎಂಬ ವೈದ್ಯಕೀಯ ಪರೀಕ್ಷೆಯಲ್ಲಿ (ರೂ 2365ರ ಈ ಪ್ಯಾಕೇಜ್‌ನಲ್ಲಿ ಅನೇಕ ಪರೀಕ್ಷೆಗಳು ಮಾಡುತ್ತಾರೆ) ನನ್ನ ಬ್ಲಡ್ ಶುಗರ್ ( FBS) - 74 ಇದೆ ಮತ್ತು PPBS 86 ಇದೆ, BP 130/80, HbA1c 6 ರಲ್ಲಿದೆ ಅಂದರೆ ಸಂಪೂರ್ಣ ನಾಮ೯ಲ್ ಆಗಿದೆ.
ಡಾಕ್ಟರ್ ಗಳಲ್ಲಿ ವ್ಯಾಪಾರಿ ಮನೋಭಾವ ಈಗಿನ ವೈದ್ಯಕೀಯ ಉದ್ಯಮದ ಪೈಪೋಟಿಯ ಆದುನಿಕ ಜಗತ್ತಿನಲ್ಲಿ ಸಹಜ ಆದರೆ ನಾನು ನೋಡಿದಂತೆ ನನ್ನ ಅನುಭವದಲ್ಲಿ ಈ ಇಬ್ಬರು ಸಹೋದರರಲ್ಲಿ ಆ ಹಪಾಹಪಿ ಇಲ್ಲ. ವಿಜ್ಞಾನಿಗಳಲ್ಲಿ - ಸಂಶೋದಕರಲ್ಲಿರುವಂತ ಮಾನವೀಯ ಗುಣಗಳಿದೆ ಆದ್ದರಿಂದ ಈ ರೀತಿ ಸಾಹಸ ಮಾಡುತ್ತಿದ್ದಾರೆ ಬಹುಶಃ ಇವರ ತಂದೆ ಡಾ.ಈಶ್ವರಪ್ಪನವರು ಇವರನ್ನು ಈ ರೀತಿ ಬೆಳೆಸಿದ್ದಾರೆ ಮತ್ತು ಅವರ ಪ್ರಭಾವದಿಂದ ಇವರು ಹೀಗೆ ಇದ್ದಾರೆ ಅಂತ ಬಾವಿಸುತ್ತೇನೆ.
ಇದೇ ಬಾನುವಾರ (22-5-2022) ಇವರ ತಂದೆಯ ಪುಣ್ಯ ತಿಥಿ ಕೂಡ ಅವರ ಆತ್ಮಕ್ಕೆ ಶಾಂತಿ-ಸದ್ಗತಿಗಾಗಿ ಪ್ರಾರ್ಥಿಸುತ್ತೇನೆ.
ಡಯಾಬಿಟೀಸ್ ರಿವರ್ಸಲ್ ಬಗ್ಗೆ ತಿಳಿಯುವ ಆಸಕ್ತಿ ಇರುವವರು ಡಾ. ಪ್ರೀತಂರ ವಿಡಿಯೋ ಪೂರ್ಣವಾಗಿ ನೋಡಿ.
Comments
Post a Comment