ಬೂದಗುಂಬಳ ಅಮೃತ ಸಮಾನ, ಇದರ ಸಿಪ್ಪೆ, ಬೀಜ, ತಿರಳು, ರಸ, ಹೂವು ಮತ್ತು ಚಿಗುರು ಆಹಾರವಾಗಿ ಬಳಕೆ, ಇದರಲ್ಲಿರುವ ಔಷದ ಗುಣ ಪರಿಣಾಮಕಾರಿ, ವರ್ಷದಲ್ಲಿ ನಾಕಾರು ಬಾರಿಯಾದರೂ ಇದರ ರಸ ಸೇವನೆ ಮಾಡಬೇಕು.
#ಬೂದುಗುಂಬಳ_ಸರ್ವ_ಶ್ರೇಷ್ಟ_ಆಹಾರ_ಔಷದಿ #ಬೂದಗುಂಬಳದ_ಚಿಗುರು_ಹೂವು_ಕಾಯಿ_ಸಿಪ್ಪೆ_ತಿರಳು_ಬೀಜ_ಎಲ್ಲವೂ_ಬಳಕೆಗೆ #ಇದರಲ್ಲಿರುವ_ಔಷದ_ಗುಣವೂ_ಅಪರಿಮಿತ. #ಇವತ್ತು_ಕುಡಿಯಲು_ಬೂದಗುಂಬಳದ_ರಸ_ಮತ್ತು_ಹಲ್ವ_ಮಾಡಿದ್ದೆ ನನ್ನ ಡಿಪ್ಲೋಮೋ ಸಹಪಾಠಿ ಗೆಳೆಯರೊಬ್ಬರು ಸೊಯಾ೯ಸೀಸ್ ನಿಂದ ಬಳಲುತ್ತಿದ್ದರು, ದೇಹದ ಚರ್ಮದ ಕಾಯಿಲೆ, ಇದರಿಂದ ಅವರು ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದರು, ಈ ಕಾಯಿಲೆಯಿಂದ ಊರು ಬಿಟ್ಟು ಬೆಂಗಳೂರು ಸೇರಿದ್ದರು, ಬಿಸಿಲಿಗೆ ಹೊರಗಡೆ ಹೋದರೆ ಇನ್ನೂ ಹೆಚ್ಚು ಇದಕ್ಕೆ ಅವರು ಮಾಡದ ಔಷದಿ ಇಲ್ಲ, ಆದರೆ ಪರಿಣಾಮ ಶೂನ್ಯ. ಬೆಂಗಳೂರಿನ ಚಿಕ್ಕಪೇಟೆ ಪ್ರದೇಶದಲ್ಲಿ ಅವರು ಕೆಲಸ ಮಾಡುವ ಕಂಪನಿಯ ವಸೂಲಿಗೆ ಹೋದಾಗ ಅಲ್ಲೊಂದು ಸಣ್ಣ ಆಯುರ್ವೇದ ಚಿಕಿತ್ಸಾಲಯ ನೋಡಿ ಸುಮ್ಮನೆ ಒಳ ಹೋದಾಗ ಅಲ್ಲಿ ವೈದ್ಯರೋರ್ವರು ಯಾವುದೇ ರೋಗಿ ಇಲ್ಲದೆ ವಿರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದವರ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ, ಆ ವೈದ್ಯರು ಹೇಳಿದ ಪರಿಹಾರ ಪ್ರತಿ ದಿನ ಒಂದು ಲೋಟ ಬೂದಗುಂಬಳ ತುರಿದು ಹಿಂಡಿ ರಸ ಕುಡಿಯಿರಿ, ಬೇರೆ ಯಾವ ಔಷದಿಯೂ ಬೇಡ ಅಂದರಂತೆ. ಈ ವೈದ್ಯರು ಇಷ್ಟು ಸರಳವಾಗಿ ಹೇಳಿದರಲ್ಲ ಅಂತ ನನ್ನ ಗೆಳೆಯರು ನಿರ್ಲಕ್ಷ ಮಾಡಿದರಂತೆ. ಊರಿಗೆ ಬಂದಾಗ ಪತ್ನಿ ಹತ್ತಿರ ಹೇಳಿದ್ದಾರೆ, ಇವರ ಪತ್ನಿ ದಿನಾ ಒತ್ತಾಯದಿಂದ ಬೂದಗುಂಬಳದ ನೀರು ಕುಡಿಸುತ್ತಾ ಬಂದಿದ್ದಾರ...