Blog number 1114. ಕಾಗೋಡು ತಿಮ್ಮಪ್ಪರ ಜೊತೆ ರಾಜಕೀಯ ಬಿನ್ನಾಭಿಪ್ರಾಯಗಳಿಂದ ಅವರ ವಿರೋದಿಯಾಗಿ 1999 ರ ವಿದಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ ಆದರೆ ನಾನು ಕಾಗೋಡು ತಿಮ್ಮಪ್ಪರನ್ನು ಗೌರವಿಸಲು ಪ್ರೀತಿಸಲು ಅನೇಕ ಕಾರಣಗಳಿದೆ.
ಕಾಗೋಡು ಲೋಹಿಯ ಚಿಂತನೆ, ಶಾಂತವೇರಿ ಮೂಸೆಯಲ್ಲಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪಾರನ್ನ ವಿರೋದಿಸುತ್ತಾ ಸಮಾಜವಾದಿ, ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಿದವರು, ಅವರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೆತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ 22 ಕೇಸು, ಗೂಂಡಾ ಕಾಯ್ದೆಯಲ್ಲಿ ಅವರು ನನ್ನನ್ನ ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ.
ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಬೇರೆ ರಾಜಕಾರಣಿಗಿಂತ ಬೇರೆ, ನಿತ್ಯ ಎಲ್ಲಾ ಪತ್ರಿಕೆ ಸ್ವತಃ ಓದುತ್ತಾರೆ, ಹೊಗಳಿದರೆ ಉಬ್ಬುವುದಿಲ್ಲ, ಮಲೆನಾಡಿನ ರೈತರ ಸಮಸ್ಯೆ ಬೇರೆಯವರಿಗೆ ಅಥ೯ವಾಗುವುದಿಲ್ಲ, ಪರಿಸರ ವಿರೋದಿ ಅಲ್ಲ, ಲಂಚಕ್ಕೆ ಬೆಂಬಲ ಇಲ್ಲ ಆದರೆ ರೈತನನ್ನ ಒಕ್ಕಲೆಬ್ಬಿಸುವುದಕ್ಕೆ ಅವರ ವಿರೋದ ಯಾವತ್ತೂ ಇದೆ.
ಬಂಗಾರಪ್ಪ ಬಗರ್ ಹುಕುಂ ಜಾರಿಗೊಳಿಸಿದಾಗ ರಾಜ್ಯದ ಮೊದಲ ಹಕ್ಕು ಪತ್ರ ನನ್ನ ಊರಲ್ಲಿ ನೀಡಲು ಅವರು ನೀಡಿದ ಪ್ರೊತ್ಸಾಹ ಮರೆಯಲಾರೆ, ಪರಿಶಿಷ್ಟ ಜಾತಿ ಅಲೆಮಾರಿ ಕೊರಮರು, ಕುಂಬಾರರು ಸೇರಿ ಎಲ್ಲಾ ಜಾತಿಯವರಿಗೆ ಹಕ್ಕು ಪತ್ರ ನೀಡಿದೆವು ಇದರಿಂದ ಕಾಗೋಡು ನನಗೆ ಹೊಗಳಿದ್ದರಿಂದ ಬಗಲಿಗಳು ಪಿಟ್ಟಿ೦ಗ್ ಇಟ್ಟು ನನ್ನ ದೂರ ಮಾಡಿದರು ಇವರ ಅಣ್ಣನ ಮಗ ಅಣ್ಣಾಜಿ ಕೂಡ ಕೈ ಜೋಡಿಸಿದರು ಹಾಗಾಗಿ ನನ್ನ ಅವರ ಬದ್ಧ ದ್ವೇಷದ ರಾಜಕಾರಣ ಆಯಿತು.
ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರಂತವರು ಬೇಕು ಆದರೆ ಇವರೇ ಕೊನೆಯವರು ಅನ್ನಿಸುತ್ತೆ.
ಸಾಗರದ DFO ಆಗುವವರು ಐ.ಎಪ್.ಎಸ್.ಕೇಡರ್ ಮಾತ್ರ ಆಗಿರ ಬೇಕು ಆದರೆ ಇವರು ಗಂಗೊಳ್ಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದರು ಅವರು ದುರುಪಯೋಗ ಪಡಿಸಿಕೊಂಡರು, ಕೆಲವು ಪತ್ರಕತ೯ರು, ಕಾಗೋಡು ತಿಮ್ಮಪ್ಪರ ಆಪ್ತರೂ ಗOಗೊಳ್ಳಿಯನ್ನ ಬಹಿರಂಗ ಬೆಂಬಲಿಸಿದರು, ಕಾಗೋಡರೂ ನಂಬಿದರು ಇದರಿಂದನೂ ಕಾಗೋಡರಿಗೆ ಸೋಲಾಯಿತು, ಸ್ವಪಕ್ಷದ ತಾಲ್ಲೂಕ್ ಪಂಚಾಯತನಲ್ಲಿ ಗಂಗೋಳಿ ವಿರುದ್ಧ ಠರಾವು ಮಾಡಿದರೂ ಕಾಗೋರರನ್ನ ಅವರ ಪಕ್ಷದವರು ಹಾದಿ ತಪ್ಪಿಸಿದರು.
ಒಬ್ಬ ರಾಜಕಾರಣಿ ಪ್ರಾಮಾಣಿಕ ಆಗಿದ್ದರೂ ಹಣ, ಪ್ರಭಾವಗಳ ಶಿಷ್ಯ ವ್ಯಂದ ನಾಯಕನ ಹಾದಿ ತಪ್ಪಿಸುವ ನೈಜ ಘಟನೆಗೆ ಕಾಗೋಡು ಉಧಾಹರಣೆ ಆದರು.
ಏನೇ ಆಗಲಿ ವಯೋವೃದ್ದ ಸಮಾಜವಾದಿ ಸಿದ್ದಾಂತದ ಕಾಗೋಡು ತಿಮ್ಮಪ್ಪರನ್ನ ಗೌರವಿಸಲು ಸಾವಿರಾರು ಕಾರಣ ಇದೆ, ಮೂಡನಂಬಿಕೆ ವಿರೋದಿ, ಹೊಗಳಿಕೆ ಜನರಿಂದ ದೂರ, ಸ್ವತಃ ಕಾನೂನು ತಿಳುವಳಿಕೆ ಇವರಿಗಿದೆ.
Comments
Post a Comment