Skip to main content

Posts

Showing posts with the label Un auspicious time my marriage

Blog number 1714. ಮಹೂರ್ತ ತಪ್ಪಿ ಹೋದ ಆ ವೇಳೆಯಲ್ಲಿ ನಡೆದ ನನ್ನ ಮದುವೆಗೆ 34 ವರ್ಷ.

#ನಿನ್ನೆ_ಆಗಸ್ಟ್_23_ಮುಗಿದ_ಮೇಲೆ_ಗೊತ್ತಾಯಿತು. #ಆಗಸ್ಟ್_23_1989_ನಾನು_ವಿವಾಹ_ಆದ_ದಿನಾಂಕ. #ದಾಂಪತ್ಯ_ಜೀವನದ_34_ವಷ೯_ಕಳೆಯಿತು. #ಹುಟ್ಟು_ಹಬ್ಬ_ವೆಡ್ಡಿಂಗ್_ಆನಿವರ್ಸರಿ_ಈವರೆಗೂ_ನಾನು_ಆಚರಿಸಿಲ್ಲ.    ನನ್ನ ಮದುವೆ ಮೊದಲಿಗೆ ಗುಟ್ಟಾಗಿ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಾಯಿಸಿದ್ದೆ ನಂತರ ಎರೆಡು ವರ್ಷದ ನಂತರ ನಮ್ಮ ತಂದೆಯ ಒಪ್ಪಿಸಿ ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದಲ್ಲಿ 23 ಆಗಸ್ಟ್ 1989ರಲ್ಲಿ ಅಧಿಕೃತವಾಗಿ ಮದುವೆ ಆಗಿದ್ದೆ ಅಂದರೆ ನಿನ್ನೆಗೆ 34 ವರ್ಷ ಆಯಿತು.    ಅವತ್ತು ವಿಪರೀತ ಮಳೆ ಮತ್ತು ನಮ್ಮ ತಂದೆ ಕೊನೆಕ್ಷಣದಲ್ಲಿ ನನ್ನ ಮದುವೆಗೆ ಬರುವುದಿಲ್ಲ ಅಂದಾಗ ಸನ್ನಿವೇಶ ಕ್ಲೈಮ್ಯಾಕ್ಸ್ ಗೆ ಹೋಗಿ ಸುಖಾಂತ್ಯವಾಗಿ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ ತಲುಪಲು ವಿಳಂಭವಾಗಿತ್ತು ಮತ್ತು ವಿವಾಹ ಮಹೂರ್ತ ತಪ್ಪಿ ಹೋಗಿತ್ತು.   ಮದುವೆ ಮಹೂರ್ತ ಇಲ್ಲದ ಅವೇಳೆಯಲ್ಲಿ ಮದುವೆ ಆಗಬಾರದು ಮತ್ತು ಪುರೋಹಿತ್ಯ ವಹಿಸಿದರೆ ತಮ್ಮದೂ ತಪ್ಪು ಎಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಪ್ರದಾನ ಅರ್ಚಕರಾಗಿದ್ದ ಸಂತರ ಸಮಾವೇಶಗಳ ಸಂಚಾಲಕರಾಗಿದ್ದ ವಿಶ್ವ ಹಿಂದೂ ಪರಿಷತ್ ನ ಪ್ರಮುಖರಾಗಿದ್ದ ನರಸಿಂಹಮೂರ್ತಿ ಅಯ್ಯಂಗಾರರು ತಿಳಿಸಿದಾಗ ನನಗೆ ತಲೆಯ ಮೇಲೆ ಬಾಂಬ್ ಬಿದ್ದ ಹಾಗಾಯಿತು.   ನಂತರ ಅವರಿಗೆ ನನ್ನ ಪ್ರೇಮ ವಿವಾಹ ಮತ್ತು ಅಂತರ್ಜಾತಿ ವಿವಾಹ ಇದಕ್ಕೆ ಎರೆಡೂ ಕುಟುಂಬ ಒಪ್ಪ...