Blog number 1385. ಕುಣುಬಿ ಜನರು ಸಂರಕ್ಷಿಸಿಕೊ೦ಡು ಬಂದಿರುವ ಅಮೂಲ್ಯ ಗೆಡ್ಡೆ ಗೆಣಸುಗಳ ಭಂಡಾರ ನೋಡಿದರೆ ಅರಿವಾದೀತು ಅವರ ಜೀವ ವೈವಿಧ್ಯಗಳ ಕಾಳಜಿ.
#ಆನಂದಪುರಂ_ಇತಿಹಾಸ_ಸಂಖ್ಯೆ_91. #ಸಾಗರ_ತಾಲ್ಲೂಕಿನ_ಮೊದಲ_ಕುಣುಬಿ_ಸಮಾಜದ_ಸಮಾವೇಷ_ಆನಂದಪುರಂನಲ್ಲಿ #ಸರ್ಕಾರಗಳು_ಕುಣುಬಿ_ಜನಾಂಗ_ಕಡೆಗಾಣಿಸಿದೆ #ಬೇರೆ_ರಾಜ್ಯದಲ್ಲಿ_ಪರಿಶಿಷ್ಟಪಂಗಡ #ನಮ್ಮ_ರಾಜ್ಯದಲ್ಲಿ_ಇಲ್ಲ_ಆ_ಸವಲತ್ತು #ಕುಣುಬಿ_ಜನಾಂಗ_ಸಂರಕ್ಷಿಸಿಕೊಂಡು_ಬಂದ_ಗೆಡ್ಡೆ_ಗೆಣಸು, #ಜೊಯಿಡಾದ_ಮಹಾದೇವ_ಬುದೋ_ವೆಳಿಪ_ಮೊದಲ_ಮತ್ತು_ಏಕೈಕ_ರಾಜ್ಯಪ್ರಶಸ್ತಿ_ಪಡೆದವರು #ಸಾಗರ_ತಾಲ್ಲೂಕಿನ_ಮರಾಠಿ_ಗ್ರಾಮದ_ಕುಣುಬಿ_ಜನರ_ಜಮೀನು_ಜೀವ_ವೈವಿಧ್ಯ_ತಾಣಕ್ಕೆ #ಈ_ಬಾರಿಯ_ಸಾಗರ_ವಿದಾನಸಭಾ_ಚುನಾವಣೆ_ಬಹಿಷ್ಕರಿಸಿದ್ದಾರೆ. #ಜೊಯಿಡಾದ_ಕುಣುಬಿ_ಜನರ_ಕೆಸವಿನ_ಬೀಜ_ತರಿಸಿದ_ಪತ್ರಕರ್ತ_ಶೃಂಗೇಶ್. #ಶಿವಮೊಗ್ಗ_ಜಿಲ್ಲಾ_ಕುಣುಬಿ_ಜನಾಂಗದ_ಮೊದಲ_ಸಮಾವೇಷ_ಕೋಗಾರಿನ_ದೇವಗಾರು_ಗ್ರಾಮದಲ್ಲಿ. ಪತ್ರಕರ್ತ ಗೆಳೆಯರಾದ ಶೃಂಗೇಶ್ ರವಿ ಬೆಳೆಗೆರೆ ಅವರ ಹಾಯ್ ಬೆಂಗಳೂರಿನ ರೋವಿಂಗ್ ರಿಪೋರ್ಟರ್ ಅಂತ ಬೆಳಗೆರೆಯಿಂದಲೇ ಕರೆಸಿಕೊಂಡವರು, ಈಗ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ಸಂಪಾದಕರು. ಶೃಂಗೇರಿಯ ಪಿತ್ರಾರ್ಜಿತ ಅಡಿಕೆ ತೋಟದ ಕೃಷಿ ಮಾಡಿ ಅನುಭವದೊಂದಿಗೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದಲ್ಲಿ ಒಣ ಭೂಮಿ ಖರೀದಿಸಿ ಅನೇಕ ಕೃಷಿ ಪ್ರಯೋಗ ಮಾಡುತ್ತಿದ್ದಾರೆ. ಮೊನ್ನೆ ದೂರದ ಜೋಯಿಡಾದಿಂದ ಕುಣುಬಿ ಜನರು ಸಂರಕ್ಷಿಸಿಕೊಂಡು ಬಂದಿರುವ ಕೆಸುವಿನ ಬೀಜ ತರಿಸಿ ನಾಟಿ ಮಾಡಿಸುತ್ತಿದ್ದಾರೆ ನನಗಾಗಿ ಈ ಬೀಜದ ...