#ಅದರ_ಘಮವೇ_ಅದ್ವಿತೀಯ
#ಅದರ_ಟೆಕ್ಸ್ಚರ್_ಕೂಡ.
ಆಹಾರ ಉದ್ಯಮದಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನ ಸಂಪ್ರದಾಯಿಕ ಆಹಾರದ ರೆಸ್ಟೋರೆಂಟ್ ಚೈನ್ ಪ್ರಾರಂಬಿಸಿ ಮೊದಲ ಹಂತದಲ್ಲಿ ನೂರು ಉದ್ಯಮಿಗಳಿಗೆ ಸ್ವಯ೦ ಉದ್ಯೋಗದ ಪ್ರಾ೦ಚೈಸ್ ನೀಡಿ ಕನಿಷ್ಟ 500 ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮತ್ತು ಸೆಂಟ್ರಲ್ ಕಿಚನ್ ಮೂಲಕ ನಿತ್ಯ ಆಹಾರದ ಸರಬರಾಜು ವ್ಯವಸ್ಥೆಯ ಯೋಜನೆ ಒಂದು ಪ್ರಾಯೋಗಿಕ ಹಂತದಲ್ಲಿದ್ದು ಅದಕ್ಕೆ ಹೊಸ ರೆಸಿಪಿಗಳ ಪ್ರಯೋಗ ಮತ್ತು ಸ್ಥಳಿಯ ಉಪ್ಪಿನಕಾಯಿ, ಹೋಳಿಗೆ, ಜ್ಯೂಸ್, ಸಾಂಬರ್ ಪದಾರ್ಥಗಳ ಉತ್ಪಾದಕರ ಹುಡುಕಾಟ ಮತ್ತು ಅವರ ಉತ್ಪಾದನೆಯ ಗುಣಮಟ್ಟದ ಪರಿಶೀಲನೆಯಲ್ಲಿ ಕಳೆದ ಎರೆಡು ವರ್ಷದಲ್ಲಿ ನಾನು ಅನೇಕ ಅಡುಗೆ ಮಾಡಿ ರುಚಿ ಇತ್ಯಾದಿ ಪ್ರಯೋಗ ಮತ್ತು ಸ್ಥಳಿಯ ಉತ್ಪಾದಕರ ವಸ್ತುಗಳ ಖರೀದಿ ಅದರ ಗುಣಮಟ್ಟದ ಪರಿಶೀಲನೆಗಳಲ್ಲಿ ದಿನ ಕಳೆಯುವ ಈ ದಿನದಲ್ಲಿ ಅನೇಕ ಹೊಸ ವಿಚಾರಗಳು ಗಮನಕ್ಕೆ ಬರುತ್ತಿದೆ.
ಅನಿವಾಸಿ ಉದ್ಯಮದಾರರ ಆಸಕ್ತಿಗಾಗಿ ಈ ಕೆಲಸದ ಕೆಲ ಹಂತದ ಜವಾಬ್ದಾರಿ ಮತ್ತು ಅದರ ಗುಣಾತ್ಮಕ ಅಥವ ದನಾತ್ಮಕ ಪರಿಶೀಲನೆಯಲ್ಲಿ ನಮ್ಮ ಮಲೆನಾಡು ಗಿಡ್ದ ದನದ ತುಪ್ಪದ ರುಚಿ - ಘಮ- ಟೆಕ್ಸಚರ್ ಮಾತ್ರ ಬೇರಾವ ತುಪ್ಪದಲ್ಲೂ ಸಾಧ್ಯವಿಲ್ಲ ಅನ್ನುವ ಅನುಭವ ನನ್ನದು.
Comments
Post a Comment