Blog number 1107. ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರೂ ಯಡೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿದ್ದ ಮುಖ್ಯಮಂತ್ರಿ ಕಾನೂನು ಸಲಹೆಗಾರ ದಿವಾಕರ್ ಸಾಗರ ವಿಧಾನಸಭಾ ಸಭಾ ಚುನಾವಣೆಯ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಆಗಿ ಮೊದಲ ಹಂತದ ಚುನಾವಣಾ ಪ್ರಚಾರ ಮುಗಿಸಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.
#ಪ್ರಖ್ಯಾತ_ಹಿರಿಯ_ಹೈಕೋರ್ಟ್_ವಕೀಲರಾದ_ದಿವಾಕರ್_ಇವತ್ತು_ಬಂದಿದ್ದರು
#ಬೇರೆ_ಪಕ್ಷಗಳ_ಅಭ್ಯರ್ಥಿ_ಇನ್ನೂ_ನಿಗದಿ_ಆಗಿಲ್ಲ_ಆದರೆ_ಇವರ_ಪ್ರಚಾರದ_ಮೊದಲ_ಹಂತ_ಮುಗಿದಿದೆ.
#ಇವರ_ಸ್ಪರ್ದೆ_ನಿರ್ಲಕ್ಷಿಸಲು_ಸಾಧ್ಯವಾ?
ಒಮ್ಮೆ ಆಮ್ ಆದ್ಮಿ ಪಾರ್ಟಿಯ ಲೋಕಸಭಾ ಚುನಾವಣೆಯಲ್ಲಿನ ಅಭ್ಯರ್ಥಿ ಆಗಿದ್ದ ಕಲ್ಲಹಳ್ಳ ಶ್ರೀಧರರನ್ನು ಗೆಳೆಯ ರೈತ ಸಂಘದ ವಸಂತ್ ಕುಮಾರ್ ಕರೆತಂದಿದ್ದರು.
ನಂತರ ಆಮ್ ಆದ್ಮಿ ಪಾರ್ಟಿ ಪಂಜಾಬ್ ದೆಹಲಿಯಲ್ಲಿ ಅನಿರಿಕ್ಷಿತ ಪಲಿತಾಂಶ ತಂದಿದೆ.
ಬರಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಹೈಕೋರ್ಟಿನ ಸಿನಿಯರ್ ಅಡ್ವೋಕೆಟ್, ಹಾಯ್ ಬೆಂಗಳೂರು ರವಿ ಬೆಳೆಗೆರೆ ವಕೀಲರು, ಯಡೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನದ ಕಾನೂನು ಸಲಹೆಗಾರರಾಗಿದ್ದ ಸಾಗರದ ಮುನ್ಸಿಪಲ್ ಹೈಸ್ಕೂಲ್ ವಿದ್ಯಾರ್ಥಿ ಕೆ.ದಿವಾಕರ್ ಸಾಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದಾರೆ.
ಜಾರ್ಜ್ ಫರ್ನಾಂಡಿಸ್, ಶ್ರೀನಿವಾಸ ಪ್ರಸಾದರ ಒಡನಾಡಿ ಆಗಿದ್ದ ಇವರು ಪ್ರಸಕ್ತ ದೇಶದ ಎಲ್ಲಾ ರಾಜಕಾರಣಿಗಳ, ಪತ್ರಕರ್ತರ ಆಪ್ತರೂ ಆಗಿದ್ದಾರೆ.
ಇವರ ಸ್ಪರ್ದೆಯಿಂದ ಬಿಜೆಪಿ ಪಕ್ಷದ ಕನಿಷ್ಟ 15 ಸಾವಿರ ಮತಗಳು ಇವರಿಗೆ ವರ್ಗಾವಣೆ ಆಗುವ ಬೀತಿ ಈಗಾಗಲೇ ಈ ಪಕ್ಷದ ಜಿಲ್ಲಾ ನಾಯಕರು ವ್ಯಕ್ತಪಡಿಸಿದ್ದಾರೆಂದರೆ ಇವರ ಸ್ಪರ್ದೆ ಬೇರೆ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ಆನಂದಪುರಂ ಭಾಗದಲ್ಲಿ ಮುಸ್ಲಿಂರ ಜನಸಂಖ್ಯೆ ಜಾಸ್ತಿ ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಮಸೀದಿಗಳಿದೆ ಈ ಭಾಗದ ಅನೇಕರ ನ್ಯಾಯಾಲಯದ ವ್ಯಾಜ್ಯ ದಿವಾಕರ್ ಉಚ್ಚ ನ್ಯಾಯಾಲಯದಲ್ಲಿ ಬಗೆಹರಿಸಿದ್ದರಿಂದ ಆ ಜನಾಂಗದ ಯುವಕರೂ ದಿವಾಕರ್ ಗೆ ಬೆಂಬಲಿಸುತ್ತಿರುವುದು ಮತ್ತು ಲಿಂಗಾಯಿತ ಬ್ರಾಹ್ಮಣ ಸಮುದಾಯದ ಒಗ್ಗಟ್ಟು ದಿವಾಕರ್ ಸ್ಪರ್ದೆ ಹಗುರವಾಗಿ ಪರಿಗಣಿಸುವುದಿಲ್ಲ.
Comments
Post a Comment