Blog number 1138. ನಿನಾಸಮ್ ಸಹಯೋಗದಲ್ಲಿ ಸಾಗರ ತಾಲ್ಲೂಕ್ ಪೋಟೋಗ್ರಾಪಿಕ್ ಸೊಸೈಟಿ ಹಮ್ಮಿಕೊಂಡಿದ್ದ ಕಲಾತ್ಮಕ ಛಾಯಾಗ್ರಹಣ ಕಮ್ಮಟದಲ್ಲಿ ಆನಂದಪುರಂ ಚಂಪಕ ಸರಸ್ಸುವಿನಲ್ಲಿ ಕತ್ತಲ ರಾತ್ರಿಯಲ್ಲಿ ಲೈಟ್ ಪೋಟೋಗ್ರಾಪಿ ಪ್ರಾತ್ಯಕ್ಷಿತೆ.
#ಸಾಗರ_ಪೋಟೋಗ್ರಾಪಿಕ್_ಸೊಸೈಟಿಯಿಂದ_40_ಶಿಭಿರಾರ್ಥಿಗಳಿಂದ
#ಲೈಟ್_ಪೋಟೋಗ್ರಾಪಿ_ಪ್ರಾತ್ಯಕ್ಷಿತೆ.
#ದೇವರ_ಕಣ್ಣು_ಸಿನಿಮಾ_1975ರಲ್ಲಿ_ಚಂಪಕ_ಸರಸ್ಸುವಿನಲ್ಲಿ_ರಾತ್ರಿ_ಲೈಟಿನಲ್ಲಿ_ಶೂಟಿಂಗ್_ನಂತರ
#ಇದು_ಮೊದಲ_ರಾತ್ರಿ_ಲೈಟಿನ_ಪ್ರೋಟೋಗ್ರಪಿ,
ಆನಂದಪುರಂನಲ್ಲಿರುವ ತಾಜ್ ಮಹಲಿಗಿಂತ ಮೊದಲೇ ನಿರ್ಮಾಣವಾಗಿರುವ ಪ್ರೇಮ ಸೌಧ ಚಂಪಕ ಸರಸ್ಸು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮದ ಸ್ಮಾರಕ.
1975ರಲ್ಲಿ ಖ್ಯಾತ ನಿರ್ದೇಶಕ ವೈ.ಆರ್ ಸ್ಟಾಮಿ ಅವರು ಲೋಕೇಶ್, ಅನಂತನಾಗ್, ಆರತಿ ಮತ್ತಿತರ ಸಿನಿಮಾ ತಾರಾಗಣದಲ್ಲಿ #ದೇವರ_ಕಣ್ಣು ಎಂಬ ಚಲನ ಚಿತ್ರ ಆನಂದಪುರಂನಲ್ಲಿ ಚಿತ್ರಿಕರಿಸಿದ್ದರು.
ಈ ಚಿತ್ರದಲ್ಲಿನ ಓ ... ಇನಿಯಾ ... ನೀ... ಎಲ್ಲಿರುವೆ ಎಂಬ ಹಾಡು ಕೆಲವು ದಿನ ರಾತ್ರಿ ಈ ಚಂಪಕ ಸರಸ್ಸುವಿನಲ್ಲಿ ಚಿತ್ರಿಕರಿಸಿದ್ದರು.
ನಂತರ ಅಂದರೆ ನಿನ್ನೆ 23-ಡಿಸೆಂಬರ್ -2022ರ ರಾತ್ರಿ ಇಲ್ಲಿ ಸಾಗರ ಪೋಟೋಗ್ರಾಪಿಕ್ ಸೊಸೈಟಿ ಹೆಗ್ಗೋಡಿನ ನೀನಾಸಂ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕಲಾತ್ಮಕ ಛಾಯಾಗ್ರಹಣ ಕಮ್ಮಟದ ಅಂಗವಾಗಿ ಭಾಗವಹಿಸಿರುವ 40 ಶಿಭಿರಾರ್ಥಿಗಳಿಗಾಗಿ ಲೈಟ್ ಪೋಟೋಗ್ರಾಪಿ ಪ್ರಾತ್ಯಕ್ಷಿತೆಯನ್ನು ಆನ೦ದಪುರಂನ ಚಂಪಕ ಸರಸ್ಸುವಿನಲ್ಲಿ ಹಮ್ಮಿಕೊಂಡಿತ್ತು.
ಇದು 47 ವರ್ಷಗಳ ನಂತರ ಚಂಪಕ ಸರಸ್ಸುವಿನಲ್ಲಿ ನಡೆದ ರಾತ್ರಿ ಲೈಟಿನಲ್ಲಿನ ಚಿತ್ರಿಕರಣವಾಗಿದೆ.
ಸಾಗರ ತಾಲ್ಲುಕಿನ ದಿವಂಗತ ರಮೇಶ್ ಬಂದಗದ್ದೆ (ರಾಮಕೃಷ್ಣ ಹೆಗ್ಗಡೆಯವರ ಆಪ್ತರು) ಅವರ ಸಹೋದರ ಖ್ಯಾತ ಹವ್ಯಾಸಿ ಬರಹಗಾರ ಛಾಯಾ ಚಿತ್ರಕಾರ ಶೈಲೇಂದ್ರ ಬಂದಗದ್ದೆ ಈ ಚಂಪಕ ಸರಸ್ಸುವಿನ ಸ್ಥಳ ನಿಗದಿ ಮಾಡಿದ್ದರು.
ಸ್ಥಳಿಯ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ನ ಬಿ.ಡಿ.ರವಿಕುಮಾರ್ ಮತ್ತು ಪದಾಧಿಕಾರಿಗಳು ಸಹಕರಿಸಿ ಈ ಛಾಯಾಗ್ರಹಣ ಕಮ್ಮಟ ಯಶಸ್ವಿಗೊಳಿಸಿದ್ದಾರೆ.
Comments
Post a Comment