Blog number 1103. ಕೇಂದ್ರ ಸರ್ಕಾರದ ಮಂತ್ರಿ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಕರೆ ತಂದದ್ದು, ಸಾಗರ ತಾಲ್ಲೂಕಿನ ಜೋಗ್ ಕಾರ್ಗಲ್ ಮೊದಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೇಸ್ ಅಧಿಕಾರ ಪಡೆಯಲಾಗಲಿಲ್ಲ, ಕಾಗ೯ಲ್ ನ ಅಜಿತ್ ಪಾಲ್ ಜೈನ್ ಆ ದಿನಗಳ ಹಿರೋ.
#ಜೋಗ_ಕಾರ್ಗಲ್_ಪಟ್ಟಣ_ಪಂಚಾಯತ್_ಚುನಾವಣೆ_2001.
#ಪಟ್ಟಣ_ಪಂಚಾಯತಿ_ಚುನಾವಣೆಗೆ_ಕೇಂದ್ರ_ಸರ್ಕಾರದ_ಮಂತ್ರಿ_ಕರೆತಂದಿದ್ದು.
#ಜೋಗದ_ಎರಮಯ್ಯ_ಎನಕೋಡ_ಮನೆಯಲ್ಲಿ_ಮಂತ್ರಿಗಳಿಗೆ_ರಾತ್ರಿ_ಬೋಜನ
#ರ್ವುಡಿ_ಪಟ್ಟಿಯಲ್ಲಿದ್ದರಿಂದ_ಎನಕೋಡ_ಮನೆಯಲ್ಲಿ_ಊಟಕ್ಕೆ_ತಕರಾರು_ತೆಗೆದ_ಅಧಿಕಾರಿ_ವರ್ಗ
#ಜಾರ್ಜ್_ಸಹೋದರ_ಮೈಕೆಲ್_ಪರ್ನಾಂಡಿಸರೂ_ಬಾಗಿ_ಆಗಿದ್ದ_ಚುನಾವಣೆ
#ಸಂಯುಕ್ತ_ಜನತಾದಳದ_ಸ್ಥಳಿಯ_ಅಜಿತ್_ಪಾಲ್_ಜೈನ್_ತಂಡಕ್ಕೆ_ವಿಜಯದ_ಮಾಲೆ
#ಶ್ರೀನಿವಾಸ_ಪ್ರಸಾದ್_ಅವರ_ಚಿಂತನೆಗಳು.
1999 ರಲ್ಲಿ ಪಕ್ಷೇತರನಾಗಿ ಕಾಗೋಡು ತಿಮ್ಮಪ್ಪರ ವಿರುದ್ಧ ವಿದಾನ ಸಭೆಗೆ ಸ್ಪರ್ದಿಸಿ ಚಲಾವಣೆಯ ಶೇಕಡಾ 10% ಮತಗಳು ಕೇವಲ ನಮ್ಮ ಬಾಷಣಗಳಷ್ಟೆ ನಮ್ಮ ವೆಚ್ಚ ಮತ್ತು ಪ್ರಯತ್ನವಾಗಿ ಇವತ್ತಿಗೂ ಪಕ್ಷೇತರ ಅಭ್ಯರ್ಥಿ ಪಡೆದ ಮತಗಳ ದಾಖಲೆ ನನ್ನ ಹೆಸರಲ್ಲೇ ಇದೆ.
ಕಾಂಗ್ರೇಸ್ ಕಾಗೋಡು ವಿರುದ್ದ ಸ್ಪರ್ದೆ ಸಹಿಸದೆ ಸಾಗರದ ಮುನ್ಸಿಪ್ ಕೋರ್ಟ್, ಶಿವಮೊಗ್ಗದ ಸೆಷನ್ ಕೋರ್ಟ್ಗಳಲ್ಲಿ 22 ವಿವಿದ ಕೇಸುಗಳು ಪಟ ಪಟಾಂತ ಪಿಕ್ಸ್ ಆಯಿತು ಇದರ ಹಿಂದೆಯೆ ಶಿವಮೊಗ್ಗ ಮತ್ತು ಸಾಗರದಲ್ಲೂ ಜೈಲು ದರ್ಶನ ಮಾಡಿಸಿ ಬೋನಸ್ ಆಗಿ Roudy ಲೀಸ್ಟ್ ನಲ್ಲಿ ಜಾಗವೂ ದಯಪಾಲಿಸಿದರು.
ಅಷ್ಟೆ ಅಲ್ಲ ಕಾಂಗ್ರೇಸ್ ಪಕ್ಷದಿಂದಲೂ ಉಚ್ಚಾಟನೆ ಕೂಡ ಮಾಡಿದ್ದ ಆ ಸಮಯದಲ್ಲಿ ರಾಜ್ಯದಲ್ಲಿ ಜಾರ್ಜ್ ಪನಾ೯೦ಡಿಸರ ಸಮತಾ ಪಾರ್ಟಿ ಕಟ್ಟಲು ಪ್ರಾರಂಬಿಸಿ ಅದರ ನೇತೃತ್ವ ಉಡುಪಿ ಮಾಜಿ ಸಂಸದ ಐ.ಎಂ.ಜಯರಾಂ ಶೆಟ್ಟರು ವಹಿಸುವಂತೆ ಜಾಜ್೯ರ ನಿಕಟವರ್ತಿ ಈಗಿನ ಬಿಹಾರದ ನಿತೀಶ್ ಕುಮಾರ್ ಪಾರ್ಟಿಯಿಂದ ರಾಜ್ಯ ಸಭಾ ಸದಸ್ಯರಾದ ಕನ್ನಡಿಗ ಅನಿಲ್ ಹೆಗ್ಗಡೆ ರಾಜ್ಯದದ್ಯಾ೦ತ ಸಂಘಟನೆಯಲ್ಲಿ ತೊಡಗಿದಾಗ ನಮ್ಮನ್ನು ಸಂಪರ್ಕಿಸಿ ಸಮತಾ ಪಾರ್ಟಿಗೆ ಸೇರಿಸಿದ್ದರು.
ನನಗೂ ಮತ್ತು ನನ್ನ ಗೆಳೆಯರಿಗೆ ರಾಜಕೀಯ ಪಕ್ಷ ಒಂದರ ವೇದಿಕೆ ಅನಿವಾರ್ಯ ಆಗಿತ್ತು ಇಲ್ಲದಿದ್ದರೆ ಇವರೆಲ್ಲ ನಾವು ಬದುಕದಂತೆ ನಮ್ಮ ಹೊಟ್ಟೆಪಾಡಿನ ವ್ಯವಹಾರಗಳ ಮೇಲೂ ಮುರಿದುಕೊಂಡು ಬಿದ್ದಿದ್ದರು.
ಈ ರೀತಿ ಹೊಸ ಪಕ್ಷ ಸೇರಿದ ಹುಮ್ಮಸ್ಸಿನಲ್ಲಿರುವಾಗಲೇ ಸಾಗರ ತಾಲ್ಲೂಕಿನ ಜೋಗ ಕಾರ್ಗಲ್ ಪ್ರಾಜೆಕ್ಟ್ ಏರಿಯಾವನ್ನು ರಾಜ್ಯ ಸರ್ಕಾರದಿಂದ ಪಟ್ಟಣ ಪಂಚಾಯಿತಿ ಆಗಿ ಪರಿವರ್ತಿಸಿ ಮೊದಲ ಚುನಾವಣೆ ಘೋಷಣೆ ಆಯಿತು.
ಮಂತ್ರಿಗಳಾಗಿದ್ದ ಕಾಗೋಡರಿಗೆ ಎದುರಿಸಲು ಸಾಗರ ತಾಲ್ಲುಕಿನಲ್ಲಿ ಯಾವುದೇ ಪಕ್ಷ ಅಥವ ನಾಯಕತ್ವ ಇರಲೇ ಇಲ್ಲದ ಕಾಲ ಅದು.
ಆಗ ಕಾಗ೯ಲ್ ನ ಜೆ.ಹೆಚ್.ಪಟೇಲರ ಅನುಯಾಯಿ ಅಜಿತ್ ಪಾಲ್ ಜೈನ್ ಜೆ.ಹೆಚ್.ಪಟೇಲರ ಸಂಯುಕ್ತ ಜನತಾದಳದಿಂದ ಅಭ್ಯರ್ಥಿಗಳನ್ನು ಕಾಗೋಡರ ಕಾಂಗ್ರೇಸ್ ಅಭ್ಯರ್ಥಿಗಳ ಎದರು ಸ್ಪರ್ದೆಗೆ ಇಳಿಸಿದ್ದರು.
ಅರ್ಜಿ ಸಲ್ಲಿಸಲು ಕೊನೆಯ ಎರೆಡು ದಿನ ಇರುವಾಗ ಸಮತಾ ಪಾರ್ಟಿ ರಾಜ್ಯ ಅಧ್ಯಕ್ಷರಾದ ಐ.ಎಂ.ಜಯರಾಂ ಶೆಟ್ಟರು ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ನಲ್ಲಿ ಸಮತಾ ಪಾರ್ಟಿ ಸ್ಪರ್ದೆಗೆ ಇಳಿಸುವ ಸೂಚನೆ ನೀಡಿದ್ದರಿಂದ ನಾನು ಮತ್ತು ಗೆಳೆಯರು ತಯಾರಿಗೆ ತೊಡಗಿದೆವು.
ಜೋಗದ ನಿವಾಸಿ ಶಿವಮೊಗ್ಗದ ವಕೀಲರಾದ ಸಾಯಿನಾಥ್ ಯಾದವ್, ಹಿರೇಮನೆಯ ವಕೀಲ ಅನಂತ್, ಕಾರ್ಗಲ್ ನಿವಾಸಿ ಶಿವಮೊಗ್ಗದ ಕದಂಬ ಹೋಟೆಲ್ ಮಾಲಿಕ ಎಸ್.ಬಿ.ಎಂ. ಬ್ಯಾಂಕ್ ನ ಒ೦ದು ಕಾಲದ ನೌಕರರ ಸಂಘದ ಪದಾಧಿಕಾರಿ ಆಗಿದ್ದ ಕೃಷ್ಣಮೂರ್ತಿ, ಜೋಗ್ ಪಾಲ್ಸ್ ನ ಯುವ ಐಕಾನ್ ಆಗಿದ್ದ ಏನಕೋಡ ಎರಮಯ್ಯ, ಪ್ರಾಜೆಕ್ಟ್ ನ ಕಾರ್ಮಿಕ ಮುಖಂಡರಾಗಿ ನಿವೃತ್ತರಾಗಿದ್ದ ಕಾರ್ಮಿಕ ಮುಖಂಡರ ಮಗ ಚಿನ್ನು ಎಲ್ಲಾ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಸಮತಾ ಪಾರ್ಟಿ ಅಭ್ಯರ್ಥಿಗಳನ್ನು ಸ್ಪರ್ದೆಗೆ ಉಳಿಸಿದ್ದೆವು.
ಕಾಂಗ್ರೇಸ್ ಸೋಲಿಸಲು ಮತ್ತು ಸಂಯುಕ್ತ ಜನತಾದಳ ಗೆಲ್ಲಿಸಲು ಸಮತಾ ಪಾರ್ಟಿಯ ಸ್ಪರ್ಧೆಗೆ ಇಳಿಸುವ ಯೋಜನೆಯ ದೊಡ್ಡ ಮಟ್ಟದಲ್ಲಿನವರ ವ್ಯವಸ್ಥೆ ಇದಾಗಿತ್ತು ಈ ಮೂಲಕ ಕಾಂಗ್ರೇಸ್ ಮತ ವಿಭಜನೆ ಆಗಬೇಕಾಗಿತ್ತು.
ಚುನಾವಣಾ ಪಲಿತಾಂಶದಲ್ಲಿ ಸ್ವತಃ ಕಾಗೋಡು ಮಂತ್ರಿಗಳಾಗಿದ್ದರೂ ಅವರೇ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಡಿದ್ದರೂ, ಮೊದಲ ಚುನಾವಣೆಯಲ್ಲಿ ಅವರ ಕಾಂಗ್ರೇಸ್ ಪಕ್ಷದ ತಾಲ್ಲೂಕ್ ಮಟ್ಟದ ನಾಯಕರಾದ ಪಿ.ಕೆ. ಉಮ್ಮರ್ ಅಂತವರೂ ಸೋಲು ಕಾಣುವಂತಾಗಿತ್ತು ಮತ್ತು ಕಾಂಗ್ರೇಸ್ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಕ್ಕೆ ಬರಲಾಗಲಿಲ್ಲ.
ಸಂಯುಕ್ತ ಜನತಾದಳದ ಹೆಚ್ಚಿನ ಸದಸ್ಯರು ಆಯ್ಕೆ ಆಗಿ ಮೊದಲ ಅಧ್ಯಕ್ಷರಾಗಿ ಕಾಗ೯ಲ್ ಸಂತೋಷ್ ಆಯ್ಕೆ ಆದರು ಈ ಯಶಸ್ಸಿಗೆ ಯುವ ನಾಯಕ ಅಜಿತ್ ಪಾಲ್ ಶ್ರಮ ದೊಡ್ಡದು.
ಈ ಚುನಾವಣಾ ಪ್ರಚಾರಕ್ಕೆ ಆಗ ವಾಜಪೇಯಿ ಅವರ NDA ಸರಕಾರದಲ್ಲಿ ರಕ್ಷಣಾ ಮಂತ್ರಿಗಳಾಗಿದ್ದ ಜಾರ್ಜ್ ಪರ್ನಾಂಡಿಸ್ ರ ಸಮತಾ ಪಾರ್ಟಿಯಲ್ಲಿ ನಿತೀಶ್ ಕುಮಾರ್ ಮತ್ತು ಕರ್ನಾಟಕದ ಚಾಮರಾಜನಗರದಿಂದ ಸಂಸದರಾಗಿದ್ದ ಶ್ರೀನಿವಾಸ ಪ್ರಸಾದರು ಮಂತ್ರಿಗಳಾಗಿದ್ದರು.
ಶ್ರೀನಿವಾಸ ಪ್ರಸಾದರನ್ನು ಈ ಚುನಾವಣೆಗೆ ಕರೆ ತಂದಿದ್ದೆ, ಅನೇಕರು ಮೂಗು ಮುರಿದರು, ಹಾಸ್ಯ ಮಾಡಿದರು ಅತಿ ಚಿಕ್ಕ ಪಟ್ಟಣ ಪಂಚಾಯತ್ ಚುನಾವಣೆಗೆ ಕೇಂದ್ರದ ಮಂತ್ರಿಗಳು ಬರಬೇಕಾ? ಎಂಬ ಅವರ ಪ್ರಶ್ನೆ.
ಸಂಜೆ ಕಾರ್ಗಲ್ ಬಸ್ ನಿಲ್ದಾಣದ ಬಲ ಬಾಗದಲ್ಲಿನ ಮಹಡಿ ಮೇಲಿನ ಕೋಣೆ ವಕೀಲ ಸಾಯಿನಾಥರ ಆಪೀಸೆ ನಮ್ಮ ಕಾಯಾ೯ಲಯ ಆಗಿತ್ತು ಅಲ್ಲಿನ ಎದುರಿನ ಮೇಲ್ಚಾವಣೆ ಮೇಲೆಯೇ ನನ್ನ ಸ್ವಾಗತ ಮತ್ತು ಪೀಠಿಕೆಯ ಬಾಷಣದ ನಂತರ ಕೇಂದ್ರ ಮಂತ್ರಿ ಶ್ರೀನಿವಾಸ ಪ್ರಸಾದರ ಭಾಷಣವೂ ಆಯಿತು.
ನಂತರ ಮಂತ್ರಿಗಳ ರಾತ್ರಿ ಊಟ ಜೋಗ್ ಪಾಲ್ಸ್ ನ ಹೊರಗಿನ ಹೆನ್ನಿ ರಸ್ತೆಯಲ್ಲಿದ್ದ ನಮ್ಮ ಅಭ್ಯರ್ಥಿ ಎನಕೋಡರ ಮನೆಯಲ್ಲಿ ವ್ಯವಸ್ಥೆ ಮಾಡಿದ್ದೆವು ಆಗಲೇ ತಾಲ್ಲೂಕು ಆಡಳಿತ ಮತ್ತು ಪೋಲಿಸರು ತಕರಾರು ತೆಗೆದರು.
ಸ್ಥಳಿಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಗೂ ಎನಕೋಡರಿಗೂ ವೈಯಕ್ತಿಕವಾಗಿ ಜಿದ್ದಾಜಿದ್ದಿ ಇತ್ತಂತೆ ಆದ ಕಾರಣ ಅವರು ರ್ವುಡಿ ಪಟ್ಟಿಯಲ್ಲಿದ್ದ ಎನಕೋಡರ ಮನೆಗೆ ಕೇಂದ್ರ ಮಂತ್ರಿ ಊಟಕ್ಕೆ ಹೋಗಲು ವಿರೋದಿಸಿ ಜೋಗದ ಪ್ರವಾಸಿ ಮಂದಿರದಲ್ಲಿ ಸಾಗರದ ತಹಸೀಲ್ದಾರ್ ಗೆ ತಿಳಿಸಿ ಊಟದ ವ್ಯವಸ್ಥೆ ಮಾಡಿದ್ದು ನನಗೆ ಗೊತ್ತೇ ಇರಲಿಲ್ಲ.
ಊಟಕ್ಕೆ ಕರೆದುಕೊಂಡು ಹೋಗಲು ಹೋದಾಗ ಶ್ರೀನಿವಾಸ ಪ್ರಸಾದರು ನನಗೆ ಮಾತ್ರ ಅವರ ಕೋಣೆಗೆ ಕರೆದರು ಅಲ್ಲಿ ತಹಸೀಲ್ದಾರರು ಮತ್ತು ಸಬ್ ಇನ್ಸ್ಪೆಕ್ಟರ್ ಇದ್ದರು ಆಗ ಅವರ ತಕರಾರು ಏನಂತ ಶ್ರೀನಿವಾಸ ಪ್ರಸಾದರು ತಿಳಿಸಿದರು ಆಗ ನಾನು ಹೇಳಿದೆ "ಎನಕೋಡ ಎರಮಯ್ಯ ಪ್ರಾಜೆಕ್ಟ್ ಏರಿಯಾದಲ್ಲಿ ನ್ಯಾಯಕ್ಕಾಗಿ ಹೋರಾಡುವುದರಿಂದ ಈ ಯುವಕ ಡೇರ್ ಡೆವಿಲ್ ಆಗಿದ್ದಾನೆ ಆದ್ದರಿಂದ ಇವರ ಮೇಲೆ ಅನೇಕ ಪೋಲಿಸ್ ಕೇಸ್ ಹಾಕಿದ್ದಾರೆ, ರ್ವುಡಿ ಲಿಸ್ಟ್ ಮಾಡಿದ್ದಾರೆ ಹಾಲಿ ಜೋಗ್ ಪಾಲ್ಸ್ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಅವರು ಪ್ರೀತಿಯಿಂದ ನಿಮಗೆ ಬೋಜನ ತಯಾರಿಸಿ ಕಾಯುತ್ತಿದ್ದಾರೆ ಅಷ್ಟೆ ಅಲ್ಲ ನಿಮ್ಮ ಪಕ್ಷದ ರಾಜ್ಯ ಪ್ರದಾನ ಕಾಯ೯ದರ್ಶಿ ಆದ ನನ್ನ ಮೇಲೂ ಇದೇ ಲೀಸ್ಟ್ ಇದೆ " ಅಂದಾಗ ಶ್ರೀನಿವಾಸ ಪ್ರಸಾದರು ಎನಕೋಡರ ಮನೆಯ ಊಟಕ್ಕೆ ಹೊರಟರು ಮತ್ತೆ ತಹಸೀಲ್ದಾರ್ ಮತ್ತು ಸಬ್ ಇನ್ಸ್ಪೆಕ್ಟರ್ ಗೆ ತುರ್ತುಪರಿಸ್ಥಿತಿಯಲ್ಲಿ ಜಾರ್ಜ್ ಪನಾ೯೦ಡಿಸ್ ರನ್ನು ರೈಲು ಉಡಾಯಿಸಲು ಬಾ೦ಬ್ ಹಾಕಿದ್ದರೆಂದು ತಿಹಾರ್ ಜೈಲಿನಲ್ಲಿಟ್ಟಿದ್ದರು ಆಗ ನಡೆದ ಚುನಾವಣೆಯಲ್ಲಿ ಜೈಲಿಂದಲೇ ಬಿಹಾರದಿಂದ ಲೋಕಸಭೆಗೆ ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗಿರಲಿಲ್ವೆ?.... ಅಂತ ಹೇಳುತ್ತಾ ಎದ್ದು ಬಂದರು.
(ನಾಳೆ ಮುಂದಿನ ಭಾಗ)
Comments
Post a Comment