Skip to main content

Posts

Showing posts with the label Ekkada Gida and its impact

Blog number 3409. ಎಕ್ಕದ ಗಿಡದ ಮಹತ್ವ

#ಎಕ್ಕದಗಿಡ #ಆಯುರ್ವೇದ_ಮತ್ತು_ಧಾರ್ಮಿಕದಲ್ಲಿ_ಮಹತ್ವದ_ಗಿಡ #ಶಿವನ_ಗಣಪತಿಯ_ಪೂಜೆಲ್ಲಿ_ಎಕ್ಕೆ_ಹೂವಿನ_ಬಳಕೆ #ಬಿಳಿಎಕ್ಕೆಗಿಡದ_ಬೇರಿನಿಂದ_ಗಣಪತಿ_ವಿಗ್ರಹ #ganapathi #lordshiva #ayurveda #calotropigigantea #KRSParty #ravikrishnareddy #lsumitra    ರೆಡ್ಡಿ ಅವರು ಒಂದು ಪೋಸ್ಟ್ ಹಾಕಿದ್ದರು ಓದಿ....  ಎಕ್ಕದ ಹೂವು. ಉತ್ತರ ಭಾರತದಲ್ಲಿ ಈ ಹೂವಿನ ಮಾಲೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ನಮ್ಮಲ್ಲಿ ಇದೊಂದು ಏನಕ್ಕೂ ಬಾರದ ಯಃಕಶ್ಚಿತ್ ಕಳೆ ಗಿಡ. ಇನ್ನೂ ಅರಳದ ಇದರ ಒಳಗೆ ಗಾಳಿ ತುಂಬಿದ ಮೊಗ್ಗಿನ ಬುಡ್ಡೆಯನ್ನು ಅಮುಕಿದರೆ ಅದು ಟಪ್ ಎಂದು ಶಬ್ದ ಮಾಡುತ್ತ ಒಡೆಯುತ್ತದೆ. ನಾನಂತೂ ಚಿಕ್ಕಂದಿನಿಂದ ಈ ಗಿಡ ಮತ್ತು ಅದರ ಅರಳದ ಮೊಗ್ಗಿನ ಬುಡ್ಡೆ ಕಂಡರೆ ಅದನ್ನು ಅಮುಕಿ, ಅದರಿಂದ ಹೊಮ್ಮುವ ಟಪ್ ಶಬ್ದವನ್ನು ಆನಂದಿಸುತ್ತೇನೆ. ನೀವೂ ಹಾಗೆ ಮಾಡಿದ್ದೀರಾ?... ಇದಕ್ಕೆ ನನ್ನ ಪ್ರತಿಕ್ರಿಯೆ... ಎಕ್ಕದ ಹೂವು ಶಿವನಿಗೆ ಗಣಪತಿಗೆ ಅರ್ಪಿಸಿದರೆ, ಎಕ್ಕದ ಎಲೆ ಶನೀಶ್ವರನಿಗೆ ಅರ್ಪಿಸುತ್ತಾರೆ.  ಶಿರಡಿ ಸಮೀಪದ ಶನಿ ಶಿಂಗಾಪುರದಲ್ಲಿ ಹೂವಿನ ಪ್ರಸಾದಕ್ಕಿಂತ ಎಕ್ಕದ ಎಲೆಯೇ ಪ್ರಸಾದವಾಗಿ ನೀಡುತ್ತಾರೆ.   ಮನೆ ಎದರು ಎಕ್ಕದ ಗಿಡ ಇದ್ದರೆ ಅದೃಷ್ಟ ಎಂಬ ನಂಬಿಕೆ ಇದೆ.   ಎಕ್ಕದ ಗಿಡ ಜಾನುವಾರುಗಳು ತಿನ್ನುವುದಿಲ್ಲ ಆದ್ದರಿಂದ ನಮ್ಮ ಸಂಸ್ಥೆ ಮತ್ತು ಮನೆ ಎದುರು ಈ ಗಿಡ ನೆಟ್ಟಿದ್...