Blog number 1122. ಒಂದು ಕಾಲದ ಸಾಗರದ ಜೋಗ್ ಬಸ್ ನಿಲ್ದಾಣವನ್ನು ಬೂತಕಾಲದ ಕನ್ನಡಿಯಲ್ಲಿ ನೋಡುವ ಅವಕಾಶ ಮಾಡಿದ ಸಾಗರದ ಸತೀಶ್, ಜೇಡಿಕುಣಿ ಮಂಜುನಾಥ್ ಮತ್ತು ಮುಂಬೈಯಲ್ಲಿ ನೆಲೆಸಿರುವ ಮದು ಇವರ ಜೊತೆಯ ಈ ಸುಂದರ ಸಂಜೆ .
#ಸಾಗರದಿಂದ_ಬಂದವರು_80_ರ_ದಶಕದ_ನೆನಪು_ತಂದರು.
#ಸಾಗರದ_ಪ್ರತಿಭಾವಂತ_ಮದುಸೂದನ್_ಈಗ_ಮುಂಬೈನಲ್ಲಿ_ಯಶಸ್ವಿ_ಡೆವಲಪರ್
#ಇವರ_ಜೊತೆ_ಸಾಗರದ_ರಂಗಕರ್ಮಿ_ಜೇಡಿಕುಣಿ_ಮಂಜುನಾಥ್
#ಒಂದು_ಕಾಲದ_ಸಾಗರದ_ಜೋಗ್_ಬಸ್_ನಿಲ್ದಾಣದ_ಸುಂದರಾಂಗ_ಸ್ಟೇಷನರಿ_ಶಾಪ್_ಮಾಲಿಕರಾಗಿದ್ದ_ಸತೀಶ್_ಬಂದಿದ್ದರು.
#ಆಗಿನ_70_80ರ_ದಶಕದ_ಸಾಗರ_ಜೋಗ್_ಬಸ್_ನಿಲ್ದಾಣದ_ಬೂತ_ಕಾಲದ_ನೆನಪಿಸಿ_ಕೊಂಡು_ಸಣ್ಣ_ಹರಟೆ
ದಿಡೀರ್ ಆಗಿ ಬಂದ ಈ ಮೂವರೂ ಪರಸ್ಪರ ಜಿಗಣಿ ದೊಸ್ತರಾಗಿ ಮುಂಬೈನಲ್ಲಿನ ಕೆಲ ಕನ್ನಡ ಸಂಘದಲ್ಲಿನ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಮುಂಬೈನ ವಾಸಿ ಬಿಲ್ಡರ್ ಮದುಸೂದನರ ಅತಿಥಿಗಳಾಗಿ ಭಾಗವಹಿಸಿದ್ದರು.
ಬಹಳ ವರ್ಷಗಳ ನಂತರ ಮದು ಬೇಟಿ ಕಷ್ಟದ ಜೀವನದಲ್ಲಿ ಇಡೀ ಕುಟುಂಬದ ನಾವೆಯನ್ನು ಸರಿ ದಾರಿಯಲ್ಲಿ ನಡೆಸಿ ದಡ ಸೇರಿಸಿದ ಬಂಗಾರದ ಮನುಷ್ಯದ ರಾಜಕುಮಾರರಂತೆಯೇ ನಯ ವಿನಯಗಳ ಸಂಗಮ.
1978-1983ರವರೆಗೆ ಸಾಗರದಲ್ಲಿ ವಿದ್ಯಾಬ್ಯಾಸ ಮಾಡುವಾಗ ಸಾಗರದ ಜೋಗ್ ಬಸ್ ನಿಲ್ದಾಣ ನೋಡಿದವರಿಗೆ ಕೃಷ್ಣರಾಯರ ನೆನಪಾಗಬಹುದು ಅವರ ಬಿಳಿ ಷರ್ಟ್ - ಪಂಚೆ ಮತ್ತು ನಿತ್ಯ ಶೇವ್ ಮಾಡಿದ ಅವರ ಆಕರ್ಷಕ ವ್ಯಕ್ತಿತ್ವ ಮರೆಯಲು ಸಾಧ್ಯವೇ ಇಲ್ಲ.
ಗಜಾನನ ಕಂಪನಿಯ ಬಸ್ ಗಳ ಏಜೆಂಟರೂ ಆಗಿದ್ದರು ಮತ್ತು ಬಸ್ ಸ್ಟಾಂಡ್ ಎದುರು ಅವರ ಸ್ಟೇಷನರಿ ಅಂಗಡಿ ಕೂಡ ಇತ್ತು, ಅಷ್ಟು ಸಣ್ಣ ಜಾಗದಲ್ಲಿ ಅಷ್ಟು ಸುಂದರವಾಗಿ ಅವರು ಸಾಮಾನುಗಳನ್ನು ಜೋಡಿಸಿಡುತ್ತಿದ್ದರು ಅದನ್ನು ಕಣ್ಣು ತುಂಬಿಕೊಳ್ಳುವುದೇ ವಿದ್ಯಾರ್ಥಿಗಳಾದ ನಮಗೆ ವಿಶೇಷ.
ಈ ಲೇಖನಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತರಾದ ಡಿ.ಪಿ.ಸತೀಶ್ ಬರೆದಿದ್ದಾರೆ ಅದೇನೆಂದರೆ ಇವರ ಅಂಗಡಿ ಹೆಸರು ಕರ್ನಾಟಕ ಸ್ಟೋರ್ ಅಂತ ಮೈಸೂರು ರಾಜ್ಯಕ್ಕೆ ಕನಾ೯ಟಕ ಎಂಬ ನಾಮಕರಣ ಆಗದ ಕಾಲದಲ್ಲೇ ಇವರು ಕರ್ನಾಟಕ ಎಂದು ತಮ್ಮ ಅಂಗಡಿಗೆ ಹೆಸರಿಟ್ಟಿದ್ದರಂತೆ ಮತ್ತು ಜನರು ಇವರನ್ನು ಕರ್ನಾಟಕ ಸ್ಟೋರ್ ಕೃಷ್ಣ ರಾವ್ ಅಂತಲೇ ಕರೆಯುತ್ತಿದ್ದರಂತೆ.
ಕೃಷ್ಣರಾಯರ ಪುತ್ರರೇ ಸತೀಶ್ ಇವರೂ ನೋಡಲು ಬಾಲೀವುಡ್ ಚಾಕೋಲೆಟ್ ಪೇಸಿನ ಸುಂದರಾಂಗ ತಂದೆಗೆ ಸಹಾಯಕರಾಗಿ ಅಂಗಡಿ ನೋಡಿಕೊಳ್ಳುತ್ತಾ ವಿದ್ಯಾಬ್ಯಾಸ ಮಾಡುತ್ತಿದ್ದರು ಈಗ ಹವ್ಯಾಸಿ ರಂಗಭೂಮಿ ಕಲಾವಿದರೂ ಆಗಿದ್ದಾರೆ.
ಕಲ್ಮನೆ ಗ್ರಾಮ ಪಂಚಾಯಿತಿಯಲ್ಲಿನ ಸಹಕಾರಿ ಸಂಘದ ಉತ್ತುಂಗಕ್ಕೆ ಕಾರಣರಾಗಿ ಜನಾನುರಾಗಿ ಆಗಿದ್ದ ಬೀಮಣ್ಣರ ಸಹೋದರ ಖ್ಯಾತ ರಂಗಕರ್ಮಿ ರಂಗ ನಿರ್ದೇಶಕ ಮಂಜುನಾಥ್ ಜೇಡಿಕುಣಿ ಆಗಾಗ್ಗೆ ಬೇಟಿ ಆಗುತ್ತಿರುತ್ತಾರೆ ಹೀಗೆ ಈ ಮೂವರು ಇವತ್ತಿನ ಸಂಜೆಯನ್ನು 1980ರ ದಶಕದ ಸಾಗರ ಪಟ್ಟಣದ ಜೋಗ್ ಬಸ್ ಸ್ಟಾಂಡಿನ ಬೂತಕಾಲದ ನೋಟಕ್ಕೆ ಕರೆದೊಯ್ದು ಸುಂದರ ಸಂಜೆ ಆಗಿಸಿದರು.
ದೊಡ್ಡ ಹಡಗಿನಂತ 200 ಕ್ಕೂ ಹೆಚ್ಚು ಜನ ಕುಳಿತು ಊಟ-ಉಪಹಾರ ಸೇವಿಸುವ ಬಸ್ ಸ್ಟಾಂಡ್ ಹೋಟೆಲ್ ಅಂಬಿಕಾ ಬೆಳಿಗ್ಗೆ 5.ರಿಂದ ರಾತ್ರಿ 11 ರ ತನಕ ತೆರೆದಿರುತ್ತಿತ್ತು ಆಗ ಬಸ್ ಸ್ಟಾಂಡ್ ಪಕ್ಕದ ಏಕೈಕ ಬಾವಿಯಿಂದ ರಾಟೆ - ಹಗ್ಗದಲ್ಲಿ ನೀರು ಸೇದಿ ಈ ಹೋಟೆಲ್ ನಲ್ಲಿ ಬಳಸುತ್ತಿದ್ದರು, ಗ್ಯಾಸ್ - ಮಿಕ್ಸಿ - ಗ್ರೈಂಡರ್ ಇರಲೇ ಇಲ್ಲ.
ಎದುರಿನ ಸತೀಶರ ಅಂಗಡಿ ಪಕ್ಕದ ಹಿಮಾಲಯ ಐಸ್ ಕ್ರಿಂ, ಮೂರ್ತಿಯವರ ಅರುಣೋದಯ ಸೈಕಲ್ ಶಾಪ್, ಬೆಳಗಿನಿಂದ ಸಂಜೆ ತನಕ ಇಡೀ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದು ಸೇರುತ್ತಿದ್ದ ವಿದ್ಯಾರ್ಥಿಗಳಿಂದ ಇಡೀ ಬಸ್ ನಿಲ್ದಾಣ ಜಗ ಮಗಿಸುತ್ತಿತ್ತು.
ಆಗ ಇಲ್ಲಿ ಬೇರೆ ಹೋಟೆಲ್ ಲಾಡ್ಜ್ ಇರಲೇ ಇಲ್ಲ ನಂತರ ಕೆಳಗಡೆ ಪ್ರವಾಸಿ ಹೋಟೆಲ್ ಪ್ರಾರಂಭವಾಯಿತು.
ಪಕ್ಕದಲ್ಲೇ ಇದ್ದ ಪೋಲಿಸ್ ಠಾಣೆಗೆ ಆಗಿನ ಅಪರಾದಿಗಳ ಬಾಯಿ ಬಿಡುಸುವ ಕ್ರಮವಾಗಿದ್ದ ಏರೋಪ್ಲೇನ್ ಶಿಕ್ಷೆಗೆ ಇದೇ ಅಂಬಿಕಾ ಹೋಟೆಲ್ ನ ಬಾವಿ ಹಗ್ಗ ರಾತ್ರಿ ಬೇಕಾಗಿತ್ತು ಅಂದಾಗ ಸತೀಶ್ ಇನ್ನೋಂದು ನೆನಪು ಮಾಡಿದರು ಅದೇನೆಂದರೆ ಅಪರಾಧಿಗಳಿಗೆ ಸ್ಲೇಟು ಹಿಡಿಸಿ ಪೋಟೋ ತೆಗೆಯಲು ಇವರ ಅಂಗಡಿಯ ಸ್ಲೇಟು ಒಯ್ದು ಅವರ ಕೆಲಸದ ನಂತರ ಪೋಲಿಸರು ವಾಪಾಸು ಮಾಡುತ್ತಿದ್ದರಂತೆ....
ಮದು ಮತ್ತು ಮಂಜುನಾಥ್ ಜೇಡಿಕುಣಿ ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ಎರೆಡು ವರ್ಷದ ಹಿಂದೆಯೇ ಓದಿದ್ದಾರೆ ಇವತ್ತು ಮೂವರಿಗೂ ನನ್ನ ಕಾದಂಬರಿ ಮತ್ತು ಕಥಾ ಸಂಕಲನ ನೀಡಿ ಬೀಳ್ಕೊಟ್ಟೆ.
Comments
Post a Comment