Blog number 872, ಮಲೆನಾಡಿನ ಸಂಪ್ರದಾಯಿಕ ಉಂಡೆ ಕಡಬು ರಾಜಮುಡಿ ಅಕ್ಕಿಯಲ್ಲಿ ತಯಾರಿಸಿದರೆ ವಿಶಿಷ್ಟ ರುಚಿ ಮತ್ತು ಘಮ ಇರುತ್ತದೆ.
#ಉಂಡೆಕಡಬು_ಪಾಲೀಶ್_ಅಕ್ಕಿಯಲ್ಲಿ_ನೋಡಲು_ಚೆಂದ
#ಸೆಮಿಪಾಲೀಶ್_ಅಕ್ಕಿ_ಅಥವ_ಕೆಂಪಕ್ಕಿ_ಉಂಡೆ_ಕಡುಬು_ಮಾತ್ರ_ಬಲುರುಚಿ.
ಮೈಸೂರಿನಲ್ಲಿ ಇರುವ ಇಂಜಿನಿಯರ್ ನಟರಾಜ್ ಒಂದು ಕಾಲದ ಮೈಸೂರು ಮಹಾರಾಜರ ನಿತ್ಯ ಊಟದ ಅಕ್ಕಿ ರಾಜಮುಡಿ ಅಕ್ಕಿ ಇವತ್ತು ಎಲ್ಲರಿಗೂ ಸುಲಭವಾಗಿ ಸಿಗುವು೦ತಾ ಅನುಕೂಲ ಮಾಡಿದ್ದಾರೆ.
ಕಳೆದ ಎರಡು ವರ್ಷದಿಂದ ನನಗೆ ಇವರ ಸೆಮಿ ಪಾಲೀಶ್ ರಾಜಮುಡಿ ಅಕ್ಕಿ VRLನಲ್ಲಿ ಕಳಿಸುತ್ತಾರೆ.
ಮಲೆನಾಡಿನ ಪಶ್ಚಿಮ ಘಟ್ಟದ ಉಂಡೆ ಕಡಬು ತುಂಬಾ ಪ್ರಸಿದ್ದ ಆದರೆ ಈಗಿನ ಪುಲ್ ಪಾಲೀಶ್ ಅಕ್ಕಿಯ ಉಂಡೆ ಕಡಬು ತನ್ನ ಮೂಲ ರುಚಿ ಕಳೆದುಕೊಂಡಿದೆ.
ಈಗಿನ ಮಕಳು "ಅಮ್ಮ ಇವತ್ತೇನೆ ತಿಂಡಿ" ಎಂದು ಕೇಳುವುದು ಅದಕ್ಕೆ ಅಮ್ಮ "ಇವತ್ತು ಉಂಡೆ ಕಡಬು ಚಟ್ನಿ" ಅಂದಾಗ ಮಕ್ಕಳು ಮುಖ ತಿರುಗಿಸುವ ಮಲ್ನಾಡ್ ಕಾರ್ಟೂನ್ ನಲ್ಲಿ ಪೂಜಾ ಹರೀಶ್ ರ ವಿಡಿಯೋ ವೈರಲ್ ಆಗಿತ್ತು.
ನನಗೂ ಉಂಡೆ ಕಡಬು ಅಂದರೆ ಆಲಸ್ಯ ಆಗಿತ್ತು, ಯಾಕಾದರೂ ಮನೇಲಿ ಮಾಡುತ್ತಾರೆ ಅಂತ ಅನ್ನಿಸುತ್ತಿತ್ತು.
ಪಾಲೀಶ್ ಅಕ್ಕಿಯ ಉಂಡೆ ಕಡಬು ನೋಡಲು ಅಚ್ಚ ಶುಭ್ರ ಬಿಳುಪು ಆದರೆ ರುಚಿ - ಅರೋಮ ಮಾತ್ರ ಇರುತ್ತಿರಲಿಲ್ಲ.
ಈಗ ರಾಜ ಮುಡಿ ಅಕ್ಕಿಯಲ್ಲಿ ಮಾಡುವ ಉಂಡೆ ಕಡುಬಿನ ರುಚಿಯೇ ಉಂಡೆ ಕಡಬು ತಿನ್ನಬೇಕೆನ್ನಿಸುತ್ತದೆ ಅದರ ಆರೋಮ ಕೂಡ ವಿಶಿಷ್ಟ.
ಇವತ್ತಿನ ರಾಜ ಮುಡಿ ಅಕ್ಕಿ ಬೆಲೆ ಕೆಜಿಗೆ 48 ರೂಪಾಯಿ + ಸಾಗಾಣಿಕೆ ವೆಚ್ಚ ಪ್ರತ್ಯೇಕ
ಅವರ ಸಂಪರ್ಕ ಸಂಖ್ಯೆ 831-098-0935 (ರಾಜ ಮುಡಿ ಅಕ್ಕಿ ನಟರಾಜ್)
ರಾಜ ಮುಡಿ ಅಕ್ಕಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://arunprasadhombuja.blogspot.com/2020/09/blog-post_9.html
Comments
Post a Comment