Blog 858. ನನ್ನ 20 ವರ್ಷದ ಗೆಳೆಯ ಈಗ ಸಂವಾದ ಯೂಟ್ಯೂಬ್ ನಲ್ಲಿ ದೊಡ್ಡ ಸೆಲೆಬ್ರಿಟಿ ಇವರ ಸಂದರ್ಶನಗಳು ವೈರಲ್ ಆಗಿದೆ ಇವತ್ತಿಗೆ ಇವರ ಸಂದರ್ಶನ 80 ಲಕ್ಷ ದಾಟಿದೆ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜೇನಿ ಎಂಬ ಹಳ್ಳಿಯ ನಿಜ ಪರಿಸರ ಪ್ರೇಮಿ ಕಾಡಿನ ವಿಜ್ಞಾನಿ ಮಂಜುನಾಥ ಭಟ್ಟರು.
#ನನ್ನ_ಅವರ_ಗೆಳೆತನಕ್ಕೆ_ಇಪ್ಪತ್ತು_ವರ್ಷದ_ಪ್ರಾಯ.
#ಸಂವಾದ_ನಿವಣೆವೃಶಾಂಕ್_ಭಟ್ಟರು_ವಿಕ್ರಮ_ಪತ್ರಿಕೆ_ಸಂಪಾದಕರು.
#ಹೊಸನಗರ_ತಾಲ್ಲೂಕಿನ_ನಿವಣೆ_ಸೀತಾರಾಂ_ಭಟ್ಟರ_ತಮ್ಮನ_ಮಗ, ಇವರು ಮಾಡಿದ ಇವರ ಚಾನಲ್ ಸಂವಾದದ ಸಂದರ್ಶನಗಳು ವ್ಯೆರಲ್ ಆಗಿದೆ
#ಜೇನಿ ಮಂಜುನಾಥ ಭಟ್ಟರ _ಮಂಜುಶ್ರೀ_ನಸ೯ರಿಯಲ್ಲಿ_ಪಶ್ಚಿಮ_ಘಟ್ಟದ_ನೈಸರ್ಗಿಕ_ಹಣ್ಣಿನ_ಸಸಿಗಳು_ಸಿಗುತ್ತದೆ.
#ಇಡೀ_ದೇಶದಲ್ಲಿ_ಇಂತಹ_ಕಾಡಿನ_ಹಣ್ಣುಗಳ_ಬೃಹತ್_ಸಂಗ್ರಹದ_ಸಸಿಗಳು_ಒಂದೇ_ಕಡೆ_ಸಿಗುವುದು_ಇವರಲ್ಲಿ_ಮಾತ್ರ
#ಸಭೆ_ಸನ್ಮಾನ_ಪ್ರಶಸ್ತಿಗೆ_ಭಾಗವಹಿಸದ_ಅದರಿಂದ_ಹರದಾರಿ_ದೂರ_ಇರುವವರು
ಜೇನಿ ಮಂಜುನಾಥ ಭಟ್ಟರು, ಮಂಜುಶ್ರೀ ನರ್ಸರಿ ಭಟ್ಟರು, ಮಂಜು ಭಟ್ಟರು ಅಂತೆಲ್ಲ ಕರೆಯುವ ಮಂಜುನಾಥರನ್ನು ವಿಕ್ರಮ ಪತ್ರಿಕೆ ಸಂಪಾದಕರಾದ ನಿವಣೆ ವೃಶಾಂಕ ಭಟ್ಟರು #ಸಂವಾದ_ಯೂಟ್ಯೂಬ್ ನಲ್ಲಿ ಮಾಡಿದ ಸುಮಾರು 35 ಸಂದರ್ಷನಗಳು ಇವರನ್ನು ಸೆಲೆಬ್ರಿಟಿ ಮಾಡಿದೆ.
ದೇಶ ವಿದೇಶಗಳಲ್ಲಿ ಇವರ ಅಭಿಮಾನಿಗಳು ಇದ್ದಾರೆ, ಇವರ ಕೆಲ ಸಂದರ್ಶನಗಳು ಈಗಾಗಲೇ 80 ಲಕ್ಷ ಜನರು ವೀಕ್ಷಿಸಿದ್ದಾರೆ, ಮುಂದಿನ ದಿನಗಳಲ್ಲಿ ಕೋಟಿ ದಾಟಲಿದೆ.
ನಿವಣೆ ವೃಷಾಂಕ್ ಭಟ್ಟರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿವಣೆ ಸೀತಾರಾಂ ಭಟ್ಟರ ತಮ್ಮನ ಮಗ ಈಗಿನ ವಿಕ್ರಮ ವಾರಪತ್ರಿಕೆ ಸಂಪಾದಕರು.
ನಿವಣೆ ಸೀತಾರಾಂ ಭಟ್ಟರು ಬಿಜೆಪಿ ಪಕ್ಷದ ಹೊಸನಗರ ವಿಧಾನಸಭಾ ಕ್ಷೇತ್ರದ ಮೊದಲ ಅಭ್ಯರ್ಥಿ, ಸಹಕಾರಿ ಕ್ಷೇತ್ರದ ದುರೀಣ, ಸಂಘ ಪರಿವಾರದ ಪ್ರಮುಖರು.
ತುರ್ತು ಪರಿಸ್ಥಿತಿಯಲ್ಲಿ ಮಲೆನಾಡಿನ ದಟ್ಟ ಅರಣ್ಯದ ಇವರ ಮನೆ ದೆಹಲಿ ಜನಸಂಘದ ನಂತರ ಬಿಜೆಪಿಯ ಅನೇಕ ಮುಖಂಡರ ಅಡಗು ತಾಣವೂ ಆಗಿತ್ತು.
ಇವತ್ತು ಬಹಳ ದಿನದ ನಂತರ ಜೇನಿಮಂಜುನಾಥ ಭಟ್ಟರು ಮತ್ತು ನನ್ನ ಬೇಟಿ ನನ್ನ ಲಾಡ್ಜ್ ಕಛೇರಿಯಲ್ಲಿ ಆಯಿತು.
ಇವರ ಮಗಳು ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನಲ್ಲಿ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾಳೆ ತಂದೆಯಂತೆ ಅವಳ ಜೀವನ ಈಗಲೇ ಬಂಗಾರ ಧರಿಸದ ಶಪಥ, ಸರಳ ಖಾದಿದಾರಿಣಿ ಮತ್ತು ಹಾಸ್ಟೆಲ್ ನಿಂದ ಕಾಲೇಜಿಗೆ ಸೈಕಲ್ ಅವಳ ವಾಹನ.
ಮಗ ಹುಟ್ಟುವಾಗ ಅನೇಕ ಆರೋಗ್ಯದ ಸಮಸ್ಯೆಯಿಂದ ಜೇನಿಮಂಜುನಾಥ ಭಟ್ ದಂಪತಿ ಹತಾಶರಾದಾಗ ಇವರ ಜೀವದ ಗೆಳೆಯ ಶಿವಮೊಗ್ಗದ ಪ್ರಕಾಶ್ ಭಟ್ಟರು ಇವರ ಜೊತೆ ಇದ್ದರು, ತಾಯಿ ಸಾಗರದ ನರ್ಸಿಂಗ್ ಹೊಂ ನಲ್ಲಿ ಮಗು ಶಿವಮೊಗ್ಗದ ಇನ್ನೊಂದು ನರ್ಸಿಂಗ್ ಹೊಂ ನ ಇನ್ಕ್ಯುಬಲೇಟರ್ ನಲ್ಲಿ.
ಮಗ ಈಗ ಏನು ಮಾಡುತ್ತಾನೆ ಅಂದೆ "ತುಂಬಾ ಚುರುಕು, ಎಲ್ಲಾ ವಾಹನ ಚಲಾಯಿಸುತ್ತಾನೆ, ಸಸ್ಯ ಪ್ರಪಂಚದ ಜ್ಞಾನ ಪಡೆದಿದ್ದಾನೆ ಎಂಟನೆ ತರಗತಿ ಆದರೆ ಈ ವರ್ಷದಿಂದ ಶಾಲೆ ಹೋಗುವುದಿಲ್ಲ ಅನ್ನುತ್ತಿದ್ದಾನೆ " ಅಂದರು.
ಒತ್ತಾಯಿಸ ಬೇಡಿ ಒಪ್ಪಿಗೆ ಕೊಡಿ, ಇಂಗ್ಲೀಷ್ ಹಿಂದಿ ಭಾಷೆ ಕಲಿಸಿ ಮತ್ತು ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿ ಅಂದೆ ಅದಕ್ಕೆ ಅವರು ಹೇಳಿದ್ದು "ನೀವೊಬ್ಬರೆ ಮಗ ಶಾಲೆ ಬಿಡುತ್ತೇನೆ ಅಂದರೆ ಒಪ್ಪಿ ಬೆಂಬಲಿಸಿದವರು, ಬೇರೆಯವರೆಲ್ಲ ವಿರೋದಿಸಿದವರು" ಅಂದರು.
ಪ್ರಕೃತಿ ಬಗ್ಗೆ ಇವರಿಗಿರುವ ಜ್ಞಾನ ಅಸಾಧ್ಯ, ಸ್ವತಃ ಅನುಭವಿಗಳು.
ಇವರು ತಾವು ಬೆಳೆಯುವ ಅಡಿಕೆ ಮಾತ್ರ ಮಾರಾಟ ಮಾಡುತ್ತಾರೆ ಇವರ ತೋಟದಲ್ಲಿ ಬಿಡುವ ನಿಂಬೆ, ಮಾವು, ಹಲಸು, ಬಾಳೆ, ಅಪ್ಪೆ ಮಿಡಿ ಹೀಗೆ ಮಾರಾಟ ಮಾಡಿದರೆ ಕೆಲವು ಲಕ್ಷದ ಆದಾಯದ ಸಾಧ್ಯತೆ ಇದ್ದರೂ ಅದನ್ನು ಮಾರುವುದಿಲ್ಲ.
ಇವರದ್ದೆ ಆದ ಮಂಜುಶ್ರೀ ನರ್ಸರಿ ಇದೆ ಅಲ್ಲಿ ಅತ್ಯಂತ ಕಡಿಮೆ ಧರದಲ್ಲಿ ( ಕೆಲಸಗಾರರ ಸಂಬಳ ಖರ್ಚು-ವೆಚ್ಚ ಮಾತ್ರ) ಅನೇಕ ಸಸಿಗಳ ಮಾರಾಟ ಮಾಡುತ್ತಾರೆ.
ವಿಶೇಷ ಅಂದರೆ ಪಶ್ಚಿಮ ಘಟ್ಟದ ನೈಸರ್ಗಿಕ ಹಣ್ಣಿನ ಸಸಿಗಳು ಇವರಲ್ಲಿ ಬಿಟ್ಟರೆ ದೇಶದ ಎಲ್ಲೂ ಒಂದೇ ಕಡೆ ನಿಮಗೆ ಸಿಗಲಾರದು.
ಇವರಲ್ಲಿ ಮೂರು ಜಾತಿಯ ನೇರಳೆ, ನಾಲ್ಕು ವಿದದ ಅಪ್ಪೆಮಿಡಿ, ಐದು ಜಾತಿಯ ಹಲಸು (ಮಲೇಷಿಯಾ ಹಲಸು ಸೇರಿ), ಆಲೇ ಹಣ್ಣು, ಹೆಬ್ಬೆಲಸು, ಎರೆಡು ವಿಧದ ತುಮರಿ ಹಣ್ಣು, ಪುನರ್ಪಳಿ ( ಮುರುಗನ ಹುಳಿ), ಸಂಪಿಗೆ ಹಣ್ಣು, ಹಲಗೆ ಹಣ್ಣು, ವಾಟೆ, ಸಂಪಿಗೆ, ಜೀರಕ , ಗುರುಗೆ, ನುರುಕಲು, ಸಳ್ಳೆ ಹಣ್ಣು, ತಡಚಲು, ಮುಳ್ಳು ಹಣ್ಣು, ಕಬಳೆ ಹಣ್ಣು, ಕವಳಿ , ಗೋಳಿ, ಅರಳಿ, ಚನ್ನಂಗಿ, ಮಸೆ ಮರ, ಜುಮ್ಮನಕಾಯಿ, ಕಕ್ಕೆ ಗಿಡ, ಬಿಲ್ವಪತ್ರೆ, ಬನ್ನಿ, ಸುರಗಿ ಹೀಗೆ ಯಾವುದೇ ನಸ೯ರಿಯಲ್ಲಿಯೂ ಇಲ್ಲದ ಸಸಿಗಳು ಇವರಲ್ಲಿದೆ.
ಎರೆಡು ವಷ೯ದಿಂದ ನನ್ನ ರಬ್ಬರ್ ತೋಟದ ಬೌಂಡರಿಯಲ್ಲಿನ ನೀಲಗಿರಿ ಅಕೇಷಿಯ ಮಾರಾಟ ಮಾಡಿ ವಿವಿಧ ಪಶ್ಚಿಮ ಘಟ್ಟದ ಹಣ್ಣಿನ ಮರಗಳ ನೆಡಲಿಕ್ಕಾಗಿ ಎಲ್ಲೆಲ್ಲೋ ಹುಡುಕಿದರೂ ಸಿಗದ ಸಸಿ ಜೇನಿ ಮಂಜುನಾಥ ಭಟ್ಟರ ನರ್ಸರಿಯಲ್ಲಿ ಇರುವುದು ಕೇಳಿ ತುಂಬಾ ಸಂತೋಷವಾಯಿತು.
ಈ ವರ್ಷದ ಮುಂಗಾರಿನಲ್ಲಿ ಅವುಗಳ ನೆಡೆಸುವ ತೀರ್ಮಾನ ಮಾಡಿದ್ದೇನೆ ಅದಕ್ಕಾಗಿ ಸುಮಾರು 300 ರಿಂದ 500 ಇಂತಹ ಸಸಿಗಳು ಮಂಜುನಾಥ ಭಟ್ಟರಿಗೆ ಕಾಯ್ದಿರಿಸಲು ಹೇಳಿದ್ದೇನೆ.
2006 ರಲ್ಲಿ ಇವರೇ ತಂದು ನನ್ನ ಜೇಡಿಸರ ಎಂಬ ಹಳ್ಳಿಯ ರಬ್ಬರ್ ತೋಟದಲ್ಲಿ ಇವರಿಂದಲೇ ನೆಡಿಸಿದ ಅರಳಿ ಮರ 16 ವಷ೯ದಿಂದ ಇರುವುದು ಕೇಳಿ ಇವರಿಗೆ ಖುಷಿ ಆಯಿತು.
ಇವರ ಸಂದರ್ಶನಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
https://youtu.be/8RJSCVHVEaA
ನೀವು ನೈಸರ್ಗಿಕ ಅರಣ್ಯದ ಹಣ್ಣುಗಳ ಕಾಡು ಬೆಳೆಸುವ ಆಸಕ್ತಿ ಇದ್ದರೆ ನಿಮಗೆ ಒಂದೇ ಕಡೆ ಮೇಲೆ ನಾನು ಆರ್ಡರ್ ಮಾಡಿದ ಸಸಿಗಳಲ್ಲದೆ ಬೇರೆಯ ಅನೇಕ ಸಸಿಗಳು ಇಡೀ ದೇಶದಲ್ಲೇ ಒಂದೇ ಕಡೆ ಸಿಗುವ ಸಾಧ್ಯತೆ ಜೇನಿ ಮ೦ಜುನಾಥ ಭಟ್ಟರ #ಮ೦ಜುಶ್ರೀ_ನರ್ಸರಿ ಯಲ್ಲಿ ಮಾತ್ರ ಸಿಗುತ್ತದೆ.
ಇವರಲ್ಲಿ ಸಿಗುವ ಸಸಿಗಳ ಮಾಹಿತಿಗೆ ಇವರ ಸಂಪರ್ಕ ಸಂಖ್ಯೆ 9448933066 ಮತ್ತು 7348857327 ಗೆ ಸ೦ಪರ್ಕಿಸ ಬಹುದು.
Comments
Post a Comment