Blog number 866.ಗೋರಕನಾಥಪುರದ ಯೋಗಿ ಆದಿತ್ಯನಾಥರ ಸುಪರ್ದಿಯ ಕುಂದಾಪುರ ಸಮೀಪದ ಸಿದ್ದಾಪುರದ ಎಡಮೊಗೆಯ ಹಲವಾರಿ ಮಠದ ಗುರುಗಳಾಗಿದ್ದ ಸೋಮನಾಥ ಪೀರ್ ಬಾವೋಜಿ ಮಧ್ಯ ಪ್ರದೇಶದ ಗ್ವಾಲಿಯರ್ ನವರು
#ಗೊರಕನಾಥಪುರದ_ಯೋಗಿ_ಆದಿತ್ಯನಾಥರ_ಸುಪರ್ದಿಯ_ಕರ್ನಾಟಕದ_ನಾಥಪಂಥದ_ಮಠ
#1978ರಲ್ಲಿ_ಸಾಗರಕ್ಕೆ_ಬಂದ_ಬಾರಾಪಂಥ_ಯಾತ್ರೆ_ನೋಡಿದ್ದೆ
#ಆ_ಯಾತ್ರೆಯಲ್ಲಿ_ಬಂದವರೇ_ಸೋಮನಾಥ_ಪೀರ್_ಬಾವೋಜಿ.
ಸೋಮನಾಥ ಜೀ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.
ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಉತ್ತರ ಪ್ರದೇಶದ ಗೋ ರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.
ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬ ಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ. ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ಯುತ್ತಾರೆ.
1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಇಲ್ಲಿಗೆ ಬಂದವರು, ಆಗ ಸಾಗರದಲ್ಲಿ ನಾವೆಲ್ಲ 8 ನೇ ತರಗತಿ ವಿದ್ಯಾರ್ಥಿಗಳು, ದಿಡೀರ್ ಆಗಿ ಸಾಗಿ ಬಂದ ನೂರಾರು ಸನ್ಯಾಸಿಗಳ ಗುಂಪು ಸಾಗರ ಪಟ್ಟಣ ಮಧ್ಯ ಸಾಗಿ ಗಣಪತಿ ದೇವಸ್ಥಾನ ತಲುಪುವ ತನಕ ನಾವು ಈ ಜೊಂಡಿ ಯಾತ್ರೆ ಹಿಂಬಾಲಿಸಿದ್ದೆವು.
ನನ್ನ ಅವರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಅವರಲ್ಲಿ ಇವರ ಬಗ್ಗೆ, ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು.
ನನ್ನ ಬಗ್ಗೆ ಕೂಡ ಆ ಜನರಿಂದ ತಿಳಿದುಕೊಂಡಿದ್ದರು ಗುರುಗಳು, ಹಾಗೆ ಒಮ್ಮೆ ಅವರ ಸಂದಶ೯ನವಾಯಿತು, ಮುಂದೆ ಅವರು ನನ್ನ ಮನೆಗೆ ಅಚಾನಕವಾಗಿ ಬಂದರು ಅವತ್ತು ನನ್ನ ಮನೆಯ ದೇವರ ಕೋಣೆಯಲ್ಲಿ ಅವರು ಪೂಜೆ ನೆರವೇರಿಸಿದ್ದರು, ಒಮ್ಮೆ ಅವರನ್ನ ನಮ್ಮಲ್ಲಿಂದ ಅವರ ಮಠಕ್ಕೆ ಬಿಡಲು ನನ್ನ ಕಾರಲ್ಲಿ ಕರೆದೊಯ್ವ ಅವಕಾಶ ದೊರೆತಿತ್ತು.
ನಮ್ಮ ಊರ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 1008 ನಾರಿಕೇಳಾ ಮಹಾಗಣಯಾಗ ಹಮ್ಮಿಕೊಂಡಿದ್ದೆವು ಆಗ ಸೋಂದಾದ ಸ್ವಣ೯ವಲ್ಲಿ ಸ್ವಾಮೀಜಿ ಮತ್ತು ಇವರನ್ನ ಕರೆದಿದ್ದೆ, ಇವರಿಂದ ರಥೋತ್ಸವ ಉದ್ಘಾಟಿಸಿದೆವು,ಅ೦ದಿನ ದಿನದಲ್ಲಿ ಅಚ೯ಕರು ವತಿ೯ಸಿದ ರೀತಿ ಬೇಸರ ತರಿಸಿತ್ತು, ಸ್ವಣ೯ವಲ್ಲಿ ಸ್ವಾಮಿಗಳನ್ನ ಸ್ವಾಗತಿಸಲು ನಾ ಮುಂದು ತಾ ಮುಂದು ಅಂತಿದ್ದವರು ಇವರ ಸ್ವಾಗತಕ್ಕೆ ಒಬ್ಬರೂ ಬರಲಿಲ್ಲ.
ಇವರ ಜೊತೆ ಒಡನಾಟ ನನಗೆ ಒಳ್ಳೆ ಸತ್ಸಂಗ ಆಯಿತು, ಅನೇಕ ಬಾರಿ ಈ ಮಾಗ೯ದಲ್ಲಿ ಬರುವಾಗ ರಾತ್ರಿ ಇವರನ್ನ ಬೇಟೆ ಆಗುತ್ತಿದ್ದೆ.
ಇವರ ಊರು ಮಧ್ಯ ಪ್ರದೇಶದ ಗ್ವಾಲಿಯರ್, ಸಂಸಾರಿಗಳಾಗಿ ಮಕ್ಕಳು ಹೊಂದಿದ ನಂತರ ಇವರಿಗೆ ಸಂನ್ಯಾಸದ ಮೇಲೆ ಮನಸಾಯಿತು, ಜಾತಿ, ದಮ೯, ಬಾಷೆ ಹಂಗಿಲ್ಲದ ನಾಥಪಂಥದಲ್ಲಿ ಆಸಕ್ತಿ ಉ೦ಟಾಗಿ ಅಲ್ಲೇ ಸನ್ಯಾಸ ತೆಗೆದುಕೊಂಡರು,86 ಜನ್ಮ ಸನ್ಯಾಸಿ ಆದವರಿಗೆ ಮಾತ್ರ ನಾಸಿಕದಿಂದ 12 ವಷ೯ಕ್ಕೆ ಒಮ್ಮೆ ಮಂಗಳೂರಿನ ಕದ್ರಿಗೆ ಬರುವ ಬಾರಾ ಪಂಥ ಜೊಂಡಿಗೆ ಅವಕಾಶ ಸಿಗುತ್ತೆ ಅನ್ನುವ ಬಲವಾದ ನಂಬಿಕೆ ನಾಥಪಂಥದಲ್ಲಿದೆ,ಇವರಿಗೆ ಭಾಗವಹಿಸುವ ಅವಕಾಶ ಸಿಗುತ್ತದೆ.
ಹಾಗೆ ಬಂದ ಜೋOಡಿ ಯಾತ್ರೆ ಹಲವಾರಿ ಮಠ ತಲುಪಿದಾಗ ಇಲ್ಲಿ ಏನೂ ಇರಲಿಲ್ಲ.ಹಿಂದೆ ನೇಮಿಸಿದ ಸ್ವಾಮಿ ಕಾಲವಾಗಿದ್ದರು, ನಂತರ ಮಠದ ಜಮೀನು ಯಾರೋ ವಶಪಡಿಸಿಕೊಂಡಿದ್ದರು, ಕಾಲ ಬೈರವನ ಗುಡಿ ನಾಶವಾಗಿ ಪೀಠ ಮಾತ್ರ ಉಳಿದಿತ್ತು. ಪೂಜೆ ಪುನಸ್ಕಾರ ಇರಲಿಲ್ಲ, ಹಳೆಯ ಸ್ವಾಮಿಗಳ ಸಮಾದಿ ಹಾಗೆ ಉಳಿದಿತ್ತು, ಮರುದಿನ ಯಾತ್ರೆ ಮಂಗಳೂರಿಗೆ ಹೊರಟಾಗ "ನನಗೆ ಮಹಾಂತರಿಂದ ಕರೆ ಬಂತು ನನ್ನನ್ನ ಅವತ್ತು ಈ ಮಠಕ್ಕೆ ಮಠಾದೀಶರಾಗಿ ನೇಮಕ ಮಾಡಿ ಜೋಂಡಿ ಯಾತ್ರೆ ಹೋದ ನಂತರ ಉಳಿದವನು ನಾನೊಬ್ಬನೆ".
"ಆಗ ಇಲ್ಲಿ ಕಾಡು, ಕಾಡು ಪ್ರಾಣಿ ಹೆಚ್ಚಿತ್ತು, ರಸ್ತೆ, ವಿದ್ಯುತ್, ಪೋನ್ ಯಾವುದೂ ಇರಲಿಲ್ಲ, ಆಹಾರ ವ್ಯವಸ್ಥೆ, ಉಳಿಯಲು ಗುಡಿಸಲು ಇರಲಿಲ್ಲ. ಯಾವುದೇ ಮನುಷ್ಯರು ಹತ್ತಿರ ಸುಳಿಯುತ್ತಿರಲಿಲ್ಲ. ಬೇಸಿಗೆಯ ಮುಕ್ತಾಯದ ಹಾಗೂ ಮಳೆಗಾಲ ಪ್ರಾರಂಭದ ಹತ್ತಿರದ ದಿನಗಳದು, ನಾಥಪಂಥದವರಿಗೆ ಕಠೋರವಾದ ಜೀವನ ಅಭ್ಯಾಸವಾಗಿರೋದರಿಂದ ನನಗೆ ಏನೂ ಅನ್ನಿಸಲಿಲ್ಲ, ಮುಂದಿನ 12 ವಷ೯ ನಾನಿಲ್ಲಿ ಇರಲೇ ಬೇಕು ಎಂದು ಗೋರಕನಾಥರೇ ತೀಮಾ೯ ನಿಸಿದ್ದಾರೆ ಅಂತ ಯೋಚಿಸುತ್ತಾ ಕುಳಿತಾಗಲೇ ಟಪ್ ಅಂತ ಒಂದು ಮಾವಿನ ಹಣ್ಣು ಮರದಿಂದ ಬಿತ್ತು, ಸುಮಾರು 3 ತಿಂಗಳ ಕಾಲ ನನಗೆ ಗುರುಗಳು ಈ ಮೂಲಕ ಆಹಾರ ನೀಡಿದರು ".
"ಹೀಗೆ ಇರುವಾಗ ಒಂದು ಬೆಳಿಗ್ಗೆ ಒಬ್ಬ ಭಕ್ತ ಕಾಲ ಬೈರವ ನಿಗೆ ಪೂಜೆ ಸಲ್ಲಿಸಲು ಬಂದಾಗ ನನ್ನ ನೋಡಿ ಆಶ್ಚಯ೯ ಪಟ್ಟ, ಸುಮಾರು ವಷ೯ದಿಂದ ಯಾರೂ ಮಠಕ್ಕೆ ಇರಲಿಲ್ಲ ಈಗ ಹೊಸ ಸ್ವಾಮಿ ಬಂದಿದ್ದಾರೆಂದು ಊರಿಗೆ ಹೋಗಿ ಅನೇಕ ಭಕ್ತರನ್ನ ಕರೆತಂದು ಗುಡಿಸಲು ಕಟ್ಟಿ ಒಲೆ ಪಾತ್ರೆ ಕಟ್ಟಿಗೆ ಹೀಗೆಲ್ಲ ವ್ಯವಸ್ಥೆ ಮಾಡಿದರು".
''ನಂತರ ದಿನೇ ದಿನೇ ಭಕ್ತರು ಸಂಪಕ೯ಕ್ಕೆ ಬಂದರು, ಮಠದ ಜಮೀನುಗಳೆಲ್ಲ ಭೂ ಸುಧಾರಣೆ ಕಾನೂನಿನಿOದ ಯಾರ ಪಾಲೋ ಆಗಿತ್ತು" ಅಂತ ಅವರ ಹಲವಾರಿ ಮಠದ ಸ್ವಾಮಿಜೀಯಾಗಿ ನೇಮಕವಾಗಿದ್ದ ಜೀವನದ ಒಂದು ಕಾಲದ ಕಥೆ ಹೇಳಿದ್ದರು.
" ಈ ಜೋOಡಿ ಯಾತ್ರೆ 20l 6ರಲ್ಲಿ ಬರುತ್ತೆ, ನೀವು ಕನಾ೯ಟಕದ ಜನತೆಗೆ ಹೆಚ್ಚು ಪ್ರಚಾರ ನೀಡಬೇಕು" ಅಂದಿದ್ದರು ಆದರೆ 2014ರಲ್ಲೆ ಇಹಲೋಕ ತ್ಯಜಿಸಿದರು, ಅವರ ದೇಹವನ್ನ ಸಕ್ಕರೆಯಲ್ಲಿ ಭಕ್ತರು ಸಮಾದಿ ಮಾಡಿದ್ದಾರೆ.
ಈಗ ಹೊಸ ಸ್ವಾಮೀಜಿ ಶ್ರೀ ಜಗದೀಶರನ್ನ ನೇಮಿಸಿದ್ದಾರೆ ಹೊಸ ಸ್ವಾಮಿಜಿಗಳು ನನ್ನ ಸಂಸ್ಥೆಗೆ ಬಂದು ದರ್ಶನ ನೀಡಿದರು ಮತ್ತು ನಾನು ಹಲವಾರಿ ಮಠಕ್ಕೆ ಹೋಗಿ ಅವರ ದರ್ಶನವೂ ಮಾಡಿದೆ.
ಕುಂದಾಪುರದ ಸಿದ್ದಾಪುರದಿಂದ ಸುಮಾರು 10 km ದೂರದಲ್ಲಿ ಎಡಮೊಗೆ ಇದೆ, ಕಮಲಶಿಲೆ ದೇವಸ್ಥಾನದಿಂದಲೂ ರಸ್ತೆ ಇದೆ, ಈಗ ರಸ್ತೆ, ನೀರು, ಕರೆಂಟ್ ಮತ್ತು ಪೋನ್ ಸಂಪಕ೯ವಿದೆ, ನಾಥಪಂಥದ ಬಗ್ಗೆ ಭಕ್ತಿ, ಆಸಕ್ತಿ ಇದ್ದವರು ಇಲ್ಲಿಗೆ ಬೇಟಿ ನೀಡಬಹುದು.
ನನಗೆ ನನ್ನ ಜೀವನದಲ್ಲಿ ನಡೆಯುವ ಇಂತಹ ಘಟನೆಗಳ ಬಗ್ಗೆ ಈಗಲೂ ಅರ್ಥ ಆಗುವುದಿಲ್ಲ, 1978ರಲ್ಲಿ ಸಾಗರ ಪಟ್ಟಣಕ್ಕೆ ನಡೆದು ಬಂದ ಬಾರ ಪಂಥ ಯಾತ್ರೆ ನೋಡಿದ್ದೆ ಅದರಲ್ಲಿ ಬಂದ ಸೋಮನಾಥ ಪೀರ್ ಬಾವೋಜಿ ಹಲವಾರಿ ಮಠದ ಪೀಠಕ್ಕೆ ಗುರುವಾಗುವುದು, 1997ರಲ್ಲಿಅವರ ಸಂಪರ್ಕ ನನಗೆ ಸಿಗುವುದು ಅವರು ನನ್ನ ಮನೆಗೆ ಬರುವುದು 2016ರ ಬಾರ ಪಂತ್ ಯಾತ್ರೆ ಬರುವ 2 ವರ್ಷ ಮೊದಲೇ ಹಲವಾರಿ ಮಠದಲ್ಲಿ ಅವರು ಸಮಾದಿ ಆಗುವುದು, 2016ರ ಬಾರ ಪಂತ್ ಯಾತ್ರೆಯಿಂದ ವಾಪಾಸು ಹೋಗುವ ಸಂತರೂ ಅಚಾನಕ್ ಆಗಿ ನನ್ನ ಮನೆಗೆ ಬರುವುದು ಮತ್ತು ಪಾತ್ರ ದೇವತೆ ಪ್ರಸಾದ ನೀಡಿ ಮುಂದಿನ 2028 ರಲ್ಲಿ ಬರುವ ಬಾರ ಪಂತ್ ಯಾತ್ರೆ ತನಕ ಇಟ್ಟುಕೊಳ್ಳಲು ನೀಡುವುದು (ಇದನ್ನು ಇನ್ನೊಂದು ಲೇಖನದಲ್ಲಿ) ಇದೆಲ್ಲ ವಿಚಿತ್ರ ಅನ್ನಿಸುತ್ತದೆ.
Comments
Post a Comment