Blog number 1124. ಭಾಗ -8. ಆನಂದಪುರಂ ಸಾಹಿತ್ಯ ಹಬ್ಬ. ಇಂಡಿಯನ್ ಬುಕ್ ಆಪ್ ವಲ್ಡ್೯ ರೆಕಾರ್ಡ್ ಹೊಂದಿರುವ ಕನ್ನಡ ಸಾಹಿತ್ಯದ ಅಪರೂಪದ ವಿಶಿಷ್ಟ ಕುಟುಂಬದ ಪ್ರಕಟಿತ ಪುಸ್ತಕಗಳ ಪ್ರದರ್ಶನ ಮತ್ತು ಅವರೊಂದಿಗೆ ಸಾಹಿತ್ಯ ಸಂವಾದದಲ್ಲಿ ಅಂಕೋಲ ಜೆ.ಸಿ. ಕಾಲೇಜಿನಲ್ಲಿ ಪ್ರಾಚಾರ್ಯರಾದ ಮೋಹನ್ ಹಬ್ಬು ಅವರ ಮಾತುಗಳು .
ಆನಂದಪುರಂ ಸಾಹಿತ್ಯ ಹಬ್ಬ
ಭಾಗ -8.
ಇಂಡಿಯನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ತಂದೆ ಮತ್ತು ಅವರ ಆರು ಮಕ್ಕಳೂ ಕನ್ನಡದಲ್ಲಿ ಸಾಹಿತ್ಯ ರಚಿಸಿದ್ದಾರೆ ಅದೆಲ್ಲವೂ ಪ್ರಕಟವಾಗಿದೆ.
ಸದ್ಯದಲ್ಲೇ ಗಿನ್ನೆಸ್ ಬುಕ್ ನಲ್ಲಿ ದಾಖಲಾಗಲಿದೆ ಈ ಕನ್ನಡದ ಸಾಹಿತ್ಯದಲ್ಲೇ ಅಪರೂಪದ ಹಬ್ಬು ಕುಟುಂಬ.
ಆರು ಜನ ಸಹೋದರರೂ ವಿದ್ಯಾವಂತರು, ನಾಲ್ಕು ಜನ ಕಾಲೇಜಿನಲ್ಲಿ ಪ್ರಾಚಾಯ೯ರಾಗಿದ್ದವರು.
ಒಬ್ಬರು ಹಿಂದೂ - ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾಗಿ 28 ವರ್ಷ ಸೇವೆ ಸಲ್ಲಿಸಿದವರು.
ಇನ್ನೊಬ್ಬರು ಪ್ರಜಾವಾಣಿ ಬ್ಯೂರೋ ಚೀಪ್ ಆಗಿ ನಂತರ ಉದಯವಾಣಿ ಮುಖ್ಯ ವರದಿಗಾರರಾದವರು.
ಇನ್ನೊಬ್ಬರು ಪ್ರಿಂಟಿಂಗ್ ಉದ್ಯಮದಲ್ಲಿ ಯಶಸ್ವಿಯಾಗಿ ಈಗ ಕೃಷಿಯಲ್ಲಿ ತೊಡಗಿದ್ದಾರೆ.
ಈ ವಿಶಿಷ್ಟ ವಿಶ್ವ ದಾಖಲೆಯ ಕುಟುಂಬಕ್ಕೆ ಮೊದಲ ಸನ್ಮಾನ ಮಾಡಿದ ದಾಖಲೆ ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ತು ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ತುವಿಗೆ ಸಲ್ಲುತ್ತದೆ.
ದಿನಾಂಕ 11-ಡಿಸೆಂಬರ್ -2022 ರ ಭಾನುವಾರ ಆನಂದಪುರಂನ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ವಿಶ್ವ ದಾಖಲೆಗಳಿಸಿದ ಹಬ್ಬು ಕುಟುಂಬದ ಪುಸ್ತಕ ಪ್ರದರ್ಶನ ಉದ್ಘಾಟಿಸಿದವರು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್.
ಹಬ್ಬು ಕುಟುಂಬದ ಜೊತೆ ಸಾಹಿತ್ಯ ಸಂವಾದ ಮತ್ತು ನನ್ನೆರೆಡು ಪುಸ್ತಕ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿದವರು ಖ್ಯಾತ ಸಾಹಿತಿ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ.
ವೇದಿಕೆಯಲ್ಲಿ ಖ್ಯಾತ ಪತ್ರಕರ್ತ ಡಿ.ಪಿ. ಸತೀಶ್, ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಮತ್ತು ಅಧ್ಯಕ್ಷತೆ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಡಿ.ರವಿ ವಹಿಸಿದ್ದರು.
Comments
Post a Comment