#ನನ್ನ_ಮತ್ತು_ಜೇನಿ_ಮಂಜುನಾಥಭಟ್ಟರ_ಗೆಳೆತನಕ್ಕೆ_ಎರೆಡು_ದಶಕ #ಜಾತಿ_ಬದಿಗಿಟ್ಟು_ಮನುಷ್ಯತ್ವಕ್ಕೆ_ಬೆಲೆ_ಕೊಡುವ_ಭಟ್ಟರು #ಇವರ_ಕೆಲಸದವರಿಗೆ_ಮನೆ_ಕಟ್ಟಿಸಿ_ಕೊಡುತ್ತಾರೆ #westernghats #jenimanjunathbhat #manjushrinarsery #hosanagara #malenadu ಜೇನಿ ಮಂಜುನಾಥ ಭಟ್ಟರು ನಾನು ಕಂಡ ಕೆಲವೇ ಕೆಲವು ನುಡಿದಂತೆ ನಡೆಯುವ ವ್ಯಕ್ತಿಗಳಲ್ಲಿ ಒಬ್ಬರು. ಇವರದ್ದು ಜಾತಿಯಿಂದ ಮಂದಿ ನೋಡುವ ಕಣ್ಣುಗಳಲ್ಲ ಮನುಷ್ಯತ್ವಕ್ಕೆ ಮಾತ್ರ ಬೆಲೆ ಕೊಡುವ ದೃಷ್ಟಿ. ಇವರು ಇವರ ಬಡ ಕೂಲಿ ಕಾರ್ಮಿಕರ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಕೆಲಸಗಾರರಿಗೆ ಮನೆ ಕಟ್ಟಿಸಿ ಕೊಡುವ ಹೃದಯವಂತರು ಇವರು. ತೋಟಗಾರಿಕೆ ಸಸ್ಯ ಬಿಡಿ ಇಡೀ ಪಶ್ಚಿಮ ಘಟ್ಟದ ಕಾಡಿನ ಸಸ್ಯಗಳ ಪರಿಚಯ ಇವರಿಗಿದೆ ಮತ್ತು ಅವುಗಳ ಬೀಜ ಪ್ರಸಾರದ ಜ್ಞಾನ ಗೊತ್ತಿರುವ ಕೆಲವೇ ಜನರಲ್ಲಿ ಇವರೊಬ್ಬರು. ಆದ್ದರಿಂದಲೇ ಇವರನ್ನ ಹುಡುಕಿ ಹೋಗಿ ಗೌರವಿಸಿ ಬಂದೆ ಅವರು ನೀಡಿದ 35 ವರ್ಷ ಪ್ರಾಯದ ಬೊನ್ಸಾಯ್ ನನ್ನ ಆಫೀಸಿನ ಟೇಬಲ್ ಅಲಂಕರಿಸಿದೆ ನನ್ನ ಅವರ ಎರಡು ದಶಕದ ಗೆಳೆತನ ನೆನಪಿಸುತ್ತಿದೆ. ಅವತ್ತು ಇವರ ಜೊತೆ ಇವರ ಪುತ್ರ ಶ್ರೀಧರ ಮತ್ತು ಇವರ ಆಪ್ತ ಸಿಬ್ಬಂದಿ ಲೋಕೇಶ್ ಇದ್ದರು ಈ ಫೋಟೋದಲ್ಲಿ ಅವರಿದ್ದಾರೆ. ಲೋಕೇಶ್ ಕಾಗೋಡು ಹೋರಾಟದ ನೇತಾರ...