Blog number 854. ಅಮಟೆಕಾಯಿ ಮೌಲ್ಯವರ್ಧನೆ ಆಗಬೇಕಾಗಿದೆ, ಅಮಟೆಕಾಯಿ ಇಲ್ಲದೆ ಕೆಸುವಿನ ಕರಕಲಿ ಮತ್ತು ಹುಳ್ಳಿಕಟ್ಟು ಸಂಪೂರ್ಣವಾಗುವುದಿಲ್ಲ.
#ಮಾವಿನ_ಮಿಡಿ_ಮುಗಿದಂತೆ_ಅಮಟೆಕಾಯಿ_ಮಿಡಿ
#ಅಮಟೆಕಾಯಿ_ಮೌಲ್ಯವರ್ಧನೆ_ಕೆಲಸ_ಆಗಬೇಕಾಗಿದೆ.
#ಒಂದು_ಕಾಲದಲ್ಲಿ_ಹುರುಳಿಕಟ್ಟಿನಲ್ಲಿ_ಕೆಸುವಿನ_ಕರಕಲಿಯಲ್ಲಿ_ಅಮಟೆಕಾಯಿ_ಇರಲೇ_ಬೇಕಿತ್ತು.
ಸಂಸ್ಕೃತದಲ್ಲಿ ಅಮಟೆಕಾಯಿಗೆ ಅಮರಾಟ ಅನ್ನುತ್ತಾರೆಂದರೆ ಅಮಟೆಕಾಯಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷಿಯದ ಮೂಲದ್ದಿರಬಹುದಾ ಎಂಬ ಅನುಮಾನಗಳು ಇದೆ ಯಾಕೆಂದರೆ ಅಮಟೆ ಅಮೇರಿಕಾದ ಉಷ್ಣವಲಯದ ಮೂಲದದ್ದು 17 ನೇ ಶತಮಾನದಲ್ಲಿ ಭಾರತಕ್ಕೆ ಪೋಚು೯ಗೀಸರಿಂದ ತಲುಪಿತು ಎ೦ದು ದಾಖಲಿಸಿದ್ದಾರೆ.
ನಮ್ಮ ಮನೆಯಲ್ಲಿ 1997 ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಘಂಟಿನಕೊಪ್ಪದ ಮಾಜಿ ಸಾಗರ ತಾಲ್ಲೂಕ್ ಬೋರ್ಡ್ ಸದಸ್ಯರಾಗಿದ್ದ ಹಿರೇನಾಯಕರ ಪುತ್ರ ಸ್ವಾಮಿ ರಾವ್ ಅವರ ಮನೆಯ ಅಮಟೆ ಮರದ ರೆಂಬೆ ತಂದು ಕೊಟ್ಟಿದ್ದರು.
ನಾನು ಅವರ ಕೈಯಲ್ಲೇ ನನ್ನ ಅವರ ಗೆಳೆತನದ ಸಂಬಂದದ ನೆನಪಿಗಾಗಿ ನಡೆಸಿದೆ ಅದು ಹುಲುಸಾಗಿ ಬೆಳೆದಿದೆ, ಕಾಲ ಕಾಲಕ್ಕೆ ರೂಪಾಂತರವೂ ಮಾಡಿದ್ದೇನೆ.
ಅಮಟೆಕಾಯಿ ಎಳೆ ಮಿಡಿ ಉಪ್ಪಿನಕಾಯಿ, ಪೂರ್ಣ ಬೆಳೆಯುವ ಮೊದಲು ಉದ್ದ ಸಿಗಿದು ಹಾಕುವ ಕಡಿ ಉಪ್ಪಿನಕಾಯಿ, ನಂತರ ಜಜ್ಜಿ ಇಡಿಯಾಗಿ ಸಿಹಿ ಅಥವ ಕಾರದ ಉಪ್ಪಿನ ಕಾಯಿ, ಮಾವಿನ ಮಿಡಿಯಂತೆ ಚಟ್ಟಿಸಿ ಹಾಕುವ ಉಪ್ಪಿನಕಾಯಿ ಹೀಗೆ ತರಹಾವಾರಿ ಉಪ್ಪಿನಕಾಯಿ ಮಾಡುತ್ತಾರೆ.
ಕೆಸುವಿನ ಸೊಪ್ಪಿನ ಅಡುಗೆಯಲ್ಲಿ ಅಮಟೆಕಾಯಿ ಜಜ್ಜಿ ಹಾಕಿದರೆ ಅದರ ರುಚಿಯೇ ಬೇರೆ, ಎತ್ತಿನ ಬೇಸಾಯದ ದಿನದಲ್ಲಿ ಹುರುಳಿ ಬೇಸಿ ಅವುಗಳಿಗೆ ಹಾಕಬೇಕಾದ ಕಾಲದಲ್ಲಿ ರೈತರ ಮನೆಗಳಲ್ಲಿ ನಿತ್ಯ ಹುರುಳಿ ಹಾಲು ಬೆಳೆದ ಅಮಟೆಕಾಯಿ ಜಜ್ಜಿ ಹಾಕಿ ಕುದಿಸಿ ಹುರುಳಿ ಕಟ್ಟು ಮಾಡುತ್ತಿದ್ದರು ಆಗೆಲ್ಲ ಹುರುಳಿ ಕಟ್ಟಿನಲ್ಲಿ ಇರುತ್ತಿದ್ದ ಅಮಟೆಕಾಯಿಗೆ ಮಕ್ಕಳಲ್ಲಿ ಪೈಪೋಟಿ ಇರುತ್ತಿತ್ತು.
ಅಮಟೆಕಾಯಿಗೆ ಈಗಲೂ ಬೆಲೆ ಇಲ್ಲ ಇದರಿಂದ ಉಪ್ಪಿನಕಾಯಿ ಹೊರತು ಪಡಿಸಿ ಇದರ ಹುಳಿ ರಸಕ್ಕೆ ಬೆಲೆ ಬರುವಂತೆ ಅಮಟೆಕಾಯಿ ಮೌಲ್ಯವರ್ಧನೆಯ ಸಂಶೋದನೆಗಳು ಆಗಬೇಕಾಗಿದೆ.
Comments
Post a Comment