Blog number 871.ಹೆಲ್ತ್ ಟೂರಿಸಂ ಭಾಗವಾಗಿ ನನ್ನ ಕನಸಿನ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗಲಿದೆ ಇದು ಸುಸಜ್ಜಿತವಾದ ಸ್ಟಾರ್ ಕೆಟಗರಿಯ ವಸತಿ - ಊಟ ಸೌಲಭ್ಯದ ಜೊತೆ ಚಿಕಿತ್ಸೆಯನ್ನು ಸುಲಭವಾಗಿ ಅವರವರ ಬಜೆಟ್ ನಲ್ಲಿ ಪಡೆಯುವಂತೆ ಯೋಜಿಸಲಾಗುತ್ತದೆ.
#ಪ್ರವಾಸೋದ್ಯಮದ_ಅಂಗವಾಗಿ
#ನನ್ನ_ಬಹುದಿನದ_ಕನಸು.
#ಸದ್ಯದಲ್ಲೇ_ಪ್ರಾರಂಭವಾಗುವ_ಹಂತದಲ್ಲಿ
#ಶಿವಮೊಗ್ಗ_ಜಿಲ್ಲೆಯಲ್ಲಿ_ಸುಂದರ_ಪರಿಸರದಲ್ಲಿ_ಎಲ್ಲಾ_ಸೌಕಯ೯_ಹೊಂದಿದ_ಮೊದಲ_ಚಿಕಿತ್ಸಾಕೇಂದ್ರವಿದು.
ನನ್ನ ತಂದೆ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆ ಸೇರಿದ್ದರು, ಅವರ ಕುಶಲತೆ ಜ್ಞಾನವನ್ನು ನೋಡಿ ಆಗಿನ ಪ್ರಸಿದ್ದ ವೈದ್ಯರಾದ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ ಬೆಂಗಳೂರಿಗೆ ಹೋಮಿಯೋಪತಿ ವೈದ್ಯ ಕಾಲೇಜಿಗೆ ಸೇರಿಸಿ ವೈದ್ಯರನ್ನಾಗಿಸಿ ಅವರು ಸ್ಥಳಿಯವಾಗಿ ಮತ್ತು ಬಟ್ಟೆ ಮಲ್ಲಪ್ಪದಲ್ಲಿ ಕ್ಲೀನಿಕ್ ಮಾಡಿ ಜನರ ಆರೋಗ್ಯ ಸೇವೆ ಮಾಡುವಂತೆ ಮಾಡುತ್ತಾರೆ.
1960-70 ರ ದಶಕದಲ್ಲಿ ಆನಂದಪುರಂ ಆಸ್ಪತ್ರೆಗೆ ಹೊಸನಗರ ತಾಲ್ಲೂಕಿನಿಂದ - ಶಿವಮೊಗ್ಗ ತಾಲ್ಲೂಕಿನ ಕುಂಸಿಯಿಂದ,ಶಿಕಾರಿಪುರ ತಾಲ್ಲೂಕಿನ ಸಾಲೂರಿನ ತನಕ ರೋಗಿಗಳು ಬರುತ್ತಿದ್ದರು.
ಆಪರೇಷನ್ ಕೂಡ ಮಾಡುತ್ತಿದ್ದರು, ಡಾಕ್ಟರ್ ಕೃಷ್ಣನ್ ಶ್ರೀಮಂತರು, ಕನಕಮ್ಮಳ್ ಆಸ್ಪತ್ರೆ ನಿರ್ಮಿಸಿದ ಅಯ್ಯಂಗಾರ್ ಕುಟುಂಬದ ವೆಂಕಟಾಚಲ ಅಯ್ಯಂಗಾರರು ಅಂಬಾಸಡರ್ ಕಾರು ಹೊಂದಿದ್ದರು ಹಾಗೆ ಡಾಕ್ಟರ್ ಕೃಷ್ಣನ್ ಕೂಡ ಅಂಬಾಸಡರ್ ಕಾರು ಹೊಂದಿದ್ದರು.
ಮಧ್ಯರಾತ್ರಿಯಲ್ಲಿ ಡಾಕ್ಟರ್ ಕೃಷ್ಣನ್ ಕಾರು ಹಾರನ್ ಕೇಳಿ ನಮ್ಮ ತಂದೆ ಗಡಿಬಿಡಿಯಿಂದ ಎದ್ದು ಹೊರ ಹೋಗುತ್ತಿದ್ದರು ಅಲ್ಲಿ ಕಾರಿನ ಎದರು ಸಿಗರೇಟು ಸೇದುತ್ತಾ ಡಾಕ್ಟರ್ ಕೃಷ್ಣನ್ ನಮ್ಮ ತಂದೆಗೆ " ಕೃಷ್ಣ ... ಒಂದು ಸ್ಪೆಷಲ್ ಕೇಸ್ ಬಂದಿದೆ ಈಗಲೇ ಆಪರೇಷನ್ ಮಾಡಬೇಕು.. ನಿನಗೆ ಒಂದು ಒಳ್ಳೇ ಅನುಭವ..." ಅನ್ನುತ್ತಿದ್ದರು, ನಮ್ಮ ತಂದೆ ಕ್ಷಣಾರ್ದದಲ್ಲಿ ತಯಾರಾಗಿ ಅವರ ಜೊತೆ ಹೋಗುತ್ತಿದ್ದರು.
ಆಗೆಲ್ಲ ಈಗಿನ ಹಾಗೆ ಆನೆಸ್ತಿಯಾಗೆ - ಆರೈಕೆಗೆಲ್ಲ ಬೇರೆ ಬೇರೆ ತಂತ್ರಜ್ಞರು ಇರಲೇ ಬೇಕಾಗಿರಲಿಲ್ಲವೊ? ಅಥವ ಡಾಕ್ಟರ್ ಕೃಷ್ಣನ್ ರವರೆ ಅದೆಲ್ಲ ಜವಾಬ್ದಾರಿ ವಹಿಸುತ್ತಿದ್ದರೋ ಗೊತ್ತಿಲ್ಲ ಆದರೆ ವೈದ್ಯರೇ ತಮ್ಮ ಸಹಾಯಕರನ್ನೆಲ್ಲ ಮಧ್ಯರಾತ್ರಿ ತಮ್ಮ ಸ್ವಂತ ಕಾರಿನಲ್ಲಿ ಕರೆದುಕೊಂಡು ಹೋಗಿ ಆಪರೇಷನ್ ಮಾಡಿ ರೋಗಿ ಜೀವ ಉಳಿಸುವ ದೇವರಾಗಿದ್ದರು.
ಈ ಅನುಭವ ತರಬೇತಿ ನಮ್ಮ ತಂದೆ ನಮ್ಮ ಬಾಗದಲ್ಲಿ ಪ್ರಸಿದ್ಧ ವೈದ್ಯರೆಂಬ ಹೆಸರು ಪಡೆಯಲು ಕಾರಣವಾಯಿತು. ಅವರ ಹಣಕ್ಕಾಗಿ ಅಲ್ಲದ ಬಡವರ ಸೇವೆ ಅವರ ಜೀವನ ಸಾಥ೯ಕಗೊಳಿಸಿತು.
ನನಗೂ ಜೀವನದಲ್ಲಿ ಆಸ್ಪತ್ರೆ ಮಾಡಬೇಕು, ಜನರಿಗೆ ಆರೋಗ್ಯದ ಸಲಹೆ- ಚಿಕಿತ್ಸೆ ನೀಡಬೇಕೆಂಬ ಅದಮ್ಯ ಆಸೆ ಇದೆ.
ಇದರ ಮೊದಲ ಹಂತವಾಗಿ ನನ್ನ ಪ್ರವಾಸೋದ್ಯಮದ ಉದ್ಯಮದ ಅಂಗವಾಗಿ ( Health Tourism division) ಪ್ರಾರಂಬಿಸುವ ಕಾಲ ಬಂದಿದೆ.
ಎರೆಡು ವರ್ಷದ ಕೊರಾನಾ ಗಂಡಾಂತರದಿಂದ ವಿಳಂಬವಾಯಿತು ಮತ್ತು ಇದು ತಕ್ಷಣ ಟೇಕಾಫ್ ಆಗಲು ಅನೇಕ ಕಷ್ಟ ಕೂಡ ( Post Corana ಕಾಲದಲ್ಲಿ) ಇದೆ.
ಇದಕ್ಕೆ ಬೇಕಾದ ಎಲ್ಲಾ ತಯಾರಿಗಳು ಆಗಿದೆ, ವಿಶೇಷವಾಗಿ #ಶೀರೋದಾರ_ಚಿಕಿತ್ಸೆ ಬೇಕಾದ ಪರಿಕರಗಳು, ಅದಕ್ಕೆ ಬೇಕಾದ ಚಿಕಿತ್ಸಾ ಕೋಣೆ ಕೂಡ ತಯಾರಾಗಿದೆ ಜೊತೆಗೆ ವಿಶೇಷವಾಗಿ ಎ೦ಟು ಕಾಟೇಜುಗಳು ನಿರ್ಮಿಸಲಾಗಿದೆ.
ಶಿರೋದಾರ - ಮಡ್ ಬಾತ್ ಗಾಗಿ ಪ್ಯಾಕೇಜ್ ಘೋಷಣೆ ಮಾಡಲಿದ್ದೇನೆ ಇದರಲ್ಲಿ ನಮ್ಮದೆ ಲಾಡ್ಜ್ ಅಥವ ಕಾಟೇಜಿನಲ್ಲಿ ತಂಗಿದ್ದು ನಾವೇ ತಯಾರಿಸುವ ವಿಶೇಷ ಮಲೆನಾಡಿನ ಪಶ್ಚಿಮ ಘಟ್ಟದ ಆಹಾರದ ಜೊತೆ ಶಿರೋದಾರ - ಮಡ್ ಬಾತ್ ಚಿಕಿತ್ಸೆ ಪಡೆಯಬಹುದು.
ಮುಂದಿನ ದಿನದಲ್ಲಿ ಇಲ್ಲಿ ನ್ಯಾಚುರಾಪತಿ, ತೂಕ ಇಳಿಸುವ ಅನೇಕ ಚಿಕಿತ್ಸೆಗಳು ಪ್ರಾರಂಭವಾಗಲಿದೆ.
ನನ್ನ ಜೊತೆ ಕೈ ಜೋಡಿಸಿರುವವರೆಲ್ಲ ವಿಶೇಷ ವ್ಯಕ್ತಿಗಳು ಇದ್ದಾರೆ ಅವರೆಲ್ಲರ ಬೆಂಬಲದಿಂದ ನನ್ನ ಈ #ವೈದ್ಯೋ_ನಾರಾಯಣಹರಿ_ಆಯುರ್ವೇದ_ಕ್ಲೀನಿಕ್ ಕೆಲವೇ ದಿನದಲ್ಲಿ ಶುಭಾರಂಭ ಮಾಡಲಿದೆ ಎಂದು ತಿಳಿಸಲು ಸಂತೋಷವಾಗುತ್ತದೆ.
Comments
Post a Comment