4202.ಸಂಸದ_ರಾಘವೇಂದ್ರ_ಮಾತು_ಮಾತ್ರ_ಸಕಾಲಿಕವಾಗಿತ್ತು.ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ನಡೆದ_ಮುಖ್ಯಮಂತ್ರಿಗಳ_ಕಸ್ತೂರಿ_ರಂಗನ್_ವರದಿ_ಸಂವಾದ_ಸಭೆ.
ಸಂಸದ_ರಾಘವೇಂದ್ರ_ಮಾತು_ಮಾತ್ರ_ಸಕಾಲಿಕವಾಗಿತ್ತು.
ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ನಡೆದ_ಮುಖ್ಯಮಂತ್ರಿಗಳ_ಕಸ್ತೂರಿ_ರಂಗನ್_ವರದಿ_ಸಂವಾದ_ಸಭೆ.
ತೀರ್ಥಹಳ್ಳಿಯ ಸಂವಾದದಲ್ಲಿ #ರಮೇಶ್_ಹೆಗ್ಡೆ, ರೈತ ಸಂಘದ #ರಾಜೇಂದ್ರ ಮತ್ತು #ಬಿ_ಆರ್_ಜಯಂತ್ ಮುಖ್ಯ ಮಂತ್ರಿಗಳ ಗಮನ ಸೆಳೆಯುವಂತೆ ವಿಚಾರಗಳ ಪ್ರಸ್ತಾವನೆ ಮಾಡಿದ್ದಾರೆ ಇವರಿಗೆ ಅವಕಾಶ ಕಲ್ಪಿಸಿದ್ದು ಸರಿಯಾದ ಆಯ್ಕೆ ಆಗಿತ್ತು.
ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ತೀರ್ಥಹಳ್ಳಿಯಲ್ಲಿ ಇವತ್ತು (19- ಸೆಪ್ಟೆಂಬರ್ - 2026 ಶನಿವಾರ) ನಡೆಸಿದ ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ಗ್ರಾಮಗಳ ಸೇರ್ಪಡೆ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದ ಬಗ್ಗೆ ಇಡೀ ರಾಜ್ಯದಲ್ಲಿ ಕುತೂಹಲ ಮೂಡಿಸಿತ್ತು.
ಇದಕ್ಕಾಗಿಯೇ ಎರೆಡು ದಿನಗಳ ವಿಶೇಷ ವಿದಾನ ಸಭಾ ಸಮಾವೇಶ ಮುಖ್ಯಮಂತ್ರಿ ಹಮ್ಮಿಕೊಂಡಿದ್ದಾರೆ ಅದರ ಪೂರ್ವ ಬಾವಿ ಆಗಿ ಈ ಸಂವಾದಗಳು ಎಂದು ಸರ್ಕಾರ ಹೇಳಿದ್ದರೂ ಅಲ್ಲಿನ ಕಾಲ ಮಿತಿಯಲ್ಲಿ ಯಾವ ರೀತಿ ಸಂವಾದ ಸಾಧ್ಯ ಎಂಬ ಪ್ರಶ್ನೆ ಸಹಜ.
ಮುಖ್ಯಮಂತ್ರಿಗಳ ಆಪ್ತರಾದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ #ಆರ್_ಎಂ_ಮಂಜುನಾಥ_ಗೌಡರು ಹೊಸನಗರ - ಸಾಗರ ಮತ್ತು ತೀರ್ಥಹಳ್ಳಿಗಳಲ್ಲಿ ಅವರ ಸಹಕಾರಿ ಮಂಡಲಗಳ ಮೂಲಕ ಪಕ್ಷಾತೀತವಾಗಿವಾಗಿ ಪಾದ ಯಾತ್ರೆ ಮುಗಿಸಿದ್ದಾರೆ.
ಅವರ ಪ್ರಯತ್ನದಿಂದಲೇ ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿಗಳ ಈ ಸಭೆ ಆಯೋಜನೆ ಆಗಿತ್ತು.
ರಾಜಕೀಯ ಪಕ್ಷಗಳ ವ್ಯವಸ್ಥೆಯಲ್ಲಿ ಇಂತಹ ಸಂವಾದಗಳು ಅರ್ಥ ಕಳೆದುಕೊಳ್ಳುವ ಅಪಾಯ ಹೆಚ್ಚು ಆದರೂ ತೀರ್ಥಹಳ್ಳಿಯ ಸಂವಾದದಲ್ಲಿ ರಮೇಶ್ ಹೆಗ್ಡೆ, ರೈತ ಸಂಘದ ರಾಜೇಂದ್ರ ಮತ್ತು ಬಿ. ಆರ್. ಜಯಂತ್ ಮುಖ್ಯ ಮಂತ್ರಿಗಳ ಗಮನ ಸೆಳೆಯುವಂತೆ ವಿಚಾರಗಳ ಪ್ರಸ್ತಾವನೆ ಮಾಡಿದ್ದಾರೆ ಇವರಿಗೆ ಅವಕಾಶ ಕಲ್ಪಿಸಿದ್ದು ಸರಿಯಾದ ಆಯ್ಕೆ ಆಗಿತ್ತು.
ಇಡೀ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಸಂಸದ್ ಸದಸ್ಯತ್ವದ ಘನತೆ ಗೌರವಗಳನ್ನು ಮತ್ತು ತಮಗೆ ದೊರೆತ ಸೀಮಿತ ಸಮಯ ಬಳಸಿಕೊಂಡು ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡಿದವರು ಶಿವಮೊಗ್ಗ ಜಿಲ್ಲೆಯ ಲೋಕ ಸಭಾ ಸದಸ್ಯರಾದ ರಾಘವೇಂದ್ರಯಡ್ಯೂರಪ್ಪ.
ಕಸ್ತೂರಿ ರಂಗನ್ ವರದಿ ಬರಲು ಕಾರಣ ಅದರಿಂದ ನಮ್ಮ ರಾಜ್ಯ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿನ ಭೂ ಪ್ರದೇಶದ ವ್ಯಾಪ್ತಿ ಹಾಗೂ ಹಿಂದಿನ ಪರಿಸರ ಸೂಕ್ಷ್ಮ ಪ್ರದೇಶದ ಆರು ಪ್ರಸ್ತಾವನೆಗಳು ಯಾವ ಯಾವ ಮುಖ್ಯಮಂತ್ರಿ ಕಾಲದಲ್ಲಿ ತಿರಸ್ಕರಿಸಿದರು ಇತ್ಯಾದಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳಿಗೆ ಮನಮುಟ್ಟುವಂತೆ ಮತ್ತು ನೆರೆದ ಸಭಿಕರಿಗೆ ಅರ್ಥ ಆಗುವಂತೆ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ಎರೆಡು ದಿನದ ವಿಶೇಷ ವಿಧಾನ ಮಂಡಲದ ಅಧಿವೇಶನದಲ್ಲಿ ಸಾರಾಸಗಟಾಗಿ ಕಸ್ತೂರಿ ರಂಗನ್ ವರದಿ ವಿರೋದಿಸದೆ ಗ್ರೌಂಡ್ ಟ್ರೂಥ್ ಸಮೀಕ್ಷೆ ಮಾಡಿ ಜನ ವಸತಿ - ಕೃಷಿ ಭೂಮಿ ಹೊರತುಪಡಿಸಿ ಕಸ್ತೂರಿ ರಂಗನ್ ವರದಿ ಸ್ವೀಕರಿಸಲು ಸಲಹೆ ಕೂಡ ನೀಡಿದ್ದಾರೆ.
#kasturiranganreport #thirthahalli #shivamogga
#raghavendrayadurappa #rmmanjunathagowda #dkshivakumar #madhubangarappa #govtofkarnataka
Comments
Post a Comment