Skip to main content

Blog number 1143. ಕುವೆಂಪು ಅವರ 118ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪು ಅವರ ನೆನಪುಗಳು

#ಕುವೆಂಪು_ಕನ್ನಡದ_ಕಂಪು

#ಶಿವಮೊಗ್ಗ_ಜಿಲ್ಲೆಯ_ಜನರಿಗೆ_ಹೆಮ್ಮೆ

#ಇವತ್ತು_ಅವರ_ಜನ್ಮದಿನಾಚಾರಣೆ

#ಅವರು_ಹುಟ್ಟಿದ_ಕುಪ್ಪಳ್ಳಿ_ಮನೆ_ಅವರ_ಸಮಾದಿ_ದರ್ಶನ

#ಅವರ_ಸಾಹಿತ್ಯದ_ಓದು_ಲಭ್ಯ

#ಕುವೆಂಪು_ಅವರನ್ನು_ಕುಹಕವಾಡುವ_ಕನ್ನಡಿಗರು_ಅವರ_ಸಾಹಿತ್ಯ_ಓದಿದ್ದಾರ_ಎಂಬ_ಅನುಮಾನ.

#ಅವರು_ಕೆಳದಿ_ಸಂಸ್ಥಾನದ_ನಿಜ_ಕಥೆಯನ್ನು_ಶೇಕ್ಸಪಿಯರ್_ಹ್ಯಾಮ್ಲೆಟ್_ನಾಟಕದ_ಜೊತೆ_ಸಮೀಕರಿಸಿದ_ರಕ್ತಾಕ್ಷಿ_ನಾಟಕ.

#ಕುವೆಂಪು_ನುಡಿ_ನಡೆ_ಕೃತಿ_ಬಿನ್ನವಾಗಿಲ್ಲದ_ನಮ್ಮ_ಹೆಮ್ಮೆಯ_ರಾಷ್ಟ್ರಕವಿ 

#ಕುವೆಂಪು_ಅಂತಿಮ_ಸಂಸ್ಕಾರದಲ್ಲಿ_ಭಾಗವಹಿಸುವ_ಅವಕಾಶ_ತಪ್ಪಿದ್ದು.

#ಕವಿಶೈಲ_ಲೋಕಾರ್ಪಣೆಯಲ್ಲಿ_ಭಾಗವಹಿಸಿದ್ದು.

#ಮೈಸೂರು_ತಾಳಗುಪ_ಎಕ್ಸಪ್ರೆಸ್_ರೈಲಿಗೆ_ಕುವೆಂಪು_ನಾಮಕರಣಕ್ಕೆ_ಕಾರಣರಾದ_ಖ್ಯಾತ_ಪತ್ರಕರ್ತ_ಡಿ_ಪಿ_ಸತೀಶ್

#ಕವಿಶೈಲದ_ಗೈಡ್_ಮಾನಪ್ಪರ_ನೆನಪುಗಳು

   ಕುವೆಂಪು ಅವರ 118ನೇ ಜನ್ಮ ದಿನಾಚಾರಣೆ ಇವತ್ತು (29- ಡಿಸೆಂಬರ್ -1904) ಇಡೀ ಕನ್ನಡಿಗರಲ್ಲಿ ಕುವೆಂಪು ಪದ್ಯ, ಹಾಡು, ನಾಟಕ, ಕಥೆ, ಕಾದಂಬರಿಯ ಮೂಲಕ ಅವರು ಜೀವಂತ ಇರುವ ಏಕೈಕ ಕನ್ನಡಿಗರ ಕಣ್ಮಣಿ ಕವಿಗಳು.
   ಪ್ರಾಥಮಿಕ ಶಿಕ್ಷಣದ ಪಠ್ಯದಿಂದ ಪ್ರಾರಂಭ ಆಗಿ ಈಗಿನ 57 ವಷ೯ದ ನನ್ನ ಜೀವನದಲ್ಲಿ ಅವರ ಎಲ್ಲಾ ಸಾಹಿತ್ಯಗಳ ಸಂಗ್ರಹ ಓದು ಮತ್ತೆ ಮತ್ತೆ ಮಾಡುತ್ತಲೇ ಇರುತ್ತೇನೆ.
   ಕವಿಶೈಲದ ಬೇಟಿ ಮಾಡಿದಾಗೆಲ್ಲ ಹೊಸದಾಗಿ ಅಲ್ಲಿನ ದರ್ಶನ ಮಾಡಿದ೦ತೆ ಅನ್ನಿಸುತ್ತಲೇ ಇರುತ್ತದೆ.
   ಅವರ ಸಮಾದಿ ಸ್ಥಳದಲ್ಲಿದ್ದ ಗೈಡ್ ಮಾನಪ್ಪರ ಬಾಯಲ್ಲಿ ಕುವೆಂಪು ಬರೆದ ಸಾಹಿತ್ಯದ ತುಣುಕಗಳ ಜೊತೆ ಕುವೆಂಪು ಅವರಿಗೆ ಜೋಗುಳ ಹಾಡಿ ಮಲಗಿಸುವಂತ ಅನುಭೂತಿ ಆಗದೇ ಇರುತ್ತಿರಲಿಲ್ಲ ಎರೆಡು ವರ್ಷದ ಹಿಂದೆ ನನಗೆ ಅಚ್ಚುಮೆಚ್ಚಾದ ಗೈಡ್ ಮಾನಪ್ಪ ಇಹಲೋಕ ತ್ಯಜಿಸಿದ್ದಾರೆ.
  ಅಲ್ಲಿಗೆ ಸಮೀಪದಲ್ಲೇ ಅವರ ಪುತ್ರ ಕನ್ನಡಿಗರ ಹೆಮ್ಮೆಯ ಪೂಣ೯ಚಂದ್ರ ತೇಜಸ್ವಿ ಸಮಾದಿ ಇದೆ ಹಾಗಂತ ಇವರಾರು ತಮ್ಮ ಸ್ಮಾರಕ ಬಯಸಿದವರಲ್ಲ, ಕೀರ್ತಿ ಶನಿಯ ಬೆನ್ನುಬಿದ್ದವರಲ್ಲ ಅವರ ಸಾಹಿತ್ಯದಿಂದಲೇ ಅವರನ್ನು ಆರಾದಿಸಿದ ಸಮಸ್ತ ಕನ್ನಡಿಗರು ಇವರನ್ನು ಸ್ಮಾರಕವಾಗಿ ಉಳಿಸಿದ್ದಾರೆ.
   ಬಿಜೆಪಿಯ ಅಮಿತ್ ಶಾ ಕೂಡ ಸಮಾದಿಗೆ ನಮಿಸಿದ್ದಾರೆ.
  1994 ರ ನವೆಂಬರ್ 11 ಕ್ಕೆ ಮೈಸೂರಲ್ಲಿ ಕುವೆಂಪುರವರು ಅಸ್ತಂಗತರಾದಾಗ ಅವರ ಪಾರ್ಥಿವ ಶರೀರವನ್ನು ಕುಪ್ಪಳ್ಳಿಗೆ ತ೦ದು ಸಮಾಧಿ ಮಾಡುವ ಸರ್ಕಾರದ ತೀರ್ಮಾನದಲ್ಲಿ ಆಗಿನ ಮಾಜಿ ಜಿಲ್ಲಾ ಮಂತ್ರಿ ಕಾಗೋಡು ತಿಮ್ಮಪ್ಪನವರ ಪಾತ್ರವೂ ದೊಡ್ಡದೆ. 
   ಆಗ ವಿಧಾನ ಸಭಾ ಚುನಾವಣೆ ಘೋಷಣೆ ಆಗಿ ಪ್ರಚಾರದ ಸಭೆಗಳ ಮದ್ಯದಲ್ಲಿ ಕಾಗೋಡು ಕುಪ್ಪಳ್ಳಿಗೆ ಹೋಗಲು ನನ್ನ ಕರೆದದ್ದು ನನ್ನ ಭಾಗ್ಯ ಅನ್ನಿಸಿತ್ತು ಆದರೆ ಎಲ್ಲಾ ಕಾಲದಲ್ಲೂ ಅಧಿಕಾರಸ್ಥರ ಮತ್ತು ರಾಜಕಾರಣಿಗಳ ಸುತ್ತುವರಿದಿರುವ ಮುಳ್ಳಿನ ಕಳೆಗಳಂತ ವ್ಯಕ್ತಿ ಕುವೆಂಪು ಸಾಹಿತ್ಯವೇ ಓದದವರು ಕಾಗೋಡರ ಕಿವಿ ಕಚ್ಚಿ ಅರುಣ್ ಪ್ರಸಾದ್ ಗೆ ಇಲ್ಲಿ ಪ್ರಚಾರದ ಜವಾಬ್ದಾರಿ ಜಾಸ್ತಿ ಇದೆ ಇಲ್ಲೇ ಇರಬೇಕಾಗಿದೆ ಎಂದು ಕಾಗೋಡರಿಂದ ಆ ಪರ್ಮಾನು ಹೊರಡಿಸಿ ತಾವು ಅವರ ಜೊತೆ ಹೋದಾಗ ನಿರಾಸೆ ಆಗಿತ್ತು.
  ನಂತರ ಕುಪ್ಪಳ್ಳಿ ಕವಿ ಮನೆಯ ಕವಿಶೈಲ ಸ್ಮಾರಕವಾಗಿಸಿ ಲೋಕಾರ್ಪಣೆ ಸಮಾರಂಭಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ನಾವೆಲ್ಲ ವಿಶೇಷ ಆಹ್ವಾನಿತ ರೆಂಬ ಪಾಸ್ ನೀಡಿದ್ದರು ಆದರೆ ಅವತ್ತಿನ ಜಿಲ್ಲಾ ಪಂಚಾಯತ್ ಸದಸ್ಯರುಗಳು ಈ ಐತಿಹಾಸಿಕ ಘಟನೆಗೆ ಸಾಕ್ಷಿ ಆಗಬಹುದಾದ ಅಪೂರ್ವ ಅವಕಾಶ ಬಳಸಿಕೊಳ್ಳಲಿಲ್ಲ.
  ನಾನು ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪ ಮತ್ತು ಖ್ಯಾತ ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರನ್ನು ಅಲ್ಲಿಗೆ ಕರೆದೊಯ್ದು ಅವರನ್ನು ಮೊದಲ ಸಾಲಲ್ಲಿ ಕುಳ್ಳಿರಿಸಿ ಹಿಂದಿನ ಕೊನೆಯ ಸಾಲಿನಲ್ಲಿ ಕುಳಿತವನು ಅಚಾನಕ್ಕಾಗಿ ಪಕ್ಕದಲ್ಲಿ ಬಂದು ಎರೆಡೂ ಕೈ ಅವರ ತಲೆಯ ಹಿಂದಕ್ಕೆ ಕಟ್ಟಿ  ಕುಳಿತ ಜೀನ್ಸ್ ದಾರಿ - ಗಡ್ಡದಾರಿ- ಕವಳದ ರಸಗ್ರಾಹಿ ಯಾರು ಅಂತ ನೋಡಿದರೆ ಎಂತಹ ಆಶ್ಚರ್ಯ ಅದು ತೇಜಸ್ವಿ !!
ಇಲ್ಲಿ ಆ ಸಂದರ್ಭ ದಾಖಲಾದ ಬ್ಲಾಗ್ ಕ್ಲಿಕ್ ಮಾಡಿ ನೋಡಬಹುದು https://arunprasadhombuja.blogspot.com/2022/01/blog-post_30.html ಅವತ್ತಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (ತೀರ್ಥಹಳ್ಳಿ ತಾಲ್ಲೂಕಿನ ಅಳಿಯರೂ ಹೌದು) ಕವಿಶೈಲ ಲೋಕಾರ್ಪಣೆ ಮಾಡಿದ ಕ್ಷಣಗಳು ನನ್ನ ಕಣ್ಣಿನಲ್ಲಿ ಸೆರೆ ಹಿಡಿದ ಸಾಕ್ಷಿ ಆದೆ.
 ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವತ್ತು ಕುವೆಂಪು ಅವರ ಕಥೆ ಕವನಗಳ ಆಯ್ದ ಭಾಗಗಳನ್ನು ರಸವತ್ತಾಗಿ ಹೇಳುತ್ತಾ ಅವರು ಮಾಡಿದ ಸರ್ವಕಾಲಿಕವಾಗಿ ದಾಖಲೆಯ ಮಾತುಗಳು ಅಲ್ಲಿ ಕುವೆಂಪು ಅವರನ್ನು ಜೀವಂತಗೊಳಿಸಿದ್ದು ಸುಳ್ಳಲ್ಲ.
  ನಂತರ  ದೇವನೂರು ಅವರ ಜೊತೆ ಪೋನಿನಲ್ಲಿ ನಾನು ಕೇಳಿದ ಪ್ರಶ್ನೆ ಪ್ರಶಸ್ತಿ ಸ್ವೀಕರಿಸದ ನೀವು ಕುವೆಂಪು ಪ್ರಶಸ್ತಿ ಸ್ವೀಕರಿಸುತ್ತೀರಾ? ಎಂದಾಗ ಅವರ ಉತ್ತರ ಬೇರಾವುದೆ ಪ್ರಶಸ್ತಿ ಸ್ವೀಕರಿಸುವುದಿಲ್ಲ ಆದರೆ ಕುವೆಂಪು ಪ್ರಶಸ್ತಿ ನಿರಾಕರಿಸುವುದಿಲ್ಲ ಎಂದದ್ದು.
  ಕುವೆಂಪು ವಿಶ್ವವಿದ್ಯಾಲಯದ ಪ್ರಾರಂಭದ ದಿನಗಳಲ್ಲಿ ಸಾಕ್ಷಿ ಆದ ತೀರ್ಥಹಳ್ಳಿಯವರೇ ಆದ ಕುವೆಂಪು ಅಭಿಮಾನಿ ಸಾಹಿತಿ ಶ್ರೀಕಂಠ ಕೂಡಿಗೆ ಅವರ ಸಂದರ್ಶನದಲ್ಲಿ.
   ಇತ್ತೀಚಿಗೆ ನಮ್ಮ ಆನಂದಪುರಂನಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಮೈಸೂರು - ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ನಾಮಕರಣಕ್ಕೆ ಕಾರಣರಾದ ಖ್ಯಾತ ಪತ್ರಕರ್ತ ಡಿ.ಪಿ. ಸತೀಶರಿಗೆ ಸನ್ಮಾನಿಸಿದ್ದು.
  ಶಿವಮೊಗ್ಗ ಮುನೀರ್ ನೆನಪಿನ ಸರಣಿ ಲೇಖನದಲ್ಲಿ  ಮೈಸೂರಲ್ಲಿ ರಕ್ತಾಕ್ಷಿ ನಾಟಕ ಪ್ರದರ್ಶನದಲ್ಲಿ ಅವರು ರಕ್ತಾಕ್ಷಿ ಪಾತ್ರ ಮಾಡಿದ್ದು, ಅದನ್ನು ನೋಡಲು ಬಂದ ಕುವೆಂಪು ಕೊನೆಯ ತನಕ ಕುಳಿತದ್ದು ಮುನೀರ್ ವಿವರಿಸಿದಾಗ ನಾನು ಬರೆದದ್ದು ಇವೆಲ್ಲ ನನ್ನ ಕುವೆಂಪು ಅವರ ನೆನಪಿನ ಸಾಂಗತ್ಯವಾಗಿ ಅವರ 118ನೇ ಹುಟ್ಟು ಹಬ್ಬದ ನೆನಪುಗಳಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ