Skip to main content

Posts

Showing posts with the label Anandapuram pound was converted old travellers shelter in the name of Divan Sir Mirza Ismail

ಭಾಗ-45, ಆನಂದಪುರಂ ಇತಿಹಾಸ, ಬೆಳೆ ನಾಶ ಮಾಡುವ ಕಳ್ಳ ಎತ್ತು, ಜಾನುವಾರಿಗೆ ಬಂದಿಖಾನೆ ಆಗಿದ್ದ ದೊಡ್ಡಿ ಆನಂದಪುರಂನಲ್ಲಿ ನೂರಾರು ವರ್ಷ ಕಾರ್ಯನಿರ್ವಹಿಸಿತ್ತು, ಈ ದೊಡ್ಡಿ ನಿರ್ವಹಣೆಗೆ ದಿ ಕ್ಯಾಟಲ್ ಟ್ರೆಸ್ ಪಾಸ್ ಆಕ್ಟ್ 1871 ಜಾರಿ ಇತ್ತು, ಆನಂದಪುರಂನಲ್ಲಿದ್ದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಪ್ರಯಾಣಿಕರ ತಂಗುದಾಣವನ್ನೆ ದೊಡ್ಡಿ (ಕೊಂಡವಾಡೆ ) ಆಗಿ ಪರಿವರ್ತಿಸಲಾಗಿತ್ತು.

#ಭಾಗ_45. #ಆನಂದಪುರಂ_ಇತಿಹಾಸ. #ಆನಂದಪುರಂನ_ಕಳ್ಳ_ಎತ್ತು_ಜಾನುವಾರು_ಬಂದಿಖಾನೆ_ದೊಡ್ಡಿ #ಕೊಂಡವಾಡಿ_ಹೆಸರಿನ_ದೊಡ್ಡಿಗೆ_1871ರಿಂದ_ದಿ_ಕ್ಯಾಟಲ್_ಟ್ರೆಸ್_ಪಾಸ್_ಆಕ್ಟ್_ಜಾರಿ_ಇದೆ. #ಇದಕ್ಕೆ_ಪ್ರತ್ಯೇಕ_ಲೆಡ್ಜರ್_ದಂಡದ_ಹಣ_ಟ್ರೆಜರಿಗೆ_ಜಮ_ಮಾಡ_ಬೇಕಿತ್ತು, #ದಿವಾನ್_ಸರ್_ಮಿಜಾ೯_ಇಸ್ಮಾಯಿಲ್_ಹೆಸರಿನ_ತಂಗುದಾಣವೇ_ಅನಂದಪುರಂ_ದೊಡ್ಡಿ   ಕಳ್ಳ ಎತ್ತು ಮತ್ತು ಜಾನುವಾರುಗಳು ರೈತರ ಪಸಲು ತಿಂದು ರೈತರಿಗೆ ನಷ್ಟ ಮಾಡುವುದನ್ನು ತಡೆಯಲಿಕ್ಕಾಗಿ ಬ್ರಿಟೀಷ್ ಸರ್ಕಾರ 1871 ರಲ್ಲಿ ತಂದ ದಿ ಕ್ಯಾಟಲ್ ಟ್ರಿಸ್ ಪಾಸ್ ಆಕ್ಟ್ (The Cattle Trespass Act) ಕನ್ನಡದಲ್ಲಿ ಕೊಂಡವಾಡಿ / ದೊಡ್ಡಿ ಅಥವ ಇಂಗ್ಲೀಷ್ ನಲ್ಲಿ ಹೇಳುವ pound (ಪೌಂಡ್) ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಪರ್ದಿಯಲ್ಲಿ ಅನೇಕ ಕಾನೂನು ಜಾರಿಗೆ ತಂದಿದ್ದರು.   ಇಂತಹ ಕಾನೂನು ಭಾರತ ಮಾತ್ರವಲ್ಲ ಯುರೋಪ್, ಅಮೇರಿಕಾ ಮತ್ತು ಆಫ್ರಿಕಾದಲ್ಲೂ ಇತ್ತು.   ಈ ಕಾನೂನು ಕಾಲಕಾಲಕ್ಕೆ ತಿದ್ದುಪಡಿ ಆಗುತ್ತಿತ್ತು 1966ರಲ್ಲಿ ಕರ್ನಾಟಕ ಕ್ಯಾಟಲ್ ಟ್ರೆಸ್ ಪಾಸ್ ಆಕ್ಟ್ ತಿದ್ದುಪಡಿಯೊಂದಿಗೆ ಜಾರಿ ಇತ್ತು.    ದೊಡ್ಡಿ ನಿರ್ವಹಿಸುವ (pound Keeper) ಪ್ರಾಣಿ ಯಾವುದು, ತಂದವರ ಹೆಸರು, ವಿಳಾಸ, ಪ್ರಾಣಿಯ ಮಾಲಿಕರು ಗೊತ್ತಿದ್ದರೆ ಅವರ ವಿಳಾಸ ನಮೂದಿಸಿಕೊಂಡು ಸದರಿ ಪ್ರಾಣಿಯ ಹುಲ್ಲು ನೀರಿನ ಸರಬರಾಜು ಬಾಬ್ತು ಹಣ ಪಡೆದು ರಶೀದಿ ನೀಡಬೇಕು. ...