Skip to main content

Posts

Showing posts with the label Farmers leader Professor Nanjundaswamy anticipated uncultivation of rain harvesting paddy fields

Blog number 1605. ಮಲೆನಾಡಿನ ಭತ್ತದ ಗದ್ದೆಗಳು ಬೀಳು ಬಿಡುವುದರ ಅಸಲಿ ಕಾರಣ ಏನು? ಇದನ್ನು ಪುನಶ್ಚೇತನ ಮಾಡಲು ಸಾಧ್ಯವೇ? 1999ರಲ್ಲೇ ರೈತ ನಾಯಕ ಪ್ರೋಪೆಸರ್ ನಂಜುಂಡಸ್ವಾಮಿ ಎಚ್ಚರಿಸಿದ್ದರು.

#ಕೃಷಿ_ತಜ್ಞರಾದ_ನಾಗೇಂದ್ರಸಾಗರ್_ಮಳೆಆಶ್ರಿತ_ಬೀಳು_ಜಮೀನಿನ_ಪುನಶ್ಚೇತನದ_ಪೋಸ್ಟ್ #ಇಂತಹ_ಪರಿಸ್ಥಿತಿ_ಬಗ್ಗೆ_1999ರಲ್ಲಿ_ಪ್ರೋಪೆಪರ್_ನಂಜು೦ಡಸ್ವಾಮಿ_ಉಹಿಸಿದ್ದರು #ಮಲೆನಾಡಿನ_ಭತ್ತದ_ಗದ್ದೆ_ಪುನಶ್ಚೇತನ_ಸಾಧ್ಯವಾ? #ವಿಶ್ವಸಂಸ್ಥೆ_2017ರಿಂದ_ಆಹಾರ_ಬೆಳೆಯುವ_ಕೋಟ್ಯಾದೀಶ_ಆಗುತ್ತಾನೆ_ಎಂಬ_ಭವಿಷ್ಯ_ನಿಜವಾದೀತಾ?   ಕಷ್ಟಸಾಧ್ಯ... ಭತ್ತದ ಕೃಷಿ ವಿಧಾನ ಹೆಚ್ಚು ಮಾನವ ಶಕ್ತಿ ಕೇಳುತ್ತದೆ, ರೈತ ಗೊಬ್ಬರಕ್ಕೆ ಪರಾವಲಂಬಿ, ರಾಸಾಯನಿಕ ಗೊಬ್ಬರದ ಬೆಲೆ ಜಾಸ್ತಿ, ಭತ್ತ ಬೇಸಾಯಕ್ಕೆ ಹೆಚ್ಚು ನೀರು ಬಳಕೆ ಇಷ್ಟೆಲ್ಲ ಭರಿಸಿದರೂ ಇಳುವರಿ ಮತ್ತು ಗುಣಮಟ್ಟ ಗ್ಯಾರಂಟಿ ಇಲ್ಲ, ಕೈಗೆ ಸಿಕ್ಕ ಪಸಲು ಮಾರಿದರೆ ಎಕರೆವಾರು ನಷ್ಟ ಹೊರತು ಲಾಭವಿಲ್ಲ.    ಇದನ್ನು 1999ರಲ್ಲೇ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಹೇಳಿದ್ದರು " ಈಗ ನಮ್ಮ ರೈತನ ಕುಟುಂಬ ತಾನೇ ಸ್ವತಃ ಹೊಲದಲ್ಲಿ ಕೃಷಿ ಮಾಡುತ್ತಾನೆ ಅವನದ್ದೇ ಎತ್ತು-ಗಾಡಿ - ಗೊಬ್ಬರ ಲಾಭ ನಷ್ಟ ಲೆಕ್ಕ ಮಾಡದೇ ಭೂಮಿ ಹಾಳು ಬಿಡಬಾರದೆಂಬ ವಂಶಪಾರಂಪರ್ಯವಾಗಿ ನಡೆದು ಬಂದ ನಂಬಿಕೆ ..... ಆದರೆ ಮುಂದಿನ ದಿನಗಳಲ್ಲಿ ರೈತನ ಮಗ ಕಂಪ್ಯೂಟರ್ ಬಳಸುತ್ತಾನೆ, ಪ್ರತಿಯೊಂದನ್ನು ಲೆಖ್ಖಾಚಾರ ಇಡುತ್ತಾನೆ ಈಗಲೆ ಒಂದು ಎಕರೆಗೆ ಎರೆಡು ಸಾವಿರದ ಐನೂರು ನಷ್ಟ (1999 ರ ಅವರ ಮಾತು) ಅದ್ದರಿ೦ದ ಭತ್ತದ ಕೃಷಿ ಮಾಡುವುದು ಬಿಡುತ್ತಾನೆ ....   https://arunprasadhombuja.b...