Blog number 1114. ಕಾಗೋಡು ತಿಮ್ಮಪ್ಪರ ಜೊತೆ ರಾಜಕೀಯ ಬಿನ್ನಾಭಿಪ್ರಾಯಗಳಿಂದ ಅವರ ವಿರೋದಿಯಾಗಿ 1999 ರ ವಿದಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ ಆದರೆ ನಾನು ಕಾಗೋಡು ತಿಮ್ಮಪ್ಪರನ್ನು ಗೌರವಿಸಲು ಪ್ರೀತಿಸಲು ಅನೇಕ ಕಾರಣಗಳಿದೆ.
ಕಾಗೋಡು ತಿಮ್ಮಪ್ಪರ ರಾಜಕೀಯ ಕಡು ವಿರೋದಿಯಾಗಿ ಅವರನ್ನ ನಾನೇಕೆ ಬೆಂಬಲಿಸುತ್ತೇನೆ. ಕಾಗೋಡು ಲೋಹಿಯ ಚಿಂತನೆ, ಶಾಂತವೇರಿ ಮೂಸೆಯಲ್ಲಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪಾರನ್ನ ವಿರೋದಿಸುತ್ತಾ ಸಮಾಜವಾದಿ, ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಿದವರು, ಅವರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೆತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ 22 ಕೇಸು, ಗೂಂಡಾ ಕಾಯ್ದೆಯಲ್ಲಿ ಅವರು ನನ್ನನ್ನ ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ. ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಬೇರೆ ರಾಜಕಾರಣಿಗಿಂತ ಬೇರೆ, ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಬೇರೆಯವರಿಗೆ ಅಥ೯ವಾಗುವುದಿಲ್ಲ, ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ ಆದರೆ ರೈತನನ್ನ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ. ಬಂಗಾರಪ್ಪ ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಹಕ್ಕು ಪತ್ರ ನನ್ನ ಊರಲ್ಲಿ ನೀಡಲು ಅವರು ನೀಡಿದ ಪ್ರೊತ್ಸಾಹ ಮರೆಯಲಾರೆ, ಪರಿಶಿಷ್ಟ ಜಾತಿ ಅಲೆಮಾರಿ ಕೊರಮರು, ಕುಂಬಾರರು ಸೇರಿ ಎಲ್ಲಾ ಜಾತಿಯವರಿಗೆ ಹಕ್ಕು ಪತ್ರ ನೀಡಿದೆವು ಇದರಿಂದ ಕಾಗೋಡು ನನಗೆ ಹೊಗಳಿದ್ದರ...