#ಸಾಗರ_ತಾಲೂಕಿನ_ಭೀಮನಕೋಣೆ_ಸಮೀಪದ_ಕೇದಿಗೆ_ಸರದಲ್ಲಿ #ಕವಿ_ಪರಮ_ದೇವರು_ತುರಂಗ_ಭಾರತ_ರಚಿಸಿದರು. #ಕೆಳದಿ_ಅರಸರ_ಕಾಲದ_ಮೊದಲ_ಕವಿ #ವ್ಯಾಸಭಾರತದ_18_ಪರ್ವಗಳನ್ನ_ಕನ್ನಡದಲ್ಲಿ_ಬರೆದ_ಮೊದಲ_ಕವಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಹೆಗ್ಗೋಡು_ಸಮೀಪದ #ಭೀಮನಕೋಣೆಯ_ಕೇದಿಗೆಸರದ_ಅರ್ಚಕರಾಗಿದ್ದ #ಕವಿ_ಪರಮದೇವ_ವಿರಚಿತ_ಶ್ರೀತುರಂಗಭಾರತ. #sriturangabharath #shivamogga #sagar #Heggodu #bhimanakone #kedalasara #vyasabharath #kannada #karnataka ಕವಿಯ ಕಾಲ ಕಾವ್ಯ ಕವಿಯ ಜನನ ಕ್ರಿ, ಶ, ೧೭೨೦. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಿಗೋಡು ಕವಿಯ ಜನ್ಮ ಸ್ಥಳ. ಇವನು ಹವ್ಯಕ ಬ್ರಾಹ್ಮಣ. ತಂದೆಯ ಹೆಸರು ಶಂಕರನಾರಾಯಣಯ್ಯ, ತಾಯಿಯ ಹೆಸರು ಮಹಾಲಕ್ಷ್ಮಮ್ಮನವರು. ತಂದೆ ವಿದ್ವಾಂಸರು, ಜೋತಿಷಿಗಳು, ಸೂರ್ಯನ ಔಪಾಸಕರು, ಪರಮೇಶ್ವರನ ಭಕ್ತರು. ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಗಳು. ಇವರು ವಂಶಪಾರಂಪರ್ಯವಾಗಿ ಬಂದಿದ್ದ ಗದ್ದೆ, ತೋಟ, ಮನೆ ಹೊಂದಿದ್ದರು. ಇವರ ವಂಶಸ್ಥರು ಸಳಿಗೋಡಿನಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಲಕ್ಷ್ಮೀನಾರಾಯಣ ಹಾಗೂ ಒಂದು ಶಿವಲಿಂಗವನ್ನೂ ಸ್ಥಾಪಿಸಿ, ಪೂಜಿಸಿಕೊಂಡು ಬಂದಿದ್ದರು. ಶಂಕರನಾರಾಯಣಯ್ಯನೂ ಈ ಪೂಜೆಯನ್ನು ಮುಂದುವರಿಸಿಕೊಂಡು ಬಂದಿದ್ದನು. ಕವಿಗೆ ತಂದೆಯಿಂದಲೇ ಪ್ರಾರಂಭಿಕ ವಿದ್ಯಾಭ್ಯಾಸವಾಯಿತು. ಶಂಕರನಾರಾಯಣಯ್ಯ ಯಕ್ಷಗಾನ ಬಯಲಾಟಗಳಲ್ಲಿ,...