Skip to main content

Posts

Showing posts with the label Valmiki Ananda Alwar chief priest of Anandapuram Ranganatha temple

ಆನಂದಪುರಂ ಇತಿಹಾಸ ಭಾಗ-7.ಆನಂದಪುರಂನ ಲಕ್ಷ್ಮೀ ರಂಗನಾಥ ದೇವಾಲಯಕ್ಕೆ ಅರ್ಚಕರಾಗಿ ದೀಘ೯ ಕಾಲ ಸೇವೆ ಸಲ್ಲಿಸಿದ ವಾಲ್ಮೀಕಿ ಆನಂದ ಆಳ್ವಾರ್ ಮೈಸೂರಿನ ಪಾಂಡವಪುರ ಮೂಲದ ಪುರೋಹಿತರು,ಮೂಲ ಶ್ರೀಕೋದಂಡರಾಮ ದೇವಾಲಯ ಶ್ರೀರಂಗನಾಥ ಆದ ಸತ್ಯಕಥೆ.ಟಿಪ್ಪೂ ಸುಲ್ತಾನರ ಆನಂದಪುರಂ ಐತಿಹಾಸಿಕ ಬೇಟಿ,ಹರಪ್ಪಾ ಮಹೆಂಜದಾರೋ ಮತ್ತು ಸಮುದ್ರದಲ್ಲಿ ಮುಳುಗಿದ್ದ ಶ್ರೀಕೃಷ್ಣನ ದ್ವಾರಕಾ ನಗರಿ ಸ೦ಶೋದಿಸಿದ ವಿಶ್ವವಿಖ್ಯಾತ ಎಸ್.ಆರ್.ರಾವ್ ಆನಂದಪುರದ ರಂಗನಾಥ ದೇವರ ಹರಕೆಯಿಂದ ಆನಂದಪುರಂನಲ್ಲಿ ಜನಿಸಿದವರು

ಆನಂದಪುರಂ ಇತಿಹಾಸ ಭಾಗ_7    #ಆನಂದಪುರಂನ_ಲಕ್ಷ್ಮೀ_ರಂಗನಾಥ_ದೇವಾಲಯಕ್ಕೆ_ಅರ್ಚಕರಾಗಿ_ದೀಘ೯_ಸೇವೆ_ಸಲ್ಲಿಸಿದ #ವಾಲ್ಮೀಕಿ_ಆನಂದ_ಆಳ್ವಾರ್ #ಮೈಸೂರಿನ_ಪಾಂಡವಪುರ_ಮೂಲದ_ಪುರೋಹಿತರು #ಮೂಲ_ಶ್ರೀರಾಮ_ದೇವಾಲಯ_ಶ್ರೀರಂಗನಾಥ_ಆದ_ಸತ್ಯ_ಕಥೆ. #ಟಿಪ್ಪೂ_ಸುಲ್ತಾನರ_ಆನಂದಪುರಂ_ಐತಿಹಾಸಿಕ_ಬೇಟಿ  #ಹರಪ್ಪಾ_ಮಹೆಂಜದಾರೋ_ಸಮುದ್ರದಲ್ಲಿ_ಮುಳುಗಿದ್ದ_ಶ್ರೀಕೃಷ್ಣನ_ದ್ವಾರಕಾ_ನಗರಿ_ಸಂಶೋದಿಸಿದ #ವಿಶ್ವವಿಖ್ಯಾತ_ಎಸ್_ಆರ್_ರಾವ್_ಆನಂದಪುರದ_ರಂಗನಾಥ_ದೇವರ_ಹರಕೆಯಿಂದ_ಜನಿಸಿದವರು    ಆನಂದಪುರದ ಶ್ರೀ ರಂಗನಾಥ ದೇವಾಲಯ ಪುರಾತನ ದೇವಾಲಯ, ಈ ದೇವಾಲಯದ ಶಿಲಾಮಯ ದ್ವಜ ಸ್ತಂಭದ ಕೆಳಭಾಗದಲ್ಲಿ 12 ನೇ ಶತಮಾನದ ಹೊಸಗುಂದ ಅರಸರು ಈ ದೇವಾಲಯ ನವೀಕರಣ ಮಾಡಿ ದಾನ ದತ್ತಿ ನೀಡಿದ ಉಲ್ಲೇಖ ಇದೆ.   ಈ ದೇವಾಲಯಕ್ಕೆ ಈ ಭಾಗದಲ್ಲಿ ಆಯ್ಯ೦ಗಾರ್ ಕುಟುಂಬ ಅಥಿ೯ಕ ವಾಗಿ ಸಾಮಾಜಿಕವಾಗಿ ಬಲಿಷ್ಟರಾದ ಮೇಲೆ ಅವರಿಂದ ಹೆಚ್ಚು ಸೇವೆ ಸಲ್ಲಿದೆ ಇದು ನಿತ್ಯ ಪೂಜೆಯಿಂದ ವಾಷಿ೯ಕ ರಥೋತ್ಸವದ ತನಕ.   ಈಗಲೂ ಆಯ್ಯಂಗಾರ್ ಕುಟುಂಬಸ್ಥರು ಅದನ್ನು ಮುಂದುವರಿಸುತ್ತಾ ಇದ್ದಾರೆ.    ಹಾಗಾಗಿ ಕಾಲ ಕಾಲಕ್ಕೆ ಅರ್ಚಕರನ್ನು ಅವರೇ ವ್ಯವಸ್ಥೆ ಮಾಡುತ್ತಾ ಬಂದರು.   ರಾಮಕೃಷ್ಣ ಅಯ್ಯಂಗಾರರು ಮೈಸೂರಿನ ಪಾಂಡವಪುರದಿಂದ ವಾಲ್ಮೀಕಿ ರಂಗಯ್ಯಂಗಾರ್ ಎಂಬ ಪುರೋಹಿತರನ್ನು ಅರ್ಚಕರಾಗಿ ಕರೆತರುತ್ತಾರೆ ಅವರು ಅವರ ಜೊತೆ ಅವ...