Skip to main content

Posts

Showing posts with the label CHAMPAKA SARASSU old as 395 years

ಚಂಪಕ ಸರಸ್ಸು ವಿನ 400ನೇ ವಷಾ೯ಚರಣೆ 2025ರಲ್ಲಿ ನಡೆಸ ಬಹುದು, ಚಂಪಕಾಳ ನೆನಪಿಗಾಗಿ ಈ ಚಂಪಕ ಸರಸ್ಸು ನಿಮಿ೯ಸಿ 395 ವರ್ಷ ಆಯಿತು, ಹರೀಶ್ ನವಾತೆ ಎಂಬ ಈ ತಜ್ಞರ ಪ್ರೇರಣೆಯಿಂದ ಸ್ವಚ್ಚತೆ ಮತ್ತು ಈಜು ತರಬೇತಿ ನಿರಂತರವಾಗಿ ನಡೆದಿದೆ.

#ಹರೀಶ್_ನವಾತೆ_ಈಜು_ತರಬೇತಿದಾರರಿಂದ_ಚಂಪಕ_ಸರಸ್ಸುವಿಗೆ_ಪುನರ್_ಹೊಳಪು_ಬಂದಿತು.       ಇವರು ಸಾಗರದ ಜೀವ ವಿಮಾದಲ್ಲಿ ಕತ೯ವ್ಯ ನಿವ೯ಹಿಸುತ್ತಿದ್ದರು ಇವರ ಒಂದು ಹವ್ಯಾಸ ಅವರು ಹೋಗುವ ಸ್ಥಳದಲ್ಲಿ ಲಭ್ಯವಿರುವ ಕೊಳ, ಕೆರೆ ಕಟ್ಟಿ ಯಾವುದೇ ಇರಲಿ ಅದನ್ನು ಸ್ಥಳಿಯರಿಂದ ಶುಚಿಗೊಳಿಸಿ ಅವರಿಗೆಲ್ಲ ಸುಲಭವಾಗಿ #ಈಜು ಕಲಿಸುವುದು.    ಕೆಲ ವರ್ಷದ ಹಿಂದೆ ಆನಂದಪುರದ ಚಂಪಕ ಸರಸ್ಸು ಸ್ಥಳಿಯರನ್ನ ಸಂಘಟಿಸಿ ಗುರುತು ಹಿಡಿಯಲಾರದಂತೆ ಕಾಡು ಗಿಡ ಬಳ್ಳಿ ಬೆಳೆದಿದ್ದನ್ನ ಲಕ ಲಕ ಎಂದು ಹೊಳೆಯುವಂತೆ ಶುಚಿಗೊಳಿಸಿ ಸರಳ ಜೀವ ರಕ್ಷಕ ವಸ್ತುಗಳನ್ನ ಸಂಗ್ರಹಿಸಿ ಈಜು ತರಬೇತಿ ಶುರು ಮಾಡಿದರು ಆ ವಷ೯ ನೂರಾರು ಜನ ಯುವಕ/ಯುವತಿಯರು / ಮಕ್ಕಳು ಮತ್ತು ವೃದ್ದರೂ ಸೇರಿ ಈಜು ಕಲಿತರು ಈ ಸಂದಭ೯ದಲ್ಲೇ ನನ್ನ ಮಗನೂ ಈಜು ಕಲಿತ.    ಇವರು ಪ್ರಾರಂಬಿಸಿದ ಈಜು ತರಬೇತಿ ಇವತ್ತಿಗೂ ಮುಂದುವರಿದಿದೆ ಮತ್ತು #ಚಂಪಕ_ಸರಸ್ಸು ಸ್ವಚ್ಚತೆ ಕೂಡ ಇದಕ್ಕಾಗಿ ಆನಂದಪುರದ #ಈಜು_ಮಿತ್ರರ_ಬಳಗ ಮತ್ತು #ಇತಿಹಾಸ_ಪರ೦ಪರೆ_ಉಳಿಸಿ_ಅಭಿಯಾನ_ಸಮಿತಿ ಕಟಿಬದ್ದವಾಗಿದೆ.    ಹಾಗಾಗಿಯೆ ನನ್ನ ಕಾದಂಬರಿ #ಬೆಸ್ತರರಾಣಿ_ಚಂಪಕ ಇವರಿಗೆ ಅಪಿ೯ಸಲಾಗಿದೆ.      ಕೆಳದಿ ಸಾಮ್ರಾಜ್ಯದ ದುರಂತ ರಾಣಿ ಚಂಪಕಳ ಸ್ಮಾರಕ 2025 ಕ್ಕೆ ನಿಮಾ೯ಣಗೊಂಡು 400 ವರ್ಷ ಆಗಲಿದೆ ಇವತ್ತಿಗೆ 395 ವರ್ಷ...