Skip to main content

Posts

Showing posts with the label Famous Kannada Film Acter Rajkumar leaded Gokak Chalavali Program at Anandapuram 1982.

Blog number 897. ಆನಂದಪುರಂ ಇತಿಹಾಸ ಭಾಗ-75. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಇಡೀ ಕನ್ನಡ ಚಿತ್ರರಂಗದ ತಾರೆಗಳ ಯಾತ್ರೆ ಆನಂದಪುರಂ ಬಸ್ ನಿಲ್ದಾಣದಲ್ಲಿ ಕನ್ನಡ ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂಬ ಗೋಕಾಕ್ ವರದಿ ಜಾರಿಗಾಗಿ ಸಭೆ ನಡೆದಿತ್ತು.

#ಆನಂದಪುರಂ_ಇತಿಹಾಸ_75. #ಗೋಕಾಕ್_ಚಳವಳಿಯಲ್ಲಿ_ಆನಂದಪುರ೦ಗೆ_ರಾಜಕುಮಾರ್_ಸಿನಿತಂಡ  #ಆ_ದಿನ_3_ಜುಲೈ_1982. #ವಿ_ಕೃ_ಗೋಕಾಕ್_ಸಾಗರದ_ಲಾಲ್_ಬಹದ್ದೂರ್_ಕಾಲೇಜಿನಲ್ಲಿ_ಅಲ್ಪಕಾಲ_ಬೋದನೆ_ಮಾಡಿದ್ದರು. #ಆನಂದಪುರಂನ_ಈ_ಕಾಯ೯ಕ್ರಮಕ್ಕೆ_ಆಗಿನ_ರಾಜಕುಮಾರ್_ಆಭಿಮಾನಿ_ಸಂಘಕ್ಕೆ_ಆದ_ವೆಚ್ಚ_43_ರೂಪಾಯಿ #ರಾಜಕುಮಾರರನ್ನು_ನೋಡಲು_ಸೇರಿದ_ಜನ_ಸಹಸ್ರಾರು  #ಶಿವಮೊಗ್ಗ_ಜಿಲ್ಲಾ_ರಾಜಕುಮಾರ್_ಅಭಿಮಾನಿ_ಸಂಘದ_ಆಗಿನ_ಗೌರವಾಧ್ಯಕ್ಷರು_ನೆಲ್ಲಿಲಾಡ್ಜ್_ವಿಠಲಮೂರ್ತಿ #ಜಿಲ್ಲಾಧ್ಯಕ್ಷ_ಶ್ರೀನಿದಿ_ಟೆಕ್ಸಟೈಲ್ಸ್_ಶ್ರೀಧರಮೂರ್ತಿ #ಸಾಗರ_ತಾಲ್ಲೂಕ್_ಅಧ್ಯಕ್ಷ_ಸಾಗರದ_SRS_ಮಿಲ್_ಮಹೇಶ್_ಮೂರ್ತಿ.    ಆನ೦ದಪುರಂ ಇತಿಹಾಸ ಪುಸ್ತಕದಲ್ಲಿ ಕನ್ನಡದ ಪ್ರಖ್ಯಾತ ಚಲನಚಿತ್ರ ನಟ ಡಾ.ರಾಜ್ ಕುಮಾರ್ ಎರೆಡು ಬಾರಿ ದಾಖಲಾಗುತ್ತಾರೆ ಒಂದು ಗೋಕಾಕ್ ಚಳವಳಿಯ ಭಾಗವಾಗಿ ಇನ್ನೊಂದು ಅವರ ಆಕಸ್ಮಿಕ ಚಲನಚಿತ್ರದ ಚಿತ್ರಿಕರಣದಲ್ಲಿ.   1980 ರ ದಶಕದಲ್ಲಿ ಡಾ.ರಾಜ್ ಕುಮಾರ್ ಕರ್ನಾಟಕದ ಆರಾಧ್ಯ ದೈವವೇ ಈ ಸಂದರ್ಭದಲ್ಲಿ ಅಂದರೆ 5- ಜುಲೈ -1980 ರಲ್ಲಿ ವಿ.ಕೃ.ಗೋಕಾಕರ ಅಧ್ಯಕ್ಷತೆಯಲ್ಲಿ ಕನಾ೯ಟಕ ಸಕಾ೯ರದ ಮುಖ್ಯಮಂತ್ರಿ ಗುಂಡೂರಾಯರು ಶಾಲಾ ಶಿಕ್ಷಣದಲ್ಲಿ ಬಾಷಾ ನೀತಿ ಮರು ಯೋಜನೆಗೆ ಸಮಿತಿ ರಚಿಸುತ್ತಾರೆ.   ತ್ರಿಬಾಷಾ ಸೂತ್ರದಡಿ ಕರ್ನಾಟಕ ರಾಜ್ಯದಲ್ಲಿನ ಶಾಲೆಯಲ್ಲಿ ಕನ್ನಡ ಮುಖ್ಯ ಬಾಷೆಯಾಗಿ ...