Blog number 1135. ಆನಂದಪುರಂ ಸಾಹಿತ್ಯ ಹಬ್ಬ ಭಾಗ 14. ಸಾಹಿತ್ಯ ಲೋಕದ ವಿಶ್ವ ದಾಖಲೆಯ ಹಬ್ಬು ಸಹೋದರಲ್ಲಿ ಐದನೆಯವರಾದ ಕಾರ್ಕಳ ತಾಲೂಕಿನ ಮುಂಡುಕೋಡು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉದಯ ಕುಮಾರ್ ಹಬ್ಬು 50ಕ್ಕೂ ಹೆಚ್ಚು ಪುಸ್ತಕ ಪ್ರಕಟವಾಗಿದೆ.
#ಆನಂದಪುರಂ_ಸಾಹಿತ್ಯ_ಹಬ್ಬ_ಭಾಗ_14
(ಅಂತಿಮ ಭಾಗ)
#ಕನ್ನಡ_ಕೃತಿ_ರಚನೆಯಲ್ಲಿ_ವಿಶ್ವ_ದಾಖಲೆಯ_ಏಕೈಕ_ಕುಟು೦ಬ
#ಹಬ್ಬು_ಕುಟುಂಬದಲ್ಲಿ_50ಕ್ಕೂ_ಹೆಚ್ಚು_ಪುಸ್ತಕ_ಪ್ರಕಟಿಸಿರುವ_ಉದಯ_ಕುಮಾರ್_ಹಬ್ಬು
#ನನ್ನ_ಇವರ_ಗೆಳೆತನಕ್ಕೆ_ಪೇಸ್_ಬುಕ್_ಸೇತುವೆ
#ನನ್ನ_ಕಾದಂಬರಿ_ಬೆಸ್ತರ_ರಾಣಿ_ಅರವಿಂದ_ಚೊಕ್ಕಾಡಿ_ಅವರ_ವಿಮರ್ಶೆಯಿಂದ_ಸಂಪರ್ಕ
#ಹಬ್ಬು_ಕುಟುಂಬದ_ಎಲ್ಲರೂ_ಆನಂದಪುರಂಗೆ_ಬಂದಿದ್ದು_ವಿಶೇಷ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮುಂಡುಕೋಡು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾ೦ಶುಪಾಲರಾಗಿ ಮಂಗಳೂರಿನ ಕಿನ್ನಿಗೋಳಿಯಲ್ಲಿ ನೆಲೆಸಿರುವ ಉದಯ ಕುಮಾರ್ ಹಬ್ಬು ಹಬ್ಬು ಕುಟುಂಬದ ಆರು ಸಹೋದರರಲ್ಲಿ ಐದನೆಯವರು.
ಇವರು ಬರೆದು ಪ್ರಕಟಿಸಿದ ಪುಸ್ತಕಗಳು 50ಕ್ಕೂ ಹೆಚ್ಚು, ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಬರಹ - ವಿಮರ್ಶೆಗಳು ಸಾವಿರಕ್ಕೂ ಹೆಚ್ಚು.
ನನ್ನ ಮತ್ತು ಉದಯ ಕುಮಾರ್ ಹಬ್ಬು ಪರಿಪಯ ಅಕಸ್ಮಿಕವಾಗಿ ಪೇಸ್ ಬುಕ್ ನಿಂದ ಆಯಿತು ಆ ಸಂದರ್ಭದಲ್ಲಿ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಖ್ಯಾತ ಸಾಹಿತಿ, ಅಂಕಣಕಾರ ಮತ್ತು ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ ಅವರು ವಿಮರ್ಶೆ ಬರೆದದ್ದು ಓದಿ ಈ ಕಾದಂಬರಿಗಾಗಿ ಉದಯ ಕುಮಾರ್ ಹಬ್ಬು ನನ್ನ ಸಂಪರ್ಕ ಮಾಡಿದ್ದರು.
ನಂತರ ಕಾದಂಬರಿ ಓದಿ ವಿಮರ್ಶೆಯೂ ಮಾಡಿದ್ದರು ಹೀಗೆ ಈ ಸಜ್ಜನರ ಸಂಪರ್ಕವಾಯಿತು.
ನಂತರ ಇವರ ಪೇಸ್ ಬುಕ್ ಲೇಖನಗಳಿಂದ ಇವರ ಇಡೀ ಕುಟುಂಬವೇ ಸಾಹಿತ್ಯ ರಚನೆಯಲ್ಲಿರುವುದು ತಿಳಿದು ನಾನು ಬರೆದ ಲೇಖನದಿಂದ (ಇಲ್ಲಿ ಕ್ಲಿಕ್ ಮಾಡಿ https://arunprasadhombuja.blogspot.com/2022/10/blog-number-1008.html ) ಇಡೀ ಹಬ್ಬು ಕುಟುಂಬ ಆನಂದಪುರಂಗೆ ಬಂದು ನನ್ನ ಅತಿಥಿಗಳಾಗಿ ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಆನಂದಪುರಂ ಸಾಹಿತ್ಯ ಹಬ್ಬ ( ದಿನಾಂಕ 11-ಡಿಸೆಂಬರ್ -2022 ಬಾನುವಾರ - ಸ್ಥಳ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ) ಈ ಹಬ್ಬು ಕುಟುಂಬದ ಎಲ್ಲಾ ಪ್ರಕಟಿತ ಪುಸ್ತಕಗಳ ಪ್ರದರ್ಶನ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥರಿಂದ ಉದ್ಘಾಟನೆಗೊಂಡಿತು.
ಆನಂದಪುರಂ ಸಾಹಿತ್ಯ ಹಬ್ಬದ ಕಾರ್ಯಕ್ರಮ ಅರವಿಂದ ಚೊಕ್ಕಾಡಿಯವರು ಉದ್ಘಾಟಿಸಿದರು, ವೇದಿಕೆಯಲ್ಲಿ ಖ್ಯಾತ ಪತ್ರಕರ್ತ ಡಿ.ಪಿ. ಸತೀಶ್, ತಾಲ್ಲುಕ್ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ, ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಡಿ.ರವಿ ಕುಮಾರ್ ಉಪಸ್ಥಿತರಿದ್ದರು.
ವಿಶ್ವ ದಾಖಲೆಗೆ ಕಾರಣರಾದ ಹುಬ್ಬು ಸಹೋದರರಾದ ಮೋಹನ್ ಹಬ್ಬು ಅಂಕೋಲ, ರಾಮಚಂದ್ರ ಹಬ್ಬು ಕಾರವಾರ, ಅರುಣ್ ಕುಮಾರ್ ಹಬ್ಬು ಹುಬ್ಬಳ್ಳಿ, ಉದಯ ಕುಮಾರ್ ಹಬ್ಬು ಮಂಗಳೂರು, ಜಯಪ್ರಕಾಶ್ ಹಬ್ಬು ಬನವಾಸಿ ಮತ್ತು ಶ್ರೀಮತಿ ಶರಾವತಿ ಸುಭಾಷ್ ಚಂದ್ರ ಹಬ್ಬು ಸಾಗರ ಇವರುಗಳನ್ನು ಸನ್ಮಾನಿಸಲಾಯಿತು ಮತ್ತು ಇವರುಗಳು ಮಾತಾಡಿದ್ದನ್ನು ಆನಂದಪುರಂ ಸಾಹಿತ್ಯ ಹಬ್ಬ ಕಂತುಗಳಲ್ಲಿ ಪ್ರಕಟಿಸಿದ್ದೇನೆ.
ಈ ಕಾರ್ಯಕ್ರಮದಲ್ಲಿ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಮತ್ತು ಬಿಲಾಲಿ ಬಿಲ್ಲಿ ಕಥಾ ಸಂಕಲನದ ಅವಲೋಕನ ಅರವಿಂದ ಚೊಕ್ಕಾಡಿಯವರಿಂದ ನಡೆದದ್ದು ನನಗೊಂದು ಕಿರೀಟವಾದ ಹಿರಿಮೆ ಆಯಿತು.
ಇದು ಅಂತಿಮ 14ನೇ ಕಂತು, ಈ ಕಾಯ೯ಕ್ರಮ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳು.
Comments
Post a Comment