Blog number 869. ಪ್ರತಿ ಹಳ್ಳಿಯಲ್ಲೂ ಇಂತಹ ಮಾನಸಿಕ ರೋಗಿಗಳು ಇದ್ದಾರೆ, ಸ್ಯಾಡಿಸ್ಟ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ಇವರಿಗೆ ಹಳ್ಳಿಯಲ್ಲಿ ಮೂಕರ್ಜಿ ವೀರರೆಂದೇ ಹೆಸರು
#ಎಷ್ಟೋ_ಕುಟುಂಬ_ಹಾಳು_ಮಾಡುತ್ತಾರೆ.
#ಇದು_ಮನೋರೋಗ
#ನಮ್ಮ_ಸುತ್ತಲೂ_ಇಂತಾ_ಸ್ಯಾಡಿಸ್ಟ್_ಈಗಲೂ_ಇದ್ದಾರೆ.
ಹಳೆಯ ಗೆಳೆಯ ಕೆಲ ದಶಕದಿಂದ ಸಂಪರ್ಕ ಇಲ್ಲ, ನಿತ್ಯ ಕುಡುಕ ಬೇರೆ,ಒಂದು ಬೆಳ್ಳಂ ಬೆಳಿಗ್ಗೆ ಪೋನ್ ಮಾಡಿದ್ದ "ನಿನ್ನೆ ರಾತ್ರಿ ಕನಸು ಬಿತ್ತು,ನನ್ನ ತಪ್ಪು ನನಗೇ ಗೊತ್ತಾಯಿತು ಕ್ಷಮಿಸಿ ಬಿಡು" ಅಂದ ಅಂತಹ ತಪ್ಪೇನು ಮಾಡಿದಿಯಾ ಮರಾಯ ಅಂದೆ, ಇಲ್ಲ ನಿನಗೆ ಗೊತ್ತಿಲ್ಲ ನಿನ್ನ ಏಳಿಗೆ ಸಹಿಸದೆ ನಾನು ಅನೇಕ ರೀತಿ ನಿನಗೆ ತೊಂದರೆ ಕೊಟ್ಟಿದ್ದೆ ಅಂದ. ಯಾಕೋ ಬೆಳಿಗ್ಗೆ ಬೆಳಿಗ್ಗೆ ಕುಡಿದಿದಿಯಾ ಅಂದೆ, ಹೌದು ಕ್ಷಮಿಸುತ್ತೀಯಾ ಇಲ್ಲವೊ? ಅಂದ ನನ್ನ ಹೃದಯ ಮೃದು ಆಯಿತು ಪಶ್ಚಾತ್ತಾಪದ ಮುಂದಿನ ಪ್ರಾಯಶ್ಚಿತ ಬೇರೆ ಇಲ್ಲ ಅನ್ನಿಸಿ ಖಂಡಿತಾ ಕ್ಷಮಿಸಿದ್ದೇನೆ ಅಂದೆ.
ಕೆಲವು ದಿನದ ನಂತರ ಆರೋಗ್ಯ ಇಲಾಖೆಯವರು ಒಂದು ಬೇನಾಮಿ ಅರ್ಜಿ ಹಿಡಿದು ಬಂದಿದ್ದರು ಅದರಲ್ಲಿ ನಮ್ಮ ಮಲ್ಲಿಕಾ ರೆಸ್ಟೋರೆಂಟ್ ಸ್ವಚ್ಚವಾಗಿಲ್ಲ ಜನರ ಆರೋಗ್ಯಕ್ಕೆ ಮಾರಕ ಇತ್ಯಾದಿ, ಬಂದವರೆ ಪರಿಶೀಲಿಸಿ ಹೇಳಿದ್ದು ಈ ಹೋಟೆಲ್ ಇಡೀ ತಾಲ್ಲೂಕನಲ್ಲೇ ಸ್ವಚ್ಚವಾಗಿದೆ ಇದರ ಮೇಲೆ ಇಂತಹ ಅರ್ಜಿ ಮಾಡಿದಾರೆ ಅಂದರೆ? ಅಂತ ಇದ್ದರು. ನಂತರ ಗೊತ್ತಾಗಿದ್ದು ಈ ಅರ್ಜಿ ಬರೆದಾತ ಪೋನ್ ಮಾಡಿ ಕ್ಷಮೆ ಪಡೆದ ಮಿತ್ರನೇ ಬರೆದ ಮೂಕರ್ಜಿ!!..
ಹಳ್ಳಿಗಳಲ್ಲಿ ಇಂತವರಿಗೆ ಮೂಕರ್ಜಿ ವೀರರೆಂದೆ ಹೆಸರು, ಇವರಿಗೆ ಹಳ್ಳಿಯಲ್ಲಿ ಸುಖ ಸಂಸಾರ ಇದ್ದರೆ ಅದನ್ನು ದುಃಖಕ್ಕೆ ಈಡು ಮಾಡುವುದು, ಅಣ್ಣ ತಮ್ಮಂದಿರು ಅನೋನ್ಯವಾಗಿದ್ದರೆ ಅವರಲ್ಲಿ ಬಿನ್ನಾಭಿಪ್ರಾಯ ತಂದು ಹಿಸ್ಸೆ ಮಾಡಿಸುವುದು,ಅಕ್ಕ ಪಕ್ಕದ ಮನೆಯ ಬೇಲಿ ತಕರಾರು ತಂದು ಹೊಡೆದಾಡಿಸುವುದು, ಮನೆ ಕಟ್ಟುವವರ ಮೇಲೆ ಅರಣ್ಯ ಇಲಾಖೆಗೆ ಅರ್ಜಿ ಕಳಿಸಿ ನಾಟ ಹಿಡಿಸುವುದು,ಕೆರೆ ಒತ್ತುವರಿ ಮಾಡಿದ್ದಾರೆ, ಅರಣ್ಯ ಒತ್ತುವರಿ ಮಾಡಿದ್ದಾರೆ ಅಂತೆಲ್ಲ ವರ್ಷ ಪೂರ್ತಿ ಅರ್ಜಿ ಬರೆಯುವ ಪೋನು ಮಾಡಿ ತೊಂದರೆ ಕೊಡುವುದೇ ಕೆಲಸ.
ಅಷ್ಟೆ ಅಲ್ಲ ಸತ್ತ ನಾಯಿ ಬೆಕ್ಕು ಇನ್ನೊಬ್ಬರ ಮನೆ ಎದರು ಹಾಕಿಸುವುದು, ಕಸ ತಂದು ಬೇರೆಯವರ ಗೇಟಿನ ಎದರು ಹಾಕಿಸುವುದು, ಕುಡುಕರು ಹುಚ್ಚರಿಗೆ ಹಣ ನೀಡಿ ಕೆಟ್ಟ ಬೈಯ್ಗುಳ ಬೈಯಿಸುವುದು, ಊರಿಗೆ ಉಪಕಾರ ಮಾಡುವವನ ಮೇಲೆ ಸಲ್ಲದ ಅಪಾದನೆ ಮಾಡುವುದು ಎಲ್ಲಾ ಮಾಡಿ ಎದುರಿನಲ್ಲಿ ಅವರನ್ನು ಹೊಗಳುವುದು ಮಾಡುತ್ತಾರೆ.
ವೈಯಕ್ತಿಕವಾಗಿ ಇವರ ಸಂಸಾರಿಕ ಜೀವನ ಸರಿ ಇರುವುದಿಲ್ಲ.
ಅಷ್ಟೆ ಅಲ್ಲ ಸಾಲ ಕೊಡೋ ಬ್ಯಾಂಕಿಗೂ ಅಜಿ೯ ಬರೆದು ಇನ್ನೊಬ್ಬರ ವ್ಯವಹಾರಕ್ಕೆ ತಡೆ ಮಾಡುವ, ಕೈಗಡ ಕೊಡುವ ವನಿದ್ದರೆ ಅವನು ಸಾಲ ನೀಡದಂತೆ ಪಿಟ್ಟಿಂಗ್,ಸದಾ ಬೇರೆಯವರಿಗೆ ತೊಂದರೆ ಕೊಡಲು ನಿದ್ದೆ ಬಿಟ್ಟು ಸ್ವಂತ ಆರೋಗ್ಯ - ಹಣ ಕಳೆದುಕೊಳ್ಳುವ ಈ ಮೂಕರ್ಜಿ ವೀರರಿಗೆ ಇಂಗ್ಲೀಷ್ ನಲ್ಲಿ ಸ್ಯಾಡಿಸ್ಟ್ ಅಂತ ಹೆಸರು.
ಮನೋವಿಜ್ಞಾನದಲ್ಲಿ ಇದಕ್ಕೆ ಅನೇಕ ಕಾರಣಗಳಿದೆ ಇದು ಕೆಲವೊಮ್ಮೆ ವಂಶವಾಹಿನಿ ಆಗಿ ಕೂಡ ಮುಂದುವರಿದದ್ದು ಹಳ್ಳಿಗಳಲ್ಲಿ ನೋಡುತ್ತೇವೆ ಇಂತಹ ಕುಟುಂಬಗಳಿಗೆ ತಲೆತಲಾಂತರದಿಂದಲೂ ಜನರಿಗೆ ತೊಂದರೆ ಕೊಡುವುದರಲ್ಲಿ ನಿಸ್ಸೀಮರೆಂದೆ ಹೆಸರಿಸುತ್ತಾರೆ.
ಮೊದಲೆಲ್ಲ ಕೈ ಬರಹದಲ್ಲಿ ಬರೆಯುತ್ತಿದ್ದ ಇವರು ಅಕ್ಷರದಿಂದ ತಮ್ಮ ಬಣ್ಣ ಬಯಲಾದೀತೆಂದು, ಎಡಗೈಯಲ್ಲಿ ಬರೆಯುವುದು, ನಂತರ ಟೈಪ್ ಮಾಡಿಸಿ ಅರ್ಜಿ ಹಾಕುವವರೆಲ್ಲ ಈಗ ಕಂಪ್ಯೂಟರ್ ನಲ್ಲಿ DTP ಮಾಡಿಸಿ ಅಜಿ೯ಸಲ್ಲಿಸುತ್ತಿದ್ದಾರೆ ಈಗ ಮೊಬೈಲ್ ನಲ್ಲಿ ಬೇನಾಮಿ ಕರೆ ಮಾಡಿ ತೊಂದರೆ ನೀಡುತ್ತಾರೆ ಆದರೆ ಟ್ರೂ ಕಾಲರ್ ನಿಂದ ಇವರ ಬಣ್ಣ ಬಯಲಾಗುತ್ತಿದೆ.
ಇಂತವರ ಅರ್ಜಿಗಳು ಕೆಲವೊಮ್ಮೆ ಅಧಿಕಾರಿಗಳಿಗೆ ಆದಾಯಕ್ಕೂ ದಾರಿ.
ಮೊದಲೆಲ್ಲ ಈ ರೀತಿ ಅರ್ಜಿ ಮಾಡುವವರನ್ನು ಪತ್ತೆ ಮಾಡುವುದು ಕಷ್ಟ ಈಗ ಒ0ದಲ್ಲ ಒಂದು ರೀತಿ ಸಿಕ್ಕಿಬೀಳುತ್ತಾರೆ.
ನನಗಂತೂ ನನ್ನ ಎದುರಿಗೆ ಬಂದು ನಯವಾಗಿ ನಮಸ್ಕರಿಸುವ ಹದ ಹೇಳುವ ಗೆಳೆಯನೇ ಈ ರೀತಿ ಅಜಿ೯ ಬರೆಯುತ್ತಾನೆ ಅಂತ ಗೊತ್ತೇ ಇರಲಿಲ್ಲ, ಅಜಿ೯ ಬರೆದರೂ ಕ್ರಮ ಯಾಕೆ ಕೈಗೊಂಡಿಲ್ಲ ಅಂತ ಕೇಳಲು ಹೋದವನ ಪೋಟೋ ಅಧಿಕಾರಿಗಳೇ ಅವರ ಪೋನಿನಲ್ಲಿ ತೆಗೆದು ತೋರಿಸಿದ ಮೇಲೆ ನಂಬಬೇಕಾಯಿತು.
ನಿನ್ನೆ ವಿದ್ಯುತ್ ಇಲಾಖೆಗೆ ಪೋನ್ ಮೂಲಕ ದೂರು ದಾಖಲಿಸಿದಾತ ನನ್ನ ಸಂಸ್ಥೆಯ ಹೆಸರು ಬಳಸಿದ್ದಾನೆ, ನನ್ನ ಮಗನ ಹೆಸರಲ್ಲಿ, ಅಧಿಕಾರಿಗಳಿಗೆ ಅನುಮಾನ ಬಂದು ನನಗೆ ಪೋನಾಯಿಸಿದ್ದಾರೆ ನಂತರ ಪೋನ್ ನಂಬರ್ ಪರಿಶೀಲಿಸಿದಾಗ ಗೊತ್ತಾಗಿದ್ದು ಈ ಹಿಂದೆ ಇಂತದೇ ತೊಂದರೆ ಕೊಡುತ್ತಿದ್ದ ಗೆಳೆಯನೋವ೯ನ ಮಗ ಈ ಕೆಲಸ ಮಾಡಿದ್ದಾನೆ!.
Comments
Post a Comment