Skip to main content

Posts

Showing posts with the label MY FAVORITE KANNADA DAILY SINCE 1971 PRAJAVANI

# ನನ್ನ ಬಾಲ್ಯದಿಂದ ಪ್ರಾರಂಭವಾಗಿ ಇವತ್ತು ಮುಂದುವರಿದ ದಿನಪತ್ರಿಕೆ ಪ್ರಜಾವಾಣಿ#

    #ಜನಮನದ ಜನಪ್ರಿಯ ಕನ್ನಡ ದಿನಪತ್ರಿಕೆ ಪ್ರಜಾವಾಣಿ ಮೊದಲಿನ ಜನಪ್ರಿಯತೆ ಮತ್ತು ತನ್ನ ಪತ್ರಿಕೆಯ ಹಿಂದಿನ ಪತ್ರಿಕಾ ನೀತಿಯ ನಿಷ್ಟುರತೆ ಉಳಿಸಿಕೊಳ್ಳುವ ಕಷ್ಟ ಕಾಲದ ಕ್ಷಣಗಣನೆಯಲ್ಲಿ.#        ನಮ್ಮ ಊರಿಗೆ 1961ರಿಂದ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಅದರ ವಿತರಕರಾಗಿದ್ದವರು ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು ಅವರು ಯುದ್ಧದಲ್ಲಿ ಭಾಗವಹಿಸಿದವರು ಒಂದು ಕಾಲು ಗುಂಡೇಟಿನಿಂದ  ಕುಂಟುತ್ತಾ ನಡೆಯುತ್ತಾ ಪತ್ರಿಕೆ ವಿತರಣೆ ಬರಿಗಾಲಿನಲ್ಲಿ ಮಾಡುತ್ತಿದ್ದರು ಅಯ್oಗಾರ್ ಬ್ರಾಹಮಣರಾದ ಅವರಿಗೆ ಸಿಟ್ಟು ಜಾಸ್ತಿ ಆನಂದಪುರಕ್ಕೆ 25 ಪತ್ರಿಕೆ ಬರುತ್ತಿತ್ತು, ನಮ್ಮ ಮನೆ ಇರುವ ಯಡೇಹಳ್ಳಿಗೆ ಆನಂದಪುರದಿಂದ ಒಂದು ಕಿ.ಮೀ. ನಡೆದು ಬರುತ್ತಿದ್ದರು ಅದು ಕೇವಲ 2 ಪತ್ರಿಕೆ ವಿತರಿಸಲು ಒಂದು ನಮ್ಮ ಮನೆಗೆ ಇನ್ನೊಂದು SRS ಎಂಬ ಅಕ್ಕಿ ಗಿರಣಿಗೆ, ನಮಗೆ ಒಂದನೆ ತರಗತಿಯಿಂದಲೇ ಬೆಳಿಗ್ಗೆ ಪ್ರಜಾವಾಣಿ ಓದುವ ಅಭ್ಯಾಸ ಮಾಡಿದ್ದರು ನಮ್ಮ ತಂದೆ, ಅದರಲ್ಲಿ ಪ್ಯಾಂಟಮ್ ಮೊದ್ದು ಮಾಣಿ ನಮಗೆ ಅಪ್ಯಾಯವಾಗಿತ್ತು.      ಇನ್ನು  ವಾರಪತ್ರಿಕೆ ಆಗ ಪ್ರಜಾಮತ ಬರುತ್ತಿತ್ತು ಆದರೆ ಅದರಲ್ಲಿ ಗುಪ್ತ ಸಮಾಲೋಚನೆ ಅಂತ ಒಂದು ಪುಟಇದ್ದಿದ್ದರಿ೦ದ ಮಕ್ಕಳಿಗೆ ಓದಲು ಕೊಡುತ್ತಿರಲಿಲ್ಲ .       ಪ್ರಖ್ಯಾತ ಕಾಟೂ೯ನಿಸ್ಟ ಪಂಜು ಗಂಗೂಲಿಯ ವಯವರ ಪೋಸ್ಟನಿಂದ ಇದೆಲ್ಲ ನೆನಪಾಗಿ ಬರ...