Skip to main content

Posts

Showing posts with the label My experience of second class trai journey from Bangalore to Dehli.

Blog number 1073. ನಿಜ ಭಾರತ ದರ್ಶನ ಭಾರತೀಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ, ನಾನು ಮತ್ತು ನನ್ನ ಗೆಳೆಯರು ಬೆಂಗಳೂರಿಂದ ದೆಹಲಿಗೆ ಇಂತಹ ಪ್ರಯಾಣ ಮಾಡಿದ ಅನುಭವ.

#ಎರಡನೆ_ದರ್ಜೆ_ರೈಲು_ಪ್ರಯಾಣ. #ನಿಜ_ಭಾರತ_ದೇಶದ_ದರ್ಶನ #ಕಾಶ್ಮೀರದಿಂದ_ಕನ್ಯಾಕುಮಾರಿ_3573_ಕಿಮಿ_585_ರೂಪಾಯಿ. #ಗಾಂಧೀಜಿ_ಭಾರತ_ದರ್ಶನ_ಮೂರನೆ_ದರ್ಜೆ_ರೈಲು_ಪ್ರಯಾಣದಲ್ಲಿ. #ನನ್ನ_ಎರೆಡು_ಬಾರಿಯ_ದೆಹಲಿ_ಪ್ರಯಾಣ_ಎರಡನೆ_ದರ್ಜೆ_ರೈಲು_ಬೋಗಿಯ_ಪ್ರಯಾಣ.   ಒಮ್ಮೆ ದೆಹಲಿಗೆ ಹೋಗಿ ಬರುವ ಕಾಯ೯ಕ್ರಮ ಇತ್ತು, ಕೆಲವರು ಪ್ರಥಮ ದರ್ಜೆ, ಸ್ಲೀಪಿಂಗ್ ಕೋಚ್ ಇತ್ಯಾದಿ ಮುಂಗಡ ಕಾಯ್ದಿರಿಸಿದ್ದರು ನಾನು ಮತ್ತು ಅನೇಕ ಗೆಳೆಯರು ಸೆಕೆಂಡ್ ಕ್ಲಾಸ್ ನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ತೀರ್ಮಾನ ಮಾಡಿದೆವು.   ಇದಕ್ಕೆ ಕಾರಣ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೇಸ್ ಅಧ್ಯಕ್ಷರಾಗಬೇಕೆಂಬ ತೀರ್ಮಾನದ ನಂತರದಲ್ಲಿ ಭಾರತ ದರ್ಶನ ಮಾಡಬೇಕೆಂಬುದಾಗಿತ್ತು.   ಆಗ ಬ್ರಿಟೀಶ್ ಆಡಳಿತದಲ್ಲಿ ಥರ್ಡ್ ಕ್ಲಾಸ್ ಎಂಬ ದರ್ಜೆ ಬೋಗಿಗಳಿತ್ತು ಅದರಲ್ಲಿಯೇ ಅವರು ಪ್ರಯಾಣಿಸುತ್ತಾರೆ ನಿಜವಾದ ಭಾರತ ದರ್ಶನ ಗೊತ್ತಾಗಬೇಕಾದರೆ ಈ ಮೂರನೆ ದರ್ಜೆಯಲ್ಲಿ ಪ್ರಯಾಣಿಸಬೇಕು ಎಂದು ಬರೆದಿದ್ದಾರೆ.   ನಾವು ಎರಡನೆ ದರ್ಜೆ ಸಾಮಾನ್ಯ ಬೋಗಿಯಲ್ಲಿ (ಸ್ವಾತಂತ್ರ ನಂತರ ಮೂರನೆ ದರ್ಜೆ ಎಂಬ ಹೆಸರು ರದ್ದಾಗಿದೆ) ಪ್ರಯಾಣಿಸುವುದು ಕೇಳಿ ಅನುಭವಿ ಹಿರಿಯರು ಬುದ್ದಿ ಹೇಳಿದರು ಸುಮಾರು 40 ಗಂಟೆಯ ಎರಡು ರಾತ್ರಿಯ ದೆಹಲಿ ಪ್ರಯಾಣ ಈ ಬೋಗಿಯಲ್ಲಿ ಕಷ್ಟದಾಯಕ ಅಂದರೂ ನನ್ನ ತೀರ್ಮಾನ ಅಚಲವಾಗಿತ್ತು.   ಮಹಾರಾಷ್ಟ್ರ ದ...