Blog number number 874. ಶರಾವತಿ ಮುಳುಗಡೆ ಸಂತ್ರಸ್ಥರ ಊರಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮಕ್ಕೆ ನನ್ನ ಬಸ್ ಪರ್ಮಿಟ್. ಆಗಿನ ಜಿಲ್ಲಾದಿಕಾರಿ ವಿಜಯ ಕುಮಾರರ ಕನಸಿನ ಗ್ರಾಮಾಂತರ ಸಾರಿಗೆ ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು, ಪ್ರಸ್ತಾವಿಕ ಭಾಷಣ ಮಾಡಿದ ನಾನು.
#ರಿಪ್ಪನ್ಪೇಟೆಯಿಂದ_14_ಕಿಮಿ_ದೂರ
#ಅಭಯಾರಣ್ಯದ_ಮಧ್ಯೆ_ಶರಾವತಿ_ಮುಳುಗಡೆ_ಸಂತ್ರಸ್ಥರ_ಬೀಡು.
#ಈ_ಹಳ್ಳಿಗೆ_ಬಸ್_ಸೌಕರ್ಯ_ನೀಡಿದ_ನನ್ನ_ಅನುಭವ.
#ಆಗಿನ_ಉತ್ಸಾಹಿ_ಜಿಲ್ಲಾಧಿಕಾರಿ_ವಿಜಯಕುಮಾರರ_ಗ್ರಾಮಾಂತರ_ಸಾರಿಗೆ_ಯೋಜನೆ.
#ಅದನ್ನು_ಶಿವಮೊಗ್ಗ_ನೆಹರೂ_ಸ್ಟೇಡಿಯಂನಲ್ಲಿ_ಉದ್ಘಾಟಿಸಿದ_ಆಗಿನ_ಮುಖ್ಯಮಂತ್ರಿ_ವೀರೆಂದ್ರಪಾಟೀಲರು.
#ಪ್ರಸ್ತಾವಿಕ_ಭಾಷಣ_ಮಾಡಿದ_ನಾನು_ಜಿಲ್ಲಾ_ಗ್ರಾಮಾಂತರ_ಸಾರಿಗೆ_ಬಸ್_ಮಾಲಿಕರ_ಸಂಘದ_ಅಧ್ಯಕ್ಷನಾಗಿದ್ದೆ.
ಇವತ್ತು ಶಿವಮೊಗ್ಗ ಜಿಲ್ಲಾದಿಕಾರಿಗಳು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಿಂದ 14 ಕಿಮಿ ದೂರದ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
ಈ ಸಂದರ್ಭದಲ್ಲಿ 1992-93ರ ಒಂದು ಘಟನೆ ನೆನಪಾಯಿತು ಹಾಗಾಗಿ ಅದನ್ನು ಬರೆಯಲು ಅವಕಾಶ.
ಸುಮಾರು 30 ವರ್ಷದ ಹಿಂದೆ ನನಗೆ 26 ರ ಪ್ರಾಯ, ಹೊಸದು ಮತ್ತು ಹೊಸತನದ ಬಗ್ಗೆ ತೆರೆದುಕೊಳ್ಳುವ ಬಿಸಿ ರಕ್ತದ ಹುಮ್ಮಸ್ಸು, ಆಗ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರು ವಿಜಯ ಕುಮಾರ್.
ತಮಿಳುನಾಡಿನ ಮೂಲದ ಐ.ಎ.ಎಸ್ ಅಧಿಕಾರಿ ತುಂಬಾ ಜನಪರ ಕಾಳಜಿಯ ಜಿಲ್ಲಾಧಿಕಾರಿಗಳು ಅವರು ಶಿವಮೊಗ್ಗ ಜಿಲ್ಲೆಗೆ ಬಂದಾಗ ಇಲ್ಲಿನ ಅನೇಕ ಕುಗ್ರಾಮಗಳಿಗೆ ರಸ್ತೆ ಇದ್ದರೂ ಬಸ್ ಸೌಕರ್ಯ ಇರಲಿಲ್ಲ.
ಆ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿತ್ತು, ಅವತ್ತು ಹಾಸ್ಟೆಲ್ ಸೌಲಭ್ಯ ಇರಲಿಲ್ಲ, ದ್ವಿಚಕ್ರ ವಾಹನ ಈಗಿನಂತೆ ಎಲ್ಲರೂ ಹೊಂದಿರಲಿಲ್ಲ.
ಖಾಸಾಗಿ ಬಸ್ ಕಂಪನಿಗಳಾದ ಗಜಾನನ - ಹನುಮಾನ್ - ಕೃಷ್ಣ ಮತ್ತು ವಿಜಯ ಮೋಟಾರ್ಸ್ ಗಳ ಮಾನೊಪಲ್ಲಿಯಲ್ಲಿ ಪೈಪೋಟಿಯಲ್ಲಿ ಅವರೂ ಬಸ್ ಬಿಡುವುದಿಲ್ಲ, ಬೇರೆಯವರಿಗೆ ಬಸ್ ಸೌಕರ್ಯ ನೀಡಲು ಬಿಡುವುದಿಲ್ಲ ಎಂಬ ಶಫಥ ಅವರದ್ದು.
ಕೆ .ಎಸ್.ಆರ್. ಟಿ .ಸಿ . ಬಸ್ ಬಿಡಲು ಆ ಸಾರಿಗೆ ಇಲಾಖೆ ಸಶಕ್ತ ಆಗಿರದ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಆಥಾರಿಟಿ ಛೇರ್ಮನ್ ಆಗಿದ್ದ ಜಿಲ್ಲಾದಿಕಾರಿ ಒಂದು ಯೋಜನೆ ಜಾರಿ ಮಾಡಿದರು.
ಬಸ್ ಸೌಕರ್ಯ ಬೇಕಾದ ಮಾರ್ಗಗಳ ಗುರುತಿಸಿ ಆ ಲೈನ್ ಗೆ ಬಸ್ ಬಿಡಲು ಖಾಸಾಗಿ ಯುವ ಉದ್ಯಮಿಗಳಿಗೆ ಆಹ್ವಾನಿಸಿ ಪ್ರತಿ ತಾಲ್ಲೂಕಿನಲ್ಲಿ ಜನಸಂಪರ್ಕ ಸಭೆ ಕರೆಯುತ್ತಿದ್ದರು ಇದರಿಂದ ಅಸಾಧ್ಯವಾದ ಬಸ್ ಪಮಿ೯ಟ್ ಸರಳವಾಗಿ ಅನೇಕ ಸ್ವಯಂ ಉದ್ಯಮಿಗಳಿಗೆ ಅವಕಾಶ ಉಂಟು ಆಯಿತು, ಅನೇಕರಿಗೆ ಉದ್ಯೋಗವೂ ಸಿಕ್ಕಿತು.
ಹೊಸನಗರ ತಾಲ್ಲೂಕ್ ಕೇಂದ್ರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಾನು ಇವತ್ತು ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡಿರುವ ಬೆಳ್ಳೂರಿನಿಂದ - ರಿಪ್ಪನ್ ಪೇಟೆ - ಆನಂದಪುರಂ - ಸಾಗರ ಮತ್ತು ತಿರುಗಿ ಇದೇ ಮಾರ್ಗದಲ್ಲಿ ಬೆಳ್ಳೂರು ಸೇರಿ ಹಾಲ್ಟ್ ಮಾಡುವ ಬಸ್ ಮಾರ್ಗದಲ್ಲಿ ಬಸ್ ಸೌಕಯ೯ ನೀಡಲು ಅರ್ಜಿ ಸಲ್ಲಿಸಿ ಪರ್ಮಿಟ್ ಪಡೆದಿದ್ದೆ.
ಕೇರಳದ ಕಾಸರಗೋಡಿನಿಂದ ಹಳೇ ಬಸ್ ಒಂದನ್ನು ಖರೀದಿಸಿ ತಂದಿದ್ದು ಅದರದ್ದೇ ಒ0ದು ಕಥೆ.
ಮೊದಲ ದಿನ ಬೆಳ್ಳೂರು ಗ್ರಾಮಸ್ಥರು ನನ್ನ ಹೆಸರಿನ ಪರ್ಮಿಟ್ ನ "ಪ್ರಶಾಂತ್ " ಎಂಬ ಬಸ್ ನ್ನು ಅವರ ಊರಿಗೆ ತಲುಪಿಸಲು ತುಂಬಾ ಶ್ರಮ ಪಟ್ಟರು ಅವರ ಕಾಳಜಿ ಮತ್ತು ಆಸಕ್ತಿಗೆ ನಾನು ಇವತ್ತೂ ಚಿರರುಣಿ. ಅವತ್ತು ರಸ್ತೆ ಸರಿಪಡಿಸಿ, ರಸ್ತೆ ಸಂಚಾರಕ್ಕೆ ಅಡ್ಡವಾಗಿದ್ದ ಬಿದಿರು ಮೆಳೆ, ಮರದ ರೆಂಬೆ ಎಲ್ಲಾ ಶ್ರಮದಾನದಿಂದ ತೆರವು ಮಾಡಿಕೊಟ್ಟಿದ್ದು ಮರೆಯಲಾಗುವುದಿಲ್ಲ.
ಬೆಳ್ಳೂರು ಅಭಯಾರಣ್ಯದ ಮಧ್ಯದ ಶರಾವತಿ ಮುಳುಗಡೆಯ ರೈತರು ವಾಸಿಸುತ್ತಿರುವ ಹಳ್ಳಿ ಅವತ್ತು ಕುಗ್ರಾಮ ಆಗಿತ್ತು.
ನಂತರ ಜಿಲ್ಲಾದಿಕಾರಗಳು ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ನೇಮಿಸಿ ಆಗಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್, ಕೃಷಿ ಮಂತ್ರಿ ಬಂಗಾರಪ್ಪರ ಕರೆಸಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಗ್ರಾಮಾಂತರ ಸಾರಿಗೆ ನೂರಾರು ಬಸ್ಸುಗಳನ್ನು ಮುಖ್ಯಮಂತ್ರಿ ವಿರೇ೦ದ್ರ ಪಾಟೀಲರು ಹಸಿರು ಭಾವುಟ ತೋರಿಸಿ ಉದ್ಘಾಟನೆ ಮಾಡಿದ ಐತಿಹಾಸಿಕ ಸಭೆಯಲ್ಲಿ ಪ್ರಸ್ತಾವಿಕ ಭಾಷಣಕ್ಕೆ ನನಗೆ ಅವಕಾಶ ಕಲ್ಪಿಸಿದ್ದು ನನಗೆ ನನ್ನ ಜೀವಮಾನದ ಸವಿ ನೆನಪು.
ಬಸ್ಸು ನಂತರ ನಾಗತಿಹಳ್ಳಿ ಚಂದ್ರಶೇಖರರ ಮೊದಲ ಚಲನಚಿತ್ರ "ಉಂಡೂ ಹೋದ ಕೊಂಡು ಹೋದ" ಸಿನಿಮಾದಲ್ಲಿ ನಾಯಕ ನಟ ಅನಂತನಾಗ್ ಹಳ್ಳಿಗೆ ಬರುವ ರಾಜಧಾನಿ ಎಕ್ಸ್ ಪ್ರೆಸ್ ಆಗಿ ಚಿತ್ರಿಕರಣಕ್ಕೆ ಉಪಯೋಗಿಸಿದ ದಾಖಲೆಯೂ ಆಯಿತು.
ಇಂತಹ ಕುಗ್ರಾಮಕ್ಕೆ ಬಸ್ ಸೌಕಯ೯ ನೀಡಬೇಕೆಂಬ ಆಗಿನ ಜಿಲ್ಲಾದಿಕಾರಿಗಳಾದ ವಿಜಯ ಕುಮಾರರ ಸದುದ್ದೇಶಕ್ಕೆ ನಾನು ಕೈಜೋಡಿಸಿದ್ದೆನೆಂಬ ಹೆಮ್ಮೆ ನನ್ನದು.
ಹಾಗಾಗಿ #ಬೆಳ್ಳೂರು ಎಂಬ ಹಳ್ಳಿ ನನ್ನ ಜೀವಮಾನದಲ್ಲಿ ಮರೆಯಲಾಗದ್ದು
Comments
Post a Comment