ನನ್ನ ಕೃಷಿ ಇಲಾಖಾ ಬ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ 7 ಕೃಷಿ ಅಧಿಕಾರಿಗಳು ಜೈಲಿಗೆ ಕಳಿಸಲು ಮುಖ್ಯ ಕಾರಣರಾದ ಆರ್.ಟಿ.ವಿಠಲ ಮೂತಿ೯ .
#ನಾಡಿನ_ಖ್ಯಾತ_ರಾಜಕೀಯ_ಅಂಕಣ_ಬರಹಗಾರ_ಪತ್ರಕತ೯_ನಮ್ಮ_ಸಾಗರ_ತಾಲ್ಲೂಕಿನ_ಕೀತಿ೯_ಪತ್ರಿಕೋದ್ಯಮದಲ್ಲಿ #ರಾಜ್ಯಮಟ್ಟದಲ್ಲಿ_ಪಸರಿಸಿದ_ಆರ್_ಟಿ_ವಿಠಲಮೂತಿ೯ _ಕಳೆದ_ವರ್ಷ_ಅವರ_ಮುಖಪುಟದಲ್ಲಿ_ಬರೆದದ್ದು_ಪುನಃ_ನೆನಪಾಗಿ #ನನ್ನ_ರಾಜಕೀಯವಾದ_ಹೋರಾಟ_ತಾಕಿ೯ಕ_ಅಂತ್ಯ_ಕಾಣಲು_ಕಾರಣರಾದ_ವಿಠಲ್_ಮೂತಿ೯_ತಾಳುಗುಪ್ಪ_ಸಲೀಂ_ಮತ್ತು #ಆಗಿನ_ಕೃಷಿ_ಸಚಿವರಾದ_ಬೈರೇಗೌಡರು_ಅಭಿನ೦ದನಾಹ೯ರು. ಇದೊಂಥರಾ ಆತ್ಮಕಥೆಯ ಹಿಂದೆ ಅದೆಷ್ಟು ಕಥೆಗಳ ಸಾಲು? ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ. ಬರಹಗಾರರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೆಟ್ ಯಾವುದು?ಮೊನ್ನೆ ಅತ್ಯಾಪ್ತರಾದ ಅರುಣ್ ಪ್ರಸಾದ್ ಅವರು ಒಂದು ವಿಡಿಯೋ ಕಳಿಸಿದ್ದರು. ನಮ್ಮೂರು ಸಾಗರ ತಾಲ್ಲೂಕಿನ ಆನಂದಪುರದ ಅರುಣ್ ಪ್ರಸಾದ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು.ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಸೆಣಸಿದವರು.ಯುವಕನಾಗಿದ್ದ ದಿನಗಳಲ್ಲಿ ನನ್ನ ಅಚ್ಚರಿಗೆ,ವಿಸ್ಮಯಕ್ಕೆ,ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಪಹಪಿಗೆ ಕಾರಣರಾದವರಲ್ಲಿ ಅರುಣ್ ಪ್ರಸಾದ್ ಕೂಡಾ ಮುಖ್ಯರಾದವರು. ಈಗ ಅನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಅರುಣ್ ಪ್ರಸಾದ್ ಸದಾ ಕಾಲ ಚ...