Blog number 1127. ದಿನೇಶ್ ಶಿರವಾಳ ಮತ್ತು ಕೆಳದಿ ಈ.ರಮೇಶ್ ಬಂದಿದ್ದರು, ಅವರ ಹೋರಾಟದ ಕರಪತ್ರ ನೀಡಿದರು. ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರು 1948 ರಲ್ಲಿ ಸ್ಥಾಪಿಸಿದ್ದ ರೈತ ಸಂಘ ಇವರೆಲ್ಲ ಸೇರಿ ಈಗ ಪುನರ್ ಸಂಘಟಿಸಿದ್ದಾರೆ.
#ಸಾಗರದ_ಹೋರಾಟದಲ್ಲಿ_ಹೊಸ_ಚಿಂತನೆಯ_ಹೋರಾಟಗಾರರಾದ #ದಿನೇಶ್_ಶಿರವಾಳ_ಮತ್ತು_ಕೆಳದಿ_ರಮೇಶ್_ನಿನ್ನೆ_ಬಂದಿದ್ದರು. #ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರು_1_ಜನವರಿ_1948ರಲ್ಲಿ_ಸ್ಥಾಪಿಸಿದ್ದ #ರೈತಸಂಘ_ಮರು_ಸ್ಥಾಪಿಸಿದ್ದಾರೆ. #ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ಯುವ_ಪಡೆ_ಇವರದ್ದು. https://youtu.be/0qhIfPHSBGs ಸುಮಾರು 75 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ ಕಡಿದಾಳು ಮಂಜಪ್ಪ ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್. ಮಂಜಪ್ಪ ಗೌಡರ ರೈತ ಸಂಘ . ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಮುಂತಾದ ಭಾಗಗಳಲ್ಲಿ ಕವಿ, ಸಮಾಜವಾದಿ ದಿನಕರ ದೇಸಾಯಿ ನೇತೃತ್ವದಲ್ಲಿನ ರೈತ ಸಂಘಗಳು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. ಬಡ ರೈತರು, ಗೇಣಿದಾರರು ತಮ್ಮ ಅಸ್ತಿತ್ವಕ್ಕಾಗಿ ಸಂಘಟನೆಗೊಂಡು ಸಂಘರ್ಷ ನಡೆಸಲೇ ಬೇಕಾದ ಪರ್ವ ಕಾಲವದು ಆ ಸಂದರ್ಭದಲ್ಲೇ ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರು ರೈತ ಸಮಾವೇಷ ನಡೆಸುತ್ತಾರೆ ಅದರಲ್ಲಿ ರಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಭಾಗವಹಿಸುತ್ತಾರೆ ಇದೆಲ್ಲದರ ಪ್ರೇರಣೆಯಿಂದ ಸಾಗರ ತಾಲ್ಲೂಕಿನಲ್ಲಿ 1- ಜನವರಿ -1948 ರಲ್ಲಿ ಗಣಪತಿಯಷ್ಟ ರೈತ ಸಂಘದ ಸ್ಥಾಪನೆಯ ಸಭೆ ನಡೆಸುತ್ತಾರೆ. ...