#ಬಿದನೂರು_ನಗರದ_ಸುದೀಂದ್ರ_ಭಂಡಾರಕರ್_ಬರೆದ_ಕಾದಂಬರಿ #ಸಶೇಷ #ಕೆಳದಿ_ಇತಿಹಾಸದ_ಆಸಕ್ತರು_ಒದಲೇ_ಬೇಕು #ಇದರಲ್ಲಿನ_ದಳವಾಯಿ_ಅಕ್ಕಮ್ಮ_ಮಾಸ್ತಿಯಾದ_ಕಥೆ #ಆಗಿನ_ಕಟ್ಟೆ_ಪಂಚಾಯ್ತಿಯ_ಅಮಾನುಷ_ತೀರ್ಪು #ಲಿಂಗಾಯಿತ_ಅಕ್ಕಮ್ಮ_ದೀವರ_ಮಂಡಾನಿ_ಯುವಕನ_ವಿವಾಹ_ಮಾಡಿಸುತ್ತಾರೆ #ಮರುಕ್ಷಣದ_ತೀರ್ಪು_ದೀವರ_ಮಂಡಾನಿ_ಯುವಕನಿಗೆ_ನೇಣು #ಮರಣದಂಡನೆ_ಜಾರಿ_ಮರುಕ್ಷಣದ_ತೀರ್ಪು_ಅಕ್ಕಮ್ಮನ_ಸಹಗಮನ. ಸಶೇಷ ಕಾದಂಬರಿಯ ಈ ಪುಟಗಳು ಒಮ್ಮೆ ಓದಿ.... ಶೇಷ...ಹಲವೊಮ್ಮೆ ಇತಿಹಾಸದ ಸಂಗತಿಗಳು , ಧಾರ್ಮಿಕ ನಡಾವಳಿಗೆ , ಇಂದಿನ ಆರೂಢಪ್ರಶ್ನೆ ಮುಂತಾದಕ್ಕೆ ಒಳಗಾಗಿ ಬದಲಾಗಿ ಹೋಗಿದೆ .ಪ್ರಶ್ನೆಗಳ ಉತ್ತರ ಸರಿಯಾಗಿ ಬಂದರೂ ಅದನ್ನು ಅರ್ಥೈಸುವ ಶಕ್ತಿ ಸೋತಿದೆ . ಇದು ನೋಡು ಅಕ್ಕಮ್ಮನಗುಡಿ .ಪಕ್ಕದಲ್ಲೇ ಅಂದಿನ ಸಾಕ್ಷಿ ಮರಗಳು .ಕೂಗಳತೆಯ ದೂರದ ಶಿವಲಿಂಗನ ಗುಡಿ .ಅಕ್ಕಮ್ಮನ ಗುಡಿಯ ಗಡಿಯಲ್ಲಿ ಮಾಸ್ತಿಕಲ್ಲು . ಅಕ್ಕಮ್ಮ .... ಹಿಂದೆ ಅಳಿದುಹೋದ ದಳವಾಯಿ ಲಿಂಗಪ್ಪನ ವಂಶದವಳು . ಇದೇ ಕರಿಂಗೋಳಿ ಹೊಸವೆ ಮಾರ್ಗದ ದೇವರಸಲ್ಲಿಕೆಗುಡ್ಡ , ಸಿಡಿಕುಣಿಭೂತದಗುಡಿ , ಕುಂಟಿಗೆ ...ವಾರಂಬಳ್ಳಿ ಹೋಗುವ ಮಾರ್ಗದ ವರಕೋಡು - ಕೋಟೆಕಾನು ಇದೆ .ಆಚೆ ಕೋಟೆಕಾನು ಹಳ್ಳ . ಅದಾಗ ಟಿಪ್ಪುವಿನ ಅಂತ್ಯವಾಗಿದೆ .ಮೈಸೂರಿನವರ ಆಡಳಿತ ಇದೆ . ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಠರೋ ಆ ಜಮೀನ್ದಾರನದೇ ...