Skip to main content

Posts

Showing posts with the label Jinaikya jungalvale baba Jain muniji Rashta santha 108 Sri chinmaya Sagar Maharaj stayed in our Krishna sarasa conversion hall

Blog number 1789. ಜಂಗಲ್ ವಾಲೇ ಬಾಬಾ ಎಂದೇ ಉತ್ತರ ಭಾರತೀಯರು ಪ್ರೀತಿಯಿಂದ ಕರೆಯುತ್ತಿದ್ದ ಜಿನೈಕ್ಯ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರಜಿ ಮಹಾರಾಜರ 4ನೇ ಸಮಾದಿ ದಿವಸ್ 18 ಅಕ್ಟೋಬರ್ 2023. ಇವರು ನಮ್ಮ ಶ್ರೀಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ತಂಗಿದ್ದರು ಮತ್ತು ಇವರ ಸಂದರ್ಶನ ಮಾಡಿದ್ದೆ ಎನ್ನುವ ನೆನಪೇ ವಿಶೇಷ ಇದು ನನ್ನ ಬಾಗ್ಯ.

#ಜ೦ಗಲ್_ವಾಲೆ_ಬಾಬಾ_ಜೈನ_ಮುನಿ_ರಾಷ್ಟ್ರ_ಸಂತ_108_ಶ್ರೀಚಿನ್ಮಯಸಾಗರರ_ನಾಲ್ಕನೆ_ಸಮಾದಿ_ದಿವಸ. #ಯಮ_ಸಲ್ಲೇಖನ_ವೃತ_ಮಾಡಿ_ದೇಹ_ತ್ಯಾಗ_ಮಾಡಿದ_ಕಠೋರ_ಸಾದಕರು. #ಬ್ರಹ್ಮಚರ್ಯ_ಪಾಲಿಸುವ_ವಾಹನ_ಬಳಸದೆ_ಬರಿಕಾಲಿನಲ್ಲಿ_ಪರಿಕ್ರಮಿಸುವ #ಆಹಾರ_ವಸ್ತ್ರವನ್ನು_ತ್ಯಜಿಸುವ_ಜೈನ_ಮುನಿಗಳು #ಇಂತಹ_ಸಂತರು_ನಮ್ಮಲ್ಲಿ_ತಂಗಿದ್ದರು_ಅವರಿ೦ದ_ಆಶ್ರೀವಾದ_ಪಡೆದದ್ದು #ಅವರ_ಸಂದರ್ಶನ_ಮಾಡಿದ್ದು_ನನ್ನ_ಪೂರ್ವ_ಜನ್ಮದ_ಪುಣ್ಯ. #ಅಕ್ಟೋಬರ್_18_ಅವರ_ನಾಲ್ಕನೆ_ಪುಣ್ಯಸ್ಮರಣೆ.        ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ #ರಾಷ್ಟ್ರ_ಸಂತ_108_ಶ್ರೀ_ಚಿನ್ಮಯ_ಸಾಗರ_ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ನಿಯಮ್ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ಒಂದು ತಿಂಗಳ ನಂತರ 12 ಅಕ್ಟೋಬರ್ 2019 ರಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದಿನಾಂಕ 18 ಅಕ್ಟೋಬರ್ 2019 ದೇಹ ತ್ಯಾಗ ಮಾಡಿ ಜಿನೈಕರಾದರು.   2022 ರ ಅಕ್ಟೋಬರ್ 18ಕ್ಕೆ ಅವರು ಜಿನೈಕ್ಯರಾಗಿ 4ನೇ ಸಮಾದಿ ದಿವಸ್ ( ಪುಣ್ಯ ತಿಥಿ) ಆಚರಿಸಲಾಗುತ್ತಿದೆ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಅವರ ಹುಟ್ಟೂರು ಜುಗೂಳ ಎಂಬ ಹಳ್ಳಿಯಲ್ಲಿ ಅವರ ಸಮಾದಿ ಇದೆ.   ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮ...