Skip to main content

Posts

Showing posts with the label Rice roti recipe of Jain community families in GERUSOPPE PEPPER QUEEN CHENNABYRADEVI ruled region

Blog number 2161. ಗೇರುಸೊಪ್ಪೆಯ ಜೈನ ರಾಣಿ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಆಡಳಿತ ಪ್ರದೇಶದ ಜೈನರ ಮನೆಗಳ ವಿಶಿಷ್ಟ ರೊಟ್ಟಿ ರೆಸಿಪಿ ಸವಿದು ನೋಡ ಬನ್ನಿ

#ಪಶ್ಚಿಮ_ಘಟ್ಟದ_ಜೈನರು_ತಯಾರಿಸುವ_ವಿಶಿಷ್ಟ_ಅಕ್ಕಿ_ರೊಟ್ಟಿ. #ಗೇರುಸೊಪ್ಪೆಯ_ಕಾಳುಮೆಣಸಿನ_ರಾಣಿ_ಚೆನ್ನಾಬೈರಾದೇವಿ_ಆಳ್ವಿಕೆ_ಪ್ರದೇಶದಲ್ಲಿ_ಮಾತ್ರ. #ಇದು_ಅಕ್ಕಿ_ಹಿಟ್ಟಿನಿಂದ_ತಯಾರಾಗುವ_ರೊಟ್ಟಿ_ಅಲ್ಲ #ನೀರಲ್ಲಿ_ನೆನೆಸಿದ_ಅಕ್ಕಿ_ಒರಳಲ್ಲಿ_ಕಡೆದು_ಹೆಂಚಿನ_ಮೇಲೆ_ತಟ್ಟುವ_ರೊಟ್ಟಿ #ಇದರ_ರುಚಿ_ಘಮವೇ_ಬೇರೆ. #ಇದು_ಪಶ್ಚಿಮಘಟ್ಟದ_ಜೈನರ_ಸೂಪರ್_ರೆಸಿಪಿ.    ಯುರೋಪಿನ ದೇಶಗಳಲ್ಲಿ ಕಾಳು ಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಪಡೆದಿದ್ದ ಗೇರುಸೊಪ್ಪೆಯ ಜೈನರ ರಾಣಿ ಚೆನ್ನಾಭೈರಾದೇವಿ ಆಳಿದ ಪ್ರದೇಶವಾದ ಸಾಗರ ತಾಲೂಕಿನ ಕರೂರು,ಬಾರಂಗಿ ಹೋಬಳಿಗಳಲ್ಲಿ ಮಾರಿಗೊಂದು ಜೈನ ಬಸದಿಯ ಪಳಯುಳಿಕೆಗಳಿದೆ.      ರಾಣಿಯ ಕಾನೂರು ಕೋಟೆ ಇಲ್ಲೇ ಇತಿಹಾಸದ ಕಥೆ ಹೇಳುತ್ತಿದೆ, ಜೋಗ್ ಜಲಪಾತ ದಾಟಿದರೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆಯಲ್ಲಿ ರಾಣಿ ಚೆನ್ನಾ ಬೈರಾದೇವಿ ಪಶ್ಚಿಮ ಘಟ್ಟದಲ್ಲಿ ಸಂಗ್ರಹಿಸಿದ ಕಾಳು ಮೆಣಸು ಯುರೋಪಿಯನ್ನರ, ಅರಬ್ ದೇಶದ ವ್ಯಾಪಾರಿಗಳಿಗೆ ಸೇರಿದ ಹಡಗುಗಳಿಗೆ ತುಂಬುವ ಒಳನಾಡ ಬಂದರಾಗಿತ್ತು.   ಇಲ್ಲಿ ಹರಿಯುವ ನದಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಂಬೂ ತೀರ್ಥದಲ್ಲಿ ಹುಟ್ಟುವ ಶರಾವತಿ ನದಿ.    ಪೋಚು೯ಗೀಸರೊಂದಿಗೆ ಯುದ್ದ ಮಾಡಿದ್ದ ದೀರ ರಾಣಿ  ಚೆನ್ನಾ ಬೈರಾದೇವಿ ಮುಂದೆ ರಾಜ್ಯ ಕಳೆದು ಕೊಂಡು ಕೆಳದಿ ಅರಸರಾದ ರಾಜಾ ವೆಂಕಟಪ್ಪ ನಾಯಕರಿಂದ ಬಂದನಕ್ಕೆ ಒಳಗಾಗಿ ಇ...